ಹುಬ್ಬಳ್ಳಿ: ಥರ್ಮಲ್ ಪವರ್ ಪ್ಲಾಂಟ್ನಲ್ಲಿ 21.55 ಮಿಲಿಯನ್ ಟನ್ ಕಲ್ಲಿದ್ದಲು ನಮ್ಮಲ್ಲಿ ಸ್ಟಾಕ್ ಇದೆ. ಕೋಲ್ ಕಂಪನಿಗಳಲ್ಲಿ 72.5 ಮಿಲಿಯನ್ ಟನ್ ಸ್ಟಾಕ್ ಇದೆ. ಅತಿ ಹೆಚ್ಚು ವಿದ್ಯುತ್ ಬೇಡಿಕೆ ಈ ತಿಂಗಳಲ್ಲಿ ಸೃಷ್ಟಿಯಾಗಿದೆ. ದೇಶದಲ್ಲಿ ಆರ್ಥಿಕತೆ ಉತ್ತಮವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿಂದು ಸ್ಮಾರ್ಟ್ ಸಿಟಿ ಯೋಜನೆ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ರಾಷ್ಟ್ರದಲ್ಲಿ ಕಲ್ಲಿದ್ದಲು ಅಭಾವ ವಿಚಾರವಾಗಿ ಮಾತನಾಡಿದ ಅವರು, ಈ ಬಾರಿ ಭಯಂಕರ ಬಿಸಿಲು ಬಂದಿದ್ದು. ವಿದ್ಯುತ್ ಬೇಡಿಕೆಗೆ ಕಾರಣವಾಗಿದೆ. ರಾಷ್ಟ್ರದ ಹಲವೆಡೆಗಳಲ್ಲಿ ಕಲ್ಲಿದ್ದಲು ಸ್ಟಾಕ್ ಇದೆ. 10 ದಿನಕ್ಕೆ ಕತ್ತಲೆ ಅವರಿಸುತ್ತೆ ಅನ್ನೋದನ್ನ ಕೆಲವರು ಬಿಂಬಿಸುತ್ತಿದ್ದಾರೆ. ಅದು ಸರಿಯಲ್ಲ. ನಾವು ಪ್ರತಿದಿನ 1.7 ಮಿಲಿಯನ್ ಟನ್ ಸಪ್ಲೈ ಮಾಡುತ್ತಿದ್ದೇವೆ. ಬೇಡಿಕೆ ಹೆಚ್ಚಾಗಿದ್ದರಿಂದ ಸಾಗಣೆ ಮಾಡಲು ರೈಲ್ವೆ ಇಲಾಖೆ ಹಲವು ಕ್ರಮ ಕೈಗೊಂಡಿದೆ ಎಂದರು.
ಪಿಎಸ್ಐ ನೇಮಕಾತಿ ರದ್ದು ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಂಡಿದೆ. ಟೆಕ್ನಾಲಜಿ ಬಳಸಿ ಅಪರಾಧ ಮಾಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಕ್ರಮ ಕೈಗೊಂಡಿದೆ. ಈಗಾಗಲೇ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಮುಂದೆ ಈ ರೀತಿ ಆಗದಂತೆ ಸಿಎಂ ಗಮನ ಹರಿಸಿ ಕ್ರಮಕ್ಕೆ ತೆಗೆದುಕಕೊಳ್ಳುತ್ತಿದ್ದಾರೆ. ಕೆಲವೊಮ್ಮೆ ಈ ರೀತಿಯ ಸಂಗತಿಗಳು ಅನಿವಾರ್ಯವಾಗಿ ಆಗುತ್ತವೆ. ಹೀಗಾಗಿ ಎಲ್ಲರೂ ಸಹಕರಿಸಬೇಕು ಎಂದು ಅವರು ಹೇಳಿದರು.
ಓದಿ: Power crisis: ಕಲ್ಲಿದ್ದಲು ಸಾಗಿಸುವ ರೈಲುಗಳಿಗಾಗಿ 42 ಪ್ಯಾಸೆಂಜರ್ ಟ್ರೈನ್ಗಳು ರದ್ದು