ETV Bharat / city

ಕೆಟ್ಟು ನಿಂತ ಹುಬ್ಬಳ್ಳಿ ನಗರ ಸಿಗ್ನಲ್ ದೀಪಗಳು: ಪೊಲೀಸ್​​ ಇಲಾಖೆ ನಿರ್ಲಕ್ಷ್ಯಕ್ಕೆ ವಾಹನ ಸವಾರರ ಆಕ್ರೋಶ - ಹುಬ್ಬಳ್ಳಿ ಟ್ರಾಫಿಕ್​​ ಸಿಗ್ನಲ್​ ದೀಪಗಳ ಸಮಸ್ಯೆ

ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಹುಬ್ಬಳ್ಳಿ ನಗರದಲ್ಲಿ ಅಳವಡಿಸಿರುವ ಸಂಚಾರ ದೀಪಗಳು ನಿಷ್ಕ್ರಿಯಗೊಂಡು ಧೂಳು ಹಿಡಿದು ನಿಂತಿದ್ದರು ಅದನ್ನು ಸರಿಪಡಿಸುವ ಗೋಜಿಗೆ ಪೊಲೀಸ್​ ಇಲಾಖೆ ಹೊಗಿಲ್ಲ. ಅಲ್ಲದೆ ಕೆಟ್ಟುನಿಂತಿರುವ ಸಿಗ್ನಲ್​ ಕಂಬಗಳನ್ನು ತೆರವುಗೊಳಿಸದೆ ಮತ್ತೊಂದಿಷ್ಟು ಕಂಬಗಳನ್ನು ಸ್ಥಾಪಿಸುವುದರಿಂದ ವಾಹನ ಸವಾರರಿಗೆ ಗೊಂದಲ ಉಂಟಾಗುತ್ತಿದೆ.

traffic-signals-problems-in-hubli-city
ಹುಬ್ಬಳ್ಳಿ ನಗರ
author img

By

Published : Nov 8, 2020, 3:37 PM IST

ಹುಬ್ಬಳ್ಳಿ: ನಗರದ ವಿವಿಧೆಡೆ ಅಳವಡಿಸಿರುವ ಸಂಚಾರ ದೀಪಗಳು ಕಳೆದ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸದೆ ನಿಷ್ಕ್ರಿಯಗೊಂಡಿದ್ದರೂ ಪೊಲೀಸ್‌ ಇಲಾಖೆ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವ ಪ್ರಜ್ಞಾವಂತ ನಾಗರಿಕರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.

ನಗರದ ಸರ್ ಸಿದ್ದಪ್ಪ ಕಂಬಳಿ ಮಾರ್ಗದಲ್ಲಿ ಸುಮಾರು 16 ಸಿಗ್ನಲ್ ಕಂಬಗಳಿವೆ. ಅವುಗಳಲ್ಲಿ ಆರು ಮಾತ್ರ ಕಾರ್ಯ ನಿರ್ವಹಿಸುತ್ತವೆ. ಬಸವ ವನದ ಬಳಿ 8, ಇಂದಿರಾ ಗಾಜಿನ ಮನೆ ಬಳಿ 16, ಹೊಸುರ ಸರ್ಕಲ್ ಬಳಿ 7, ಅಂಬೇಡ್ಕರ್ ಸರ್ಕಲ್ ಬಳಿ 7, ಹೀಗೆ ಒಂದೊಂದು ಟ್ರಾಫಿಕ್ ಸಿಗ್ನಲ್ ಬಳಿ ನಿಷ್ಕ್ರಿಯಗೊಂಡಿರುವ ಸಿಗ್ನಲ್​​ ಕಂಬಗಳನ್ನು ತೆರವುಗೊಳಿಸದೆ ಹಾಗೆಯೇ ಬಿಟ್ಟಿದ್ದಾರೆ.

ವಾಹನಗಳ ಸಂಚಾರ ಒತ್ತಡ ನಿಯಂತ್ರಿಸಲು ಹಾಗೂ ಸುರಕ್ಷಿತ ಪ್ರಯಾಣಕ್ಕೆ ಪೂರಕವಾಗಿ ಪೊಲೀಸ್‌ ಇಲಾಖೆ ಸಿಗ್ನಲ್‌ ದೀಪಗಳನ್ನು ಅಳವಡಿಸಿದೆ. ಆರಂಭಿಕ ಕೆಲವು ದಿನಗಳು ಮಾತ್ರ ಈ ದೀಪಗಳು ಕಾರ್ಯನಿರ್ವಹಿಸಿದ್ದು ಬಿಟ್ಟರೆ. ಇನ್ನೂಳಿದ ಕಂಬಗಳು ಕಾರ್ಯನಿರ್ವಾಹಿಸುತ್ತಿಲ್ಲ.

ಕೆಟ್ಟು ನಿಂತ ಹುಬ್ಬಳ್ಳಿ ನಗರ ಸಿಗ್ನಲ್ ದೀಪಗಳು

ಗೋಕುಲ ರಸ್ತೆಯ ಹೊಸೂರು ವೃತ್ತದಲ್ಲಿ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ವೇಗವಾಗಿ ಚಲಿಸುವ ವಾಹನಗಳಿಗೆ ನಿಯಂತ್ರಣ ಹಾಕುವುದು ಹಾಗೂ ನಗರ ವ್ಯಾಪ್ತಿಯ ಕೆಲವು ಪ್ರಮುಖ ರಸ್ತೆಗಳಿಂದ ಬರುವ ವಾಹನಗಳು ಹಾಗೂ ಪಾದಚಾರಿಗಳಿಗೆ ರಸ್ತೆ ದಾಟಲು ಅನುಕೂಲ ಮಾಡಿಕೊಡುವುದು ಇದರ ಉದ್ದೇಶವಾಗಿತ್ತು. ಆದರೆ, ದೀಪಗಳಿದ್ದರೂ ಪೊಲೀಸರೇ ವೃತ್ತದ ಮಧ್ಯೆ ನಿಂತು ಕೈ ಸನ್ನೆ ತೋರಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ಇದರಿಂದ ಸಿಗ್ನಲ್​ ಕಂಬಗಳು ನಿರುಪಯುಕ್ತವಾಗುತ್ತಿವೆ.

ಪೊಲೀಸ್‌ ಇಲಾಖೆ ನಿರ್ಲಕ್ಷ್ಯ

ಲಕ್ಷಾಂತರ ರೂ. ಖರ್ಚು ಮಾಡಿ ಪೊಲೀಸ್‌ ಇಲಾಖೆ ಸಿಗ್ನಲ್‌ ದೀಪಗಳನ್ನು ಅಳವಡಿಸಿದ್ದರೂ ಯಾವುದೇ ಪ್ರಯೋಜನವಿಲ್ಲ. ಇದರ ಚಾಲನೆಗೆ ಇಲಾಖೆ ಮೀನಮೇಷ ಎಣಿಸುತ್ತಿದೆ. ಪ್ರಮುಖ ವೃತ್ತಗಳಲ್ಲಿ ಹೊಸ ಕಂಬಗಳನ್ನು ಹಾಕುತ್ತಾರೆ. ಆದರೆ ಹಳೆ ಕಂಬಗಳನ್ನು ತೆರವುಗೋಳಿಸದೆ ಇರುವುದು ವಾಹನ ಸವಾರರಿಗೆ ಗೊಂದಲವನ್ನುಂಟು ಮಾಡುತ್ತಿದೆ. ಅಲ್ಲದೆ ಹಳೆ ಕಂಬಗಳು ಸುಸ್ಥಿತಿಯಲ್ಲಿದ್ದರೂ ನಿರ್ವಹಣೆ ಕೊರತೆಯಿಂದ ಧೂಳು, ಮಳೆ, ಬಿಸಿಲಿನಲ್ಲಿ ಕೊಳೆಯುತ್ತಿದ್ದು ನಗರ ಸೌಂದರ್ಯವನ್ನು ಕೆಡಿಸುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.