ETV Bharat / city

ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ: ನಾಳೆ ಕಲಬುರಗಿ ಬಂದ್​ಗೆ ಕರೆ

author img

By

Published : Dec 18, 2019, 11:20 AM IST

ದೇಶದಲ್ಲಿ ಪೌರತ್ವ ಕಾಯ್ದೆ ವಿರುದ್ಧದ ಕಿಚ್ಚು ಜೋರಾಗಿದ್ದು, ಎಡ ಪಕ್ಷಗಳು ಡಿಸೆಂಬರ್ 19ರಂದು ದೇಶಾದ್ಯಂತ ಕರೆ ನೀಡಿರುವ ಮುಷ್ಕರ ಬೆಂಬಲಿಸಿ ಕಲಬುರಗಿಯಲ್ಲಿ ನಾಳೆ ಬಂದ್​​ಗೆ ಕರೆ ನೀಡಲಾಗಿದೆ.

Kn_klb_01_Kalaburgi_band_no_permission_pkg_9023578
ಪೌರತ್ವ ಕಾಯ್ದೆ ತಿದ್ದುಪಡಿಗೆ ವಿರೋಧ: ಡಿ.19 ಕಲಬುರಗಿ ಬಂದ್

ಕಲಬುರಗಿ: ದೇಶದಲ್ಲಿ ಪೌರತ್ವ ಕಾಯ್ದೆ ವಿರುದ್ಧದ ಕಿಚ್ಚು ಜೋರಾಗಿದ್ದು, ಎಡ ಪಕ್ಷಗಳು ಡಿಸೆಂಬರ್ 19ರಂದು ದೇಶಾದ್ಯಂತ ಕರೆ ನೀಡಿರುವ ಮುಷ್ಕರ ಬೆಂಬಲಿಸಿ ಕಲಬುರಗಿಯಲ್ಲಿ ನಾಳೆ ಬಂದ್​​ಗೆ ಕರೆ ನೀಡಲಾಗಿದೆ.

ದೇಶದಲ್ಲಿ ಪೌರತ್ವ ಮಸೂದೆ ತಿದ್ದುಪಡಿ ವಿರುದ್ಧದ ಕಿಚ್ಚು ದಿನದಿಂದ ದಿನಕ್ಕೆ ಏರುತ್ತಲೆ ಹೊರಟಿದೆ. ಎಡಪಕ್ಷಗಳು ನಡೆಸುತ್ತಿರುವ ಮುಷ್ಕರ ಬೆಂಬಲಿಸಿ ನಾಳೆ ಕಲಬುರಗಿ ಬಂದ್​​ಗೆ ಕರೆ ನೀಡಲಾಗಿದೆ. ಪೀಪಲ್ಸ್ ಫೋರಂ ಸಂಘಟನೆ ನೇತೃತ್ವದಲ್ಲಿ ಬಂದ್ ಕರೆ ನೀಡಲಾಗಿದ್ದು, ಹಲವು ಸಂಘಟನೆಗಳು ಸಾಥ್ ನೀಡುತ್ತಿವೆ. ಡಿ. 19ಕ್ಕೆ ಕಲಬುರಗಿ ಬಂದ್ ಮಾಡುವ ಮೂಲಕ ಮಸೂದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಲಾಗುತ್ತಿದೆ. ಅಂಗಡಿ ಮುಂಗಟ್ಟು, ಶಾಲಾ-ಕಾಲೇಜು, ಅಟೋ ಸಂಚಾರ ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿ ಬೆಂಬಲ ನೀಡುವಂತೆ ಸಂಘಟನೆ ನಾಯಕರು ಕಲಬುರಗಿ ಜನತೆಗೆ ಮನವಿ ಮಾಡಿದ್ದಾರೆ.

ಪೌರತ್ವ ಕಾಯ್ದೆ ತಿದ್ದುಪಡಿಗೆ ವಿರೋಧ: ನಾಳೆ ಕಲಬುರಗಿ ಬಂದ್​ಗೆ ಕರೆ

ಒಂದು ಹಂತದಲ್ಲಿ ಬಂದ್ ಯಶಸ್ವಿಗೊಳಿಸಲು ಪೀಪಲ್ಸ್ ಫೋರಂ ಮುಖಂಡರು ಪ್ರಯತ್ನಿಸುತ್ತಿದ್ದಾರೆ. ಆದರೆ ಬಂದ್​​ಗೆ ಜಿಲ್ಲಾಡಳಿತ ಯಾವುದೇ ಅನುಮತಿ ನೀಡಿಲ್ಲ ಎಂದು ಜಿಲ್ಲಾ ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ. ನಾಳೆ ಕರ್ನಾಟಕ ಲೋಕಸೇವಾ ಆಯೋಗದಿಂದ ಮುಖ್ಯೋಪಾಧ್ಯಯರು, ಶಿಕ್ಷಕರು, ಗ್ರೂಪ್ ಎ ಹಾಗೂ ಗ್ರೂಪ್ ಬಿ ಹುದ್ದೆಗಳಿಗೆ ಲಿಖಿತ ಪರೀಕ್ಷೆ ನಡೆಯಲಿದೆ. ಪೂರ್ವನಿಯೋಜಿತ ಪರೀಕ್ಷೆಗೆ ಹಲವು ಜಿಲ್ಲೆಗಳಿಂದ ಅಭ್ಯರ್ಥಿಗಳು ಹಾಗೂ ಪೋಷಕರು ಆಗಮಿಸಲಿದ್ದಾರೆ. ಬಂದ್ ಕರೆ ನೀಡುವುದರಿಂದ ಅವರಿಗೆ ಸಾರಿಗೆ, ವಸತಿ, ಆಹಾರ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಲಿವೆ. ಇದು ಸಾವಿರಾರು ಜನ ಅಭ್ಯರ್ಥಿಗಳ ಭವಿಷ್ಯದ ಪರೀಕ್ಷೆಯಾಗಿದೆ. ಈ ಕಾರಣಕ್ಕಾಗಿ ಬಂದ್​​​ಗೆ ಸಮ್ಮತಿ ಸೂಚಿಸಿಲ್ಲ ಎಂದು ಎಂ.ಎನ್.ನಾಗರಾಜ್ ಪ್ರಕಟಣೆ ಹೊರಡಿಸಿದ್ದಾರೆ.

Intro:ಕಲಬುರಗಿ: ದೇಶದಲ್ಲಿ ಪೌರತ್ವ ಕಾಯ್ದೆ ವಿರುದ್ಧದ ಕಿಚ್ಚು ಹೆಚ್ಚುತ್ತಲೆ ಹೋರಟಿದೆ. ಎಡ ಪಕ್ಷಗಳು ಡಿಸೆಂಬರ್ 19 ರಂದು ದೇಶಾದ್ಯಂತ ಕರೆ ನೀಡಿರುವ ಮುಷ್ಕರ ಬೆಂಬಲಿಸಿ ಕಲಬುರಗಿಯಲ್ಲಿ ನಾಳೆ ಬಂದ್ ಗೆ ಕರೆ ನೀಡಲಾಗಿದೆ. ಆದ್ರೆ ಬಂದ್ ಗೆ ಜಿಲ್ಲಾಢಳಿತ ಅನುಮತಿ ನೀಡಿಲ್ಲ.Body:ದೇಶದಲ್ಲಿ ಪೌರತ್ವ ಮಸೂದೆ ತಿದ್ದುಪಡಿ ವಿರುದ್ದದ ಕಿಚ್ಚು ದಿನದಿಂದ ದಿನಕ್ಕೆ ಏರುತ್ತಲೆ ಹೊರಟಿದೆ. ಈಶಾನ್ಯ ಭಾರತದಿಂದ ದೇಶವ್ಯಾಪಿ ಪಸರಿಸಿಕೊಂಡ ಹೋರಾಟದ ಕಿಡಿ ಇದೀಗ ಕರ್ನಾಟಕದಲ್ಲಿಯೂ ಕಂಡುಬರುತ್ತಿದೆ. ಎಡಪಕ್ಷಗಳು ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲಿಸಿ ನಾಳೆ ಕಲಬುರಗಿ ಬಂದ್ ಕರೆ ನೀಡಲಾಗಿದೆ. ಪೀಪಲ್ಸ್ ಪೋರಂ ಸಂಘಟನೆ ನೇತೃತ್ವದಲ್ಲಿ ಬಂದ್ ಕರೆ ನೀಡಲಾಗಿದ್ದು, ಹಲವು ಸಂಘಟನೆಗಳು ಸಾಥ್ ನೀಡುತ್ತಿವೆ. ನಾಳೆ ಡಿ.19ಕ್ಕೆ ಕಲಬುರಗಿ ಬಂದ್ ಮಾಡುವ ಮೂಲಕ ಮಸೂದೆ ತಿದ್ದುಪಡಿಗೆ ವಿರೋದ ವ್ಯಕ್ತ ಪಡಿಸಲಾಗುತ್ತಿದೆ. ಅಂಗಡಿ ಮುಂಗಟ್ಟು, ಶಾಲಾ ಕಾಲೇಜು, ಅಟೋ ಸಂಚಾರ ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿ ಬಂದ್ ಗೆ ಬೆಂಬಲ ನೀಡುವಂತೆ ಪೀಪಲ್ಸ್ ಪೋರಂ ಸಂಘಟನೆ ನಾಯಕರು ಕಲಬುರಗಿ ಜನತೆಗೆ ಮನವಿ ಮಾಡಿದ್ದಾರೆ.

ಬೈಟ್ :- ಮಾರುತಿ ಮಾನ್ಪಡೆ, ಪೋರಂ ಮುಖಂಡ

ಒಂದು ಹಂತದಲ್ಲಿ ಬಂದ್ ಯಶಸ್ವಿಗೊಳಿಸಲು ಪೀಪಲ್ಸ್ ಪೊರಂ ಮುಖಂಡರು ಪ್ರಯತ್ನಿಸುತ್ತಿದ್ದಾರೆ. ಆದರೆ ಬಂದ್ ಗೆ ಜಿಲ್ಲಾಢಳಿತ ಯಾವುದೆ ಅನುಮತಿ ನೀಡಿಲ್ಲ ಎಂದು ಜಿಲ್ಲಾ ಪೋಲಿಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ. ನಾಳೆ ಕರ್ನಾಟಕ ಲೋಕಸೇವಾ ಆಯೋಗದಿಂದ ಮುಖ್ಯೋಪಾಧ್ಯಯರು, ಶಿಕ್ಷಕರು, ಗ್ರೂಪ್ ಎ, ಹಾಗೂ ಗ್ರೂಪ್ ಬಿ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಆಯೋಜನೆ ಮಾಡಿದೆ. ಪೂರ್ವ ನಿಯೋಜಿತ ಪರೀಕ್ಷೆಗೆ ಹಲವು ಜಿಲ್ಲೆಗಳಿಂದ ಅಭ್ಯರ್ಥಿಗಳು ಹಾಗೂ ಪೊಷಕರು ಆಗಮಿಸಲಿದ್ದಾರೆ. ಬಂದ್ ಕರೆ ನೀಡುವದರಿಂದ ಅವರಿಗೆ ಸಾರಿಗೆ, ವಸತಿ, ಆಹಾರ ಸೇರಿದಂತೆ ಹಲವು ಸಮಸ್ಸೆಗಳು ಎದುರಾಗಲಿವೆ. ಇದು ಸಾವಿರಾರು ಜನ ಅಭ್ಯರ್ಥಿಗಳ ಭವಿಷ್ಯದ ಪರೀಕ್ಷೆಯಾಗಿದೆ. ಅಲ್ಲದೆ ನಗರದ ಜನರಿಗೆ ದೈನಂದಿನ ಕಾರ್ಯಗಳಿಗೆ ಸಮಸ್ಸೆಯಾಗಲಿದ್ದು, ಈ ಕಾರಣಕ್ಕಾಗಿ ಬಂದ್ ಗೆ ಇಲಾಖೆ ಸಮ್ಮತಿ ಸೂಚಿಸಿಲ್ಲ ಎಂದು ಎಂ.ಎನ್.ನಾಗರಾಜ್ ಪ್ರಕಟಣೆ ಹೊರಡಿಸಿದ್ದಾರೆ. ಆದರೆ ಶತಾಯ ಗತಾಯ ಬಂದ್ ಯಶಸ್ವಿಗೊಳಿಸಲು ಪೀಪಲ್ಸ್ ಫೋರಂ ನಾಯಕರು ಮಾತ್ರ ಪ್ರಯತ್ನ ನಡೆಸುತ್ತಿದ್ದಾರೆ..

ಬೈಟ್:- ನಾಸೀರ ಹುಸೇನ್ ಉಸ್ತಾದ, ಫೊರಂ ಮುಖಂಡConclusion:ಒಟ್ಟಾರೆ ನಾಳೆ ಬಂದ್ ವಿಷಯದಲ್ಲಿ ಜನ ಕನ್ಪ್ಯೂಸ್ ಆಗುವಂತಾಗಿದೆ. ಒಂದಡೆ ಬಂದ್ ಯಶಸ್ವಿಗೆ ಫೋರಂ ನಾಯಕರು ಪ್ರಯತ್ನಿಸಿದರೆ, ಮತ್ತೊಂದಡೆ ಇದನ್ನು ತಡೆಯಲು ಇಲಾಖೆ ಮುಂದಾಗಿದೆ. ಆದರೆ ಪೊಷಕರು ತಮ್ಮ ಮಕ್ಕಳನ್ನು ಶಾಲಾ ಕಾಲೇಜುಗಳಿಗೆ ಕಳಿಸಬೇಕಾ, ಬೇಡಾ, ತಾವು ಕೆಲಸಕ್ಕೆ ಹೋಗಬೇಕಾ ಅಥವಾ ಬೇಡಾ ಅನ್ನೊದು ತಿಳಿಯದಂತಾಗಿದ್ದಾರೆ.‌.....

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.