ETV Bharat / city

ಮಂಗಳೂರು: ದುಬೈನಿಂದ 10.25 ಲಕ್ಷ ರೂ. ಅಕ್ರಮ ಚಿನ್ನ ಕಳ್ಳ ಸಾಗಾಟ ಪ್ರಯತ್ನ - 192.320 ಗ್ರಾಂ ತೂಕದ 24 ಕ್ಯಾರೆಟ್ 10,25,066 ಲಕ್ಷ ರೂ. ಚಿನ್ನ ವಶ

ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದವನನ್ನು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

10.25 lakh from Dubai. Illegal smuggling attempt
ಮಂಗಳೂರು: ದುಬೈನಿಂದ 10.25 ಲಕ್ಷ ರೂ. ಅಕ್ರಮ ಚಿನ್ನ ಕಳ್ಳ ಸಾಗಾಟ ಪ್ರಯತ್ನ
author img

By

Published : Apr 23, 2022, 10:59 PM IST

ಮಂಗಳೂರು: ಲೇಡಿಸ್ ಹ್ಯಾಂಡ್ ಬ್ಯಾಗ್​ನ ಮೆಟಲ್ ರಾಡ್​ನಲ್ಲಿ 10.25 ರೂ. ಚಿನ್ನ ಬಚ್ಚಿಟ್ಟು ಅಕ್ರಮವಾಗಿ ಸಾಗಾಟ ಮಾಡಲು ಪ್ರಯತ್ನಿಸಿದವರನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ದುಬೈನಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಈ ಸಂದರ್ಭ ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಆತ ಲೇಡಿಸ್ ಹ್ಯಾಂಡ್ ಬ್ಯಾಗ್​ನ ಕೈಯಲ್ಲಿದ್ದ ಮೆಟಲ್ ರಾಡ್​ನೊಳಗೆ ಬಚ್ಚಿಟ್ಟು ಚಿನ್ನ ಸಾಗಾಟ ಮಾಡುತ್ತಿರುವುದು‌ ಪತ್ತೆಯಾಗಿದೆ.

ತಕ್ಷಣ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕ ಹಾಗೂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಪ್ರಯಾಣಿಕನಿಂದ 192.320 ಗ್ರಾಂ ತೂಕದ 24 ಕ್ಯಾರೆಟ್ 10,25,066 ಲಕ್ಷ ರೂ. ಚಿನ್ನ ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬಳ್ಳಾರಿಯಲ್ಲಿ ನಿಲ್ಲದ ಕ್ರಿಕೆಟ್​ ಬೆಟ್ಟಿಂಗ್​ ದಂಧೆ, 18 ಕೇಸ್​ ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.