ಉಳ್ಳಾಲ(ದಕ್ಷಿಣ ಕನ್ನಡ): ಮಂಗಳೂರು ದಸರಾ ಮುಗಿಸಿ ವಾಪಸಾಗುತ್ತಿದ್ದ ಇಬ್ಬರು ಯುವಕರು ಬೈಕ್ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೆ.ಸಿ ರೋಡ್ ಬಳಿ ಶುಕ್ರವಾರ ತಡರಾತ್ರಿ ಸಂಭವಿಸಿದೆ.
ಕಾಸರಗೋಡು ಜಿಲ್ಲೆಯ ಕುಂಬ್ಳೆ ನಿವಾಸಿಗಳಾದ ಕೃಷ್ಣಪ್ರಸಾದ್ (26) ಮತ್ತು ಪ್ರಜೀತ್ (24) ಮೃತರು. ನಿನ್ನೆ ರಾತ್ರಿ ಇವರಿಬ್ಬರು ದಸರಾ ಕಾರ್ಯಕ್ರಮ ವೀಕ್ಷಿಸಿ ವಾಪಸಾಗುತ್ತಿದ್ದ ವೇಳೆ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿರುವುದಾಗಿ ತಿಳಿದುಬಂದಿದೆ.
ಇದನ್ನೂ ಓದಿ: ವಾಯುಭಾರ ಕುಸಿತ: ಇಂದು, ನಾಳೆ ಕರ್ನಾಟಕದ 16 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಯುವಕರಿಬ್ಬರ ರಕ್ಷಣೆಗೆ ಧಾವಿಸಿದ ಕಾರು ಚಾಲಕನ ವಿರುದ್ಧವೇ ಸ್ಥಳೀಯರು ಆರೋಪಿಸಿದ್ದು, ಪೊಲೀಸರ ವಿಚಾರಣೆ ವೇಳೆ ಆತನ ತಪ್ಪಿಲ್ಲವೆಂದು ತಿಳಿದುಬಂದಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹೆಲ್ಮೆಟ್ ಧರಿಸಿರಲಿಲ್ಲ:
ಇಬ್ಬರೂ ಹೆಲ್ಮೆಟ್ ಧರಿಸದೇ ಇರುವುದರಿಂದ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕುಂಬಳೆ ಕಡೆಗೆ ತೆರಳುವ ಸಂದರ್ಭ ಕಾರೊಂದು ಬೈಕ್ಗೆ ಸ್ವಲ್ಪ ತಾಗಿದ್ದು, ಇದರಿಂದ ಗಾಬರಿಗೊಂಡ ಪರಿಣಾಮ ಕೆ.ಸಿ. ರೋಡ್ ಸೇತುವೆಗೆ ಬೈಕ್ ಡಿಕ್ಕಿ ಹೊಡೆದಿದೆ ಎನ್ನಲಾಗ್ತಿದೆ.
ನಾಗುರಿ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ, ಬೈಕ್ ಸ್ಕಿಡ್ ಆಗಿದ್ದಾ? ಅಥವಾ ಕಾರು ಡಿಕ್ಕಿ ಹೊಡೆದಿದೆಯೋ ? ಎನ್ನುವ ಕುರಿತು ತನಿಖೆ ನಡೆಸುತ್ತಿದ್ದಾರೆ.