ETV Bharat / city

ದುರಸ್ತಿಗಾಗಿ ಕಾದಿವೆ ದ.ಕನ್ನಡ ಜಿಲ್ಲೆಯ 62 ಸರ್ಕಾರಿ ಶಾಲೆಗಳು - ದುರಸ್ತಿಗಾಗಿ ಕಾದಿವೆ ದ ಕನ್ನಡ ಜಿಲ್ಲೆಯ 62 ಸರ್ಕಾರಿ ಶಾಲೆಗಳು

ಮೇ.16 ರಿಂದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳು ಕಾರ್ಯಾರಂಭಿಸಿವೆ. ವಿದ್ಯಾರ್ಥಿಗಳು ಸಹ ಉತ್ಸಾಹದಿಂದ ಶಾಲೆಗೆ ಬರುತ್ತಿದ್ದಾರೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ 1,071 ಸರ್ಕಾರಿ ಶಾಲೆಗಳ ಪೈಕಿ 62 ಶಾಲೆಗಳಿಗೆ ಹಾನಿಯಾಗಿದ್ದು, ತುರ್ತಾಗಿ ದುರಸ್ತಿ ಕಾರ್ಯ ನಡೆಸಬೇಕಿದೆ.

ಶಿಥಿಲಗೊಂಡ ಶಾಲಾ ಕಟ್ಟಡ
ಶಿಥಿಲಗೊಂಡ ಶಾಲಾ ಕಟ್ಟಡ
author img

By

Published : May 19, 2022, 9:29 AM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣ ಇಲಾಖೆಯು ಶಿಥಿಲಗೊಂಡಿರುವ 62 ಶಾಲೆಗಳನ್ನು ಪಟ್ಟಿ ಮಾಡಿ ದುರಸ್ತಿಗಾಗಿ ಸರ್ಕಾರಕ್ಕೆ ರೂ 1.75 ಕೋಟಿಗಳ ಪ್ರಸ್ತಾವನೆ ಸಲ್ಲಿಸಿದೆ. ಜಿಲ್ಲೆಯಲ್ಲಿ 1,071 ಸರ್ಕಾರಿ ಶಾಲೆಗಳಿದ್ದು, ಇದರಲ್ಲಿ ಮೂರು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ.

1,071 ಸರ್ಕಾರಿ ಶಾಲೆಗಳಲ್ಲಿ 62 ಶಾಲೆಗಳಿಗೆ‌ ತುರ್ತಾಗಿ ದುರಸ್ತಿ ಕಾರ್ಯ ನಡೆಸಬೇಕಿದೆ. ಈ ದುರಸ್ತಿ ಕಾರ್ಯ ನಡೆಯದೆ ಶಿಥಿಲವಸ್ಥೆಯಲ್ಲಿದ್ದ ಉಳ್ಳಾಲದ ಕಿನ್ಯ ಶಾಲೆಯ ಕಟ್ಟಡದ ಒಂದು ಭಾಗ ನಿನ್ನೆಯಷ್ಟೆ ಕುಸಿದು ಬಿದ್ದಿದೆ.

ಶಿಥಿಲಗೊಂಡ ಶಾಲಾ ಕಟ್ಟಡ

ಜಿಲ್ಲೆಯ ದುರಸ್ತಿಗೊಳ್ಳಬೇಕಾದ 62 ಶಾಲೆಗಳಲ್ಲಿ 15 ಬಂಟ್ವಾಳ ತಾಲೂಕಿನಲ್ಲಿ, 5 ಬೆಳ್ತಂಗಡಿ ತಾಲೂಕಿನಲ್ಲಿ, 14 ಮಂಗಳೂರು ತಾಲೂಕಿನಲ್ಲಿ, 9 ಮೂಡಬಿದ್ರೆ ತಾಲೂಕಿನಲ್ಲಿ, 10 ಪುತ್ತೂರು ತಾಲೂಕಿನಲ್ಲಿ, 9 ಸುಳ್ಯ ತಾಲೂಕಿನಲ್ಲಿವೆ. ಬಂಟ್ವಾಳ ತಾಲೂಕಿಗೆ 25 ಲಕ್ಷ, ಬೆಳ್ತಂಗಡಿ ತಾಲೂಕಿಗೆ 25 ಲಕ್ಷ, ಮಂಗಳೂರು ತಾಲೂಕಿಗೆ 50 ಲಕ್ಷ, ಮೂಡಬಿದ್ರೆ ತಾಲೂಕಿಗೆ 25 ಲಕ್ಷ, ಪುತ್ತೂರು ತಾಲೂಕಿಗೆ 25 ಲಕ್ಷ, ಸುಳ್ಯ ತಾಲೂಕಿಗೆ 25 ಲಕ್ಷ ರೂ. ಅಂದಾಜು ಖರ್ಚು ಎಂದು ನಿಗದಿಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ.

ಇದನ್ನೂ ಓದಿ: ತುಮಕೂರು: ಹೊಳೆಯಂತಾದ ರಸ್ತೆ, ತುಂಬಿ ಹರಿವ ಹಳ್ಳಕೊಳ್ಳ, ಗ್ರಾಮೀಣ ಶಾಲೆಗಳಿಗೆ ರಜೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.