ಕಲಬುರಗಿ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ನಗರದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಯುವ ಸಮಿತಿ ಅಧ್ಯಕ್ಷ ಮಹ್ಮದ್ ಹ್ಯಾರಿಸ್ ನಲಪಾಡ್ ನೇತೃತ್ವದಲ್ಲಿ ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಧರಣಿ ಸತ್ಯಾಗ್ರಹ ಹಾಗೂ ಮೆರವಣಿಗೆಯನ್ನು ನಡೆಸಲಾಯಿತು.
ತಲೆ ಮೇಲೆ ಅಡುಗೆ ಅನಿಲ ಸಿಲಿಂಡರ್ ಹೊತ್ತು ಧರಣಿ ಸತ್ಯಾಗ್ರಹ ಆರಂಭಿಸಿದ ನಲಪಾಡ್ ಮತ್ತು ಕಾರ್ಯಕರ್ತರು ನಿರಂತರವಾಗಿ ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ತೈಲ ಬೆಲೆ, ಅಡುಗೆ ಅನಿಲ ಬೆಲೆ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ಬಡವರ ಪಾಕೆಟ್ನಿಂದ ಹಣ ಲೂಟಿ ಮಾಡುತ್ತಿದೆ. ಇದು ಪಿಕ್ ಪಾಕೆಟ್ ಸರ್ಕಾರ ಎಂದು ನಲಪಾಡ್ ಆರೋಪಿಸಿದರು.
ಭಾರದಲ್ಲಿ ಹಲಾಲ್, ಹಿಜಾಬ್ ಕಿರಿಕ್ ನಡೆಯೋದಿಲ್ಲ: ಇದೇ ವೇಳೆ ಮಾತನಾಡಿದ ನಲಪಾಡ್, ಹಲಾಲ್, ಹಿಜಾಬ್, ಆಜಾನ್ ನಿನ್ನೆ ಮೊನ್ನೆ ಶುರುವಾಗಿರುವುದಲ್ಲ. ಬಿಜೆಪಿ ಕೋಮು ಭಾವನೆ ಯಾಕೆ ಮೂಡಿಸುತ್ತಿದೆ ಎನ್ನುವುದರ ಬಗ್ಗೆ ಜನ ಆಲೋಚಿಸಬೇಕಾಗಿದೆ ಎಂದರು.
ಇದನ್ನೂ ಓದಿ: ಇನ್ನುಂದೆ ಮನೆ ಬಾಗಿಲಿಗೇ ಸ್ಪೀಡ್ ಪೋಸ್ಟ್ನಲ್ಲಿ ಬರಲಿದೆ ಜನನ ಪ್ರಮಾಣಪತ್ರ..
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಮೋದಿ ಬೆಲೆ ಏರಿಕೆ ಬಗ್ಗೆ ಒಮ್ಮೆಯಾದರೂ ಮಾತನಾಡಿದ್ದಾರಾ? ಪಂಚ ರಾಜ್ಯ ಚುನಾವಣೆ ಸಂದರ್ಭದಲ್ಲಿ ತೈಲ ಬೆಲೆ ಕಡಿಮೆ ಮಾಡಿದ್ರು. ಚುನಾವಣೆ ಮುಗಿಯುತ್ತಿದ್ದಂತೆಯೇ ಮತ್ತೆ ಹೆಚ್ಚಳ ಮಾಡಿದ್ದಾರೆ. ಇಂತಹ ಲೂಟಿಕೋರ, ಪಿಕ ಪಾಕೆಟ್ ಸರ್ಕಾರ ಸಮಾಜವನ್ನು ಒಡೆಯಲು ಯತ್ನಿಸುತ್ತಿದೆ. ನಾವೆಲ್ಲ ಭಾರತೀಯರು, ನಾವೆಲ್ಲಾ ಒಂದೇ. ಆದ್ರೆ ತಮ್ಮ ವೈಫಲ್ಯ ಮರೆಮಾಚಲು ಇಂಥಹ ವಿವಾದಗಳನ್ನು ಹುಟ್ಟು ಹಾಕುತ್ತಿದ್ದಾರೆ ಎಂದು ನಲಪಾಡ್ ಆಕ್ರೋಶ ವ್ಯಕ್ತಪಡಿಸಿದರು.