ETV Bharat / city

ಮೀನು ಹಿಡಿಯಲು ಹೋಗಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವು - ಕಾಗಿಣಾ ನದಿಯಲ್ಲಿ ಮುಳುಗಿ ಯುವಕ ಸಾವು

ಅಂದಾಜು 22 ವರ್ಷದ ಯುವಕನಾಗಿದ್ದು, ಗೋಧಿ ಬಣ್ಣ ಹೊಂದಿದ್ದಾನೆ ಎಂದು ಹೇಳಲಾಗಿದೆ‌. ಮೃತ ಯುವಕನ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ವಾಡಿ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ..

Death of youth drowns in kagina river
ಮೀನು ಹಿಡಿಯಲು ಹೋಗಿ ಯುವಕ ನೀರಿನಲ್ಲಿ ಮುಳುಗಿ ಸಾವು
author img

By

Published : Feb 23, 2022, 12:08 PM IST

ಕಲಬುರಗಿ : ಸ್ನೇಹಿತರೊಂದಿಗೆ ಮೀನು ಹಿಡಿಯಲು ಹೋದ ಯುವಕ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶಹಾಬಾದ ಸಮೀಪದ ಕಾಗಿಣಾ ನದಿಯಲ್ಲಿ ನಡೆದಿದೆ. ಮೃತ ಯುವಕನನ್ನು ಶಶಿಕಾಂತ ರಾಠೋಡ್ ಎಂದು ಗುರುತಿಸಲಾಗಿದೆ.

ಮೃತ ಶಶಿಕಾಂತ ತನ್ನ ಮೂವರು ಗೆಳೆಯರೊಂದಿಗೆ‌ ಕಾಗಿಣಾ ನದಿಗೆ ಮೀನು ಹಿಡಿಯಲು ‌ಹೋಗಿದ್ದರು. ಈ ವೇಳೆ ಈಜಲು ನೀರಿಗೆ ಹಾರಿದಾಗ ದುರ್ಘಟನೆ ಸಂಭವಿಸಿರುವುದಾಗಿ ತಿಳಿದು ಬಂದಿದೆ.

ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ‌ದ ಸಿಬ್ಬಂದಿ ತೀವ್ರ ಶೋಧ ಕಾರ್ಯದ ಬಳಿಕ ಶವ ಪತ್ತೆಯಾಗಿದೆ. ಈ ಕುರಿತು ಶಾಹಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೀನು ಹಿಡಿಯಲು ಹೋಗಿ ಯುವಕ ನೀರಿನಲ್ಲಿ ಮುಳುಗಿ ಸಾವು

ಅಪರಿಚಿತ ಆತ್ಮಹತ್ಯೆ : ಶಹಾಬಾದ ಕಾಗಿನಾ ಬ್ರಿಡ್ಜ್‌ ಬಳಿಯ ರೈಲ್ವೆ ಹಳಿಗೆ ತಲೆಕೊಟ್ಟು ಅಪರಿಚಿತ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಅಂದಾಜು 22 ವರ್ಷದ ಯುವಕನಾಗಿದ್ದು, ಗೋಧಿ ಬಣ್ಣ ಹೊಂದಿದ್ದಾನೆ ಎಂದು ಹೇಳಲಾಗಿದೆ‌. ಮೃತ ಯುವಕನ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದು, ವಾಡಿ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ಓದಿ : ದೇಶದಲ್ಲಿ 15 ಸಾವಿರ ಕೋವಿಡ್​ ಸೋಂಕಿತರು ಪತ್ತೆ: 278 ಮಂದಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.