ಮಂಗಳೂರು: ಕೋವಿಡ್ ಸಂಕಷ್ಟ ಕಾಲದಲ್ಲಿ ಮತ್ತೆರಡು ಹಡಗಿನ ಮೂಲಕ ಆಮ್ಲಜನಕವನ್ನು ಮಂಗಳೂರಿನ ನವಮಂಗಳೂರಿಗೆ ತರಲಾಗಿದೆ.
ಐಎನ್ಎಸ್ ಕೊಚ್ಚಿ ಹಾಗೂ ಇನ್ ಸ್ಟಾಬಾರ್ ಎಂಬ ಎರಡು ಹಡಗಿನ ಮೂಲಕ ತಲಾ 20 ಮೆಟ್ರಿಕ್ ಟನ್ ಆಮ್ಲಜನಕದ ಐದು ಕಂಟೈನರ್ಗಳನ್ನು ಹೊತ್ತು ತರಲಾಗಿದೆ. ಐಎನ್ಎಸ್ ಕೊಚ್ಚಿ 20 ಮೆಟ್ರಿಕ್ ಟನ್ ಆಕ್ಸಿಜನ್ನ 3 ಕಂಟೈನರ್ ಬಂದಿದ್ದು, ಜೊತೆಗೆ ಒಂದು ಟನ್ ಗಾತ್ರದ 40 ಆಕ್ಸಿಜನ್ ಸಿಲಿಂಡರ್ಗಳು, 10ಲೀ. ಗಾತ್ರದ ಎರಡು ಹೈಫ್ಲೋ ಆಮ್ಲಜನಕ ಬಂದಿದೆ.
ಅದೇ ರೀತಿ ಇನ್ ಸ್ಟಾಬಾರ್ ಹಡಗಿನಲ್ಲಿ 20 ಮೆಟ್ರಿಕ್ ಟನ್ ಆಕ್ಸಿಜನ್ನ 2 ಕಂಟೈನರ್ಗಳು ಹಾಗೂ ಜೊತೆಗೆ ಒಂದು ಟನ್ ಗಾತ್ರದ 30 ಆಕ್ಸಿಜನ್ ಸಿಲಿಂಡರ್ಗಳು ಬಂದಿಳಿದಿದೆ. ಈ ಎರಡೂ ಹಡಗು ಕುವೈತ್ ನ ರುವೈಕ್ ಎಂಬ ಬಂದರಿನಿಂದ ಮೇ 6ರಂದು ಆಗಮಿಸಿದ್ದು, ಇಂದು ಎನ್ಎಂಪಿಟಿ ತಲುಪಿದೆ. ಇಲ್ಲಿಯವರೆಗೆ ಸಮುದ್ರ ಸೇತು ಕಾರ್ಯಾಚರಣೆ ಅಡಿ ಪ್ರಾಣವಾಯು ಆಮ್ಲಜನಕವನ್ನು ಹೊತ್ತೊಯ್ದ ನಾಲ್ಕು ಹಡಗುಗಳು ಭಾರತ ತಲುಪಿವೆ.