ETV Bharat / city

ತಮ್ಮ ಸುದ್ದಿ ಬಿತ್ತರವಾಗದೆ ಹತಾಶರಾದ್ರೆ ದಾರಿ ತಪ್ಪೋದು ಸಹಜ: ಕಟೀಲ್​ ಬಗ್ಗೆ ಪ್ರಿಯಾಂಕ್ ಖರ್ಗೆ ವ್ಯಂಗ್ಯ - mla priyank kharge criticizes nalin

ನಳಿನ್​ ಕುಮಾರ್ ಕಟೀಲ್​ಗಿಂತಲೂ ಯತ್ನಾಳ್​​ ಸುದ್ದಿಗಳು ಹೆಚ್ಚು ಬಿತ್ತರವಾಗ್ತಿವೆ. ಸುದ್ದಿ ಬಿತ್ತರವಾಗದೆ ಇರೋದ್ರಿಂದ ವ್ಯಕ್ತಿ ಹತಾಶರಾದ್ರೆ ದಾರಿ ತಪ್ಪುವುದು ಸಹಜ. ದಾರಿ ತಪ್ಪಿದಾಗ ಈ ರೀತಿಯ ಹೇಳಿಕೆ ನೀಡ್ತಾರೆ ಎಂದು ಕಟೀಲ್ ವಿರುದ್ಧ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.

Priyank Kharge
ಶಾಸಕ ಪ್ರಿಯಾಂಕ್ ಖರ್ಗೆ
author img

By

Published : Oct 21, 2021, 1:39 PM IST

ಕಲಬುರಗಿ: ಮಾಧ್ಯಮದವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್ ಅವರ ಸುದ್ದಿಯನ್ನು ಹೆಚ್ಚು ಬಿತ್ತರ ಮಾಡುತ್ತಿಲ್ಲ. ಬಿಜೆಪಿ ಅಧ್ಯಕ್ಷರಾದ್ರೂ ಅವರಿಗೆ ಪಕ್ಷದಲ್ಲಿ, ಮಾಧ್ಯಮದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಶಾಸಕ ಪ್ರಿಯಾಂಕ್​ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಅವರು ಕಟೀಲ್​ ಅವರನ್ನು ಸೈಡ್ ಲೈನ್ ಮಾಡಿದ್ದಾರೆ. ಕಟೀಲ್​ಗಿಂತಲೂ ಯತ್ನಾಳ್​​ ಸುದ್ದಿಗಳು ಹೆಚ್ಚು ಬಿತ್ತರವಾಗ್ತಿವೆ. ಹಾಗಾಗಿ ಸುದ್ದಿ ಬಿತ್ತರವಾಗದೆ ಇರೋದ್ರಿಂದ ವ್ಯಕ್ತಿ ಹತಾಶರಾದ್ರೆ ದಾರಿ ತಪ್ಪುವುದು ಸಹಜ. ದಾರಿ ತಪ್ಪಿದಾಗ ಕೆಲವರು ಮದ್ಯಪಾನ, ಡ್ರಗ್ಸ್ ಸೇವನೆ ಮಾಡುತ್ತಾರೆ. ಇನ್ನೂ ಕೆಲವರು ಈ ರೀತಿಯ ಹೇಳಿಕೆ ನೀಡ್ತಾರೆ ಎಂದು ನಳಿನ್​ ಕುಮಾರ್​ ಕಟೀಲ್ ವಿರುದ್ಧ ಶಾಸಕ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.

ಶಾಸಕ ಪ್ರಿಯಾಂಕ್ ಖರ್ಗೆ

ಇತ್ತೀಚಿಗೆ ನಳಿನ್​ಕುಮಾರ್​ ಕಟೀಲ್ ಅವರ ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ಹೇಳಿಕೆ ವಿಚಾರವಾಗಿ ತಿರುಗೇಟು ನೀಡಿದ್ದಾರೆ. ಇವರು ಮಾತನಾಡೋದನ್ನು ನೋಡಿದ್ರೆ ನನಗೆ ಅನುಮಾನ ಬರುತ್ತೆ. ಬಿಜೆಪಿ ಅಧಿಕಾರಕ್ಕೆ ಬಂದ‌ ಮೇಲೆ ಡ್ರಗ್ಸ್ ಸೇವನೆ ಹೆಚ್ಚಾಗ್ತಿದೆ. ದೇಶಾದ್ಯಂತ ಬಿಜೆಪಿ ನಾಯಕರೇ ಡ್ರಗ್ಸ್ ಸೇವನೆಯಲ್ಲಿ ಬಂಧಿತರಾಗಿದ್ದಾರೆ ಎಂದು ಆರೋಪಿಸಿದರು.

ಕಟೀಲ್ ನಿಮಗೆ ನಿಜವಾಗಲು ಶಕ್ತಿ ಇದ್ದರೆ ರಾಹುಲ್ ಗಾಂಧಿಯನ್ನು ಪ್ರಶ್ನೆ ಮಾಡಬೇಡಿ. ಅಮಿತ್ ಶಾ ಅವರಿಗೆ ಕೇಳಿ, ಬೊಮ್ಮಾಯಿ ಸರ್ಕಾರಕ್ಕೆ ಕೇಳಿ. ಕಳೆದ ತಿಂಗಳು ಗುಜರಾತ್​​ನಲ್ಲಿ ಅದಾನಿಗೆ ಸೇರಿದ ಖಾಸಗಿ ಬಂದರ್​ನಲ್ಲಿ ಡ್ರಗ್ಸ್​​ ಸಿಕ್ಕಿದ್ದು, ಇದು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಬರುತ್ತಿದೆ. ಯುವಕರಿಗೆ ಉದ್ಯೋಗ ಕೊಡಿ ಅಂದ್ರೆ ನಶೆ ಕೊಡ್ತಿದ್ದಾರೆ. ಆರ್​ಎಸ್​ಎಸ್​​ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಡ್ರಗ್ಸ್​​ ಹಾವಳಿ ಹೆಚ್ಚಾಗ್ತಿದೆ ಅಂತ ಹೇಳಿದ್ದಾರೆ. ಕಳೆದ ಏಳು ವರ್ಷಗಳಿಂದ ಇವರದ್ದೇ ಸರ್ಕಾರ ಆಳ್ವಿಕೆಯಲ್ಲಿದೆ. ಆದ್ರೆ ಡ್ರಗ್ಸ್​​ ದಂಧೆಗೆ ಕಡಿವಾಣ ಹಾಕೋಕೆ ಆಗ್ತಿಲ್ಲ ಎಂದು ಟೀಕಿಸಿದ್ದಾರೆ.

ಪುಕ್ಸಟ್ಟೆ ಪ್ರಚಾರಕ್ಕೋಸ್ಕರ ವೈಯಕ್ತಿಕವಾಗಿ ಮಾತಾಡಬೇಡಿ:

ಕಟೀಲ್​ ಅವರು ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ನಮ್ಮಲ್ಲೇ ಡಾಕ್ಟರ್ ಇದ್ದಾರೆ, ಚಿಕಿತ್ಸೆ ಕೊಡಿಸುತ್ತೇವೆ. ಮಾನಸಿಕ ಅಸ್ವಸ್ಥತೆಯ ಸಮಸ್ಯೆ ಇದ್ದರೆ ಮುಚ್ಚಿಡಬೇಡಿ. ಆ ಸಮಸ್ಯೆ ಇದ್ರೆ ನಾವು ಚಿಕಿತ್ಸೆ ಕೊಡಿಸುತ್ತೇವೆ. ಅದನ್ನು ಬಿಟ್ಟು ನಮ್ಮ ಲೀಡರ್ ಬಗ್ಗೆ ಮಾತಾಡಿದ್ರೆ ನಾವು ಸಹ ನಿಮ್ಮ ಲೀಡರ್ ಬಗ್ಗೆ ಮಾತನಾಡಬೇಕಾಗುತ್ತದೆ. ನೀವು ನಮ್ಮ ಲೀಡರ್ ಬಗ್ಗೆ ಸಾರ್ವಜನಿಕವಾಗಿ ಹೇಳೋಕೆ ರೆಡಿಯಿದ್ದರೆ, ನಿಮ್ಮ ನಾಯಕರ ಬಗ್ಗೆ ನಾವು ಸಾರ್ವಜನಿಕವಾಗಿ ಹೇಳೋದನ್ನು ಕೇಳೋಕೆ ರೆಡಿ ಇರಬೇಕು. ಪುಕ್ಸಟ್ಟೆ ಪ್ರಚಾರಕ್ಕೋಸ್ಕರ ವೈಯಕ್ತಿಕವಾಗಿ ಮಾತನಾಡಬೇಡಿ ಎಂದು ಬಿಜೆಪಿ ನಾಯಕರಿಗೆ ಪ್ರಿಯಾಂಕ್​ ಖರ್ಗೆ ಎಚ್ಚರಿಕೆ ನೀಡಿದರು.

ಮೋದಿ ಹೆಬ್ಬೆಟ್ಟು ಗಿರಾಕಿ ಹೇಳಿಕೆಗೆ ಸಮರ್ಥನೆ:

ಮೋದಿ ಹೆಬ್ಬೆಟ್ಟು ಗಿರಾಕಿ ವಿಚಾರವನ್ನು ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ, ಹೆಬ್ಬೆಟ್ಟು ಅಸಂವಿಧಾನಿಕ ಪದವಂತೂ ಅಲ್ಲ. ಪ್ರಧಾನಿ ಮೋದಿ ಏನು ಓದಿದ್ದಾರೆ ಅನ್ನೋದು ಆರ್​ಟಿಐ ನಲ್ಲೇ ಕೊಟ್ಟಿಲ್ಲ. ಮೋದಿ ಕ್ಲಾಸ್​ಮೇಟ್ ಯಾರು, ಏನು ಅನ್ನೋದು ಸಹ ಗೊತ್ತಿಲ್ಲ ಎಂದರು.

ಇದನ್ನೂ ಓದಿ: Gauri Lankesh Murder Case; ಆರೋಪಿ ವಿರುದ್ಧದ ಆರೋಪ ಕೈಬಿಡುವ ಹೈಕೋರ್ಟ್‌ ಆದೇಶ ಸುಪ್ರೀಂನಿಂದ ರದ್ದು ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.