ETV Bharat / city

ಕಲಬುರಗಿಯ CCI ಅದಾನಿಗೂ ಇಲ್ಲ, ಅಂಬಾನಿಗೂ ಇಲ್ಲ: RTIನಿಂದ ಹೊರಬಿತ್ತು ಸತ್ಯ

ಕೇಂದ್ರ ಸರ್ಕಾರಿ ಸ್ವಾಮ್ಯದ ಸಿಸಿಐ (ಸಿಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ) ಸಿಮೆಂಟ್ ಕಾರ್ಖಾನೆ ಉದ್ಯಮಿ ಅದಾನಿ ಪಾಲಾಗಲಿದೆ ಎಂಬ ಸುದ್ದಿ ಕೆಲ ದಿನಗಳ ಹಿಂದೆ ದೊಡ್ಡ ಮಟ್ಟದಲ್ಲೇ ಸದ್ದು ಮಾಡಿತ್ತು. ಇದೀಗ ಆರ್.ಟಿ.ಐ. ಅರ್ಜಿಯಿಂದ ಸಿಸಿಐ ಅದಾನಿಗೂ ಇಲ್ಲ, ಅಂಬಾನಿಗೂ ಇಲ್ಲ ಎಂಬ ಸತ್ಯ ಹೊರಬಿದ್ದಿದೆ.

factory
factory
author img

By

Published : Aug 10, 2021, 4:46 PM IST

ಸೇಡಂ (ಕಲಬುರಗಿ): 1972ರಲ್ಲಿ ಶುರುವಾದ ಸಿಸಿಐ ವಾರ್ಷಿಕ 2 ಲಕ್ಷ ಟನ್ ಸಿಮೆಂಟ್ ಉತ್ಪಾದನೆಯ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿತ್ತು. ಕೆಲ ಆಂತರಿಕ ವ್ಯವಹಾರಗಳ ಅಡಚಣೆ, ಖಾಸಗಿ ಸಿಮೆಂಟ್ ಕಾರ್ಖಾನೆಗಳೊಂದಿಗಿನ ಸ್ಪರ್ಧೆಗೆ ಸಡ್ಡು ಹೊಡೆಯಲಾಗದೆ 1998ರಲ್ಲಿ ಸ್ಥಗಿತಗೊಂಡಿತ್ತು. ಇದರಿಂದ 450ಕ್ಕೂ ಹೆಚ್ಚು ಕಾರ್ಮಿಕರು ಬೀದಿ ಪಾಲಾಗಿದ್ದರು.

ಇತ್ತೀಚೆಗೆ ಸಿಸಿಐ ಅದಾನಿ ಪಾಲಾಗಲಿದೆ ಎಂಬ ಮಾಹಿತಿ ದೊರೆತಾಗ ಈ ಭಾಗದ ಸಾವಿರಾರು ಕುಟುಂಬಗಳು ನೌಕರಿಯ ಕನಸು ಕಂಡಿದ್ದವು. ಈಗ ಎಲ್ಲವೂ ಹುಸಿಯಾದಂತಾಗಿದ್ದು, ಈ ಕುರಿತು ರಾಜ್ಯ ಸರ್ಕಾರ ಅಥವಾ ಸಿಸಿಐ ಪ್ರಾರಂಭಿಸುವ ಭರವಸೆ ನೀಡಿದ್ದ ಸಂಸದ ಡಾ. ಉಮೇಶ ಜಾಧವ್​ ಉತ್ತರಿಸಬೇಕಾಗಿದೆ.

ತಾಲೂಕಿನ ಕುರಕುಂಟಾ ಗ್ರಾಮದಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಸಿಸಿಐ (ಸಿಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ) ಸಿಮೆಂಟ್ ಕಾರ್ಖಾನೆ ಉದ್ಯಮಿ ಅದಾನಿ ಪಾಲಾಗಲಿದೆ ಎಂಬ ಸುದ್ದಿ ಕೆಲ ದಿನಗಳ ಹಿಂದೆ ದೊಡ್ಡ ಮಟ್ಟದಲ್ಲೇ ಸದ್ದು ಮಾಡಿತ್ತು. ಗ್ರಾಮದ ನಿವಾಸಿ, ವಕೀಲ ಸಿದ್ಧಲಿಂಗರೆಡ್ಡಿ ಪಾಟೀಲ ಅವರು ಸಲ್ಲಿಸಿದ್ದ ಆರ್.ಟಿ.ಐ. ಅರ್ಜಿಯಿಂದ ಸಿಸಿಐ ಅದಾನಿಗೂ ಇಲ್ಲ, ಅಂಬಾನಿಗೂ ಇಲ್ಲ ಎಂಬ ಸತ್ಯ ಹೊರಬಿದ್ದಿದೆ.

ಕೇಂದ್ರ ಸರ್ಕಾರದ ಸಿಸಿಐ ಕಾರ್ಖಾನೆಯನ್ನು ಉದ್ಯಮಿ ಗೌತಮ ಅದಾನಿ ಮಾಲೀಕತ್ವದ ಅದಾನಿ ಸಿಮೆಂಟ್ ಇಂಡಸ್ಟ್ರೀಸ್ ಲಿಮಿಟೆಡ್ ಅಭಿವೃದ್ಧಿಪಡಿಸಲು ಮುಂದಾಗಿದೆ ಎನ್ನಲಾಗಿತ್ತು. ಕಾರ್ಖಾನೆ ಆರಂಭಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಕೇಂದ್ರದ ಬೃಹತ್ ಕೈಗಾರಿಕೆ ಇಲಾಖೆ ಅನುಮೋದನೆ ನೀಡಿದೆ ಎಂಬ ಮಾತು ಕೇಳಿಬಂದಿತ್ತು.

ಆದರೀಗ ಸತ್ಯ ಬಟಾಬಯಲಾಗಿದ್ದು, ಯಾವುದೇ ರೀತಿಯ ಮಾಲೀಕತ್ವ ಯಾರೂ ವಹಿಸುತ್ತಿಲ್ಲ. ಯಾರೂ ಖರೀದಿಗೆ ಮುಂದಾಗಿಲ್ಲ. ಅಲ್ಲದೆ ಈ ಕುರಿತು ಯಾವ ಮಾಹಿತಿಯೂ ಸಹ ತಮಗಿಲ್ಲ ಎಂದು ಛತ್ತೀಸಗಢ ರಾಜ್ಯದಲ್ಲಿರುವ ಸಿಸಿಐ ಮುಖ್ಯ ಕಚೇರಿಯ ವ್ಯವಸ್ಥಾಪಕ ಹಾಗೂ ಕುರಕುಂಟಾ ಸಿಸಿಐ ಕಾರ್ಖಾನೆಯ ಕಾರ್ಯನಿರ್ವಾಹಕ ಉಸ್ತುವಾರಿ ಅಧಿಕಾರಿಯಾಗಿರುವ ಉಮಾಶಂಕರ ಕುಮಾರ ಅವರು ಸಿದ್ಧಲಿಂಗರೆಡ್ಡಿಯವರು ಸಲ್ಲಿಸಿದ್ದ ಆರ್.ಟಿ.ಐ.ಗೆ ಉತ್ತರಿಸಿದ್ದಾರೆ.

ವಕೀಲ ಸಿದ್ಧಲಿಂಗರೆಡ್ಡಿ ಪಾಟೀಲ ಅವರು ಸಲ್ಲಿಸಿದ್ದ ಆರ್.ಟಿ.ಐ. ನಲ್ಲಿ ಈ ರೀತಿ ಕೇಳಲಾಗಿದೆ.

೧. ಸೇಡಂ ತಾಲೂಕಿನ ಕುರಕುಂಟಾದಲ್ಲಿರುವ ಸ್ಥಗಿತಗೊಂಡ ಸರ್ಕಾರಿ ಸ್ವಾಮ್ಯದ ಸಿಸಿಐ ಸಿಮೆಂಟ್ ಕಾರ್ಖಾನೆ ಮಾರಾಟ ಮಾಡಲಾಗುತ್ತಿದೆಯೇ? ಅದರ ಮಾಹಿತಿ ನೀಡಿ.

ಉತ್ತರ: ಕುರಕುಂಟಾದ ಸಿಸಿಐ ಸಿಮೆಂಟ್ ಕಾರ್ಖಾನೆ ಮಾರಾಟ ಮಾಡುವ ಸಂಬಂಧ ಸದ್ಯಕ್ಕೆ ಯಾವುದೇ ರೀತಿಯ ಮಾಹಿತಿ ನಮ್ಮಲ್ಲಿಲ್ಲ.

೨. ಸಿಸಿಐ ಸಿಮೆಂಟ್ ಕಾರ್ಖಾನೆ ಮಾರಾಟ ಮಾಡಲು ಟೆಂಡರ್ ಏನಾದರೂ ಕರೆಯಲಾಗಿದೆಯೇ?

ಉತ್ತರ : ನಮ್ಮಲ್ಲಿರುವ ಮಾಹಿತಿ ಪ್ರಕಾರ ಕಾರ್ಖಾನೆ ಮಾರಾಟ ಸಂಬಂಧ ಇಂದಿನ ದಿನಾಂಕದವರೆಗೆ ಯಾವುದೇ ರೀತಿಯ ಟೆಂಡರ್​ಅನ್ನು ನಾವು ಕರೆದಿಲ್ಲ.

೩. ಹೂಡಿಕೆಯ ಯೋಜನೆಯ ಪ್ರಸ್ತುತ ಸ್ಥಿತಿ ಏನು? ಏನಾದರೂ ಬದಲಾವಣೆಗಳಾಗಿವೆಯೇ?

ಉತ್ತರ: ಸಿಸಿಐ ಕುರಕುಂಟಾ ಯಾವುದೇ ರೀತಿಯ ಹೂಡಿಕೆಯ ಯೋಜನೆಯನ್ನು ಹೊಂದಿಲ್ಲ. ಅದಕ್ಕೆ ಸಂಬಂಧಪಟ್ಟ ಮಾಹಿತಿ ಇಲ್ಲ.

೪. ಯಾರಾದರೂ ಹೂಡಿಕೆದಾರರು ಸಿಸಿಐ ಕುರಕುಂಟಾ ಕಾರ್ಖಾನೆಯನ್ನು ಖರೀದಿಸಲು ಮುಂದಾಗಿದ್ದರೇ?

ಉತ್ತರ: ನಮ್ಮ ಮಾಹಿತಿಗನುಸಾರ ಯಾವುದೇ ರೀತಿಯ ಹೂಡಿಕೆದಾರರು ಕುರಕುಂಟಾ ಸಿಸಿಐ ಕಾರ್ಖಾನೆ ಖರೀದಿಸಲು ಆಸಕ್ತಿ ತೋರಿಲ್ಲ.

ಇದ್ದ ಸ್ಥಳ ಸದ್ಬಳಕೆಯಾದರೆ ಜನರಿಗೆ ನೆರವಾಗಲಿದೆ:

ಸಿಮೆಂಟ್ ಕಾರ್ಖಾನೆ ಸ್ಥಗಿತಗೊಂಡಾಗಿನಿಂದ 900 ಎಕರೆಯ ಖಾಲಿ ಜಾಗ ಇದೆ. ಸುಖಾ ಸುಮ್ಮನೆ ಅದಾನಿ ಹೆಸರು ಹೇಳಿ ಜನರನ್ನು ತಪ್ಪು ದಾರಿಗೆ ಎಳೆಯುವ ಬದಲು, ಇರುವ ಸ್ಥಳದಲ್ಲಿ ಸರ್ಕಾರ ರೈಲ್ವೆ ಯುನಿವರ್ಸಿಟಿ, ಲೈಮಸ್ಟೋನ್ ರಿಸರ್ಚ ಸೆಂಟರ್, ಕೇಂದ್ರದ ಮಾಡಲ್ ಸ್ಕೂಲ್, ತರಬೇತಿ ಕೇಂದ್ರ, ಕೌಶಲ್ಯ ಅಭಿವೃದ್ಧಿ ಕೇಂದ್ರ ಅಥವಾ ಕಲಬುರಗಿ ಜಿಲ್ಲೆಗೆ ನೀಡಿದ ಟೆಕ್ಸಟೈಲ್ ಪಾರ್ಕ್​, ಸೋಲಾರ ಪಾರ್ಕ್ ಸಹ ಕುರಕುಂಟಾದಲ್ಲಿ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕು. ಇದರಿಂದ ಉದ್ಯೋಗಗಳ ಜೊತೆಗೆ ಈ ಭಾಗದ ಜನರಿಗೆ ಹಲವಾರು ರೀತಿಯಿಂದ ಅನುಕೂಲವಾಗಲಿದೆ ಎನ್ನುತ್ತಾರೆ ವಕೀಲ ಸಿದ್ಧಲಿಂಗರೆಡ್ಡಿ ಪಾಟೀಲ ಕುರಕುಂಟಾ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.