ETV Bharat / city

ಸಾರಿಗೆ ಮುಷ್ಕರ: ಹುಬ್ಬಳ್ಳಿ ಗ್ರಾಮಾಂತರ ವಿಭಾಗಕ್ಕೆ ಅಂದಾಜು 6 ಕೋಟಿ ರೂ. ನಷ್ಟ - Transport income down

ಹಬ್ಬದ ವಿಶೇಷ ಬಸ್ಸುಗಳ ಕಾರ್ಯಾಚರಣೆಗೂ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಮುಷ್ಕರದಿಂದಾಗಿ ಹೆಚ್ಚುವರಿ ಬಸ್ಸುಗಳಿರಲಿ, ನಿತ್ಯದ ಬಸ್ಸುಗಳನ್ನೇ ಕಾರ್ಯಾಚರಣೆ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಸಂಸ್ಥೆಗೆ ಬರಬೇಕಾಗಿದ್ದ ಬಹುತೇಕ ಆದಾಯ ಕೈತಪ್ಪಿದಂತಾಗಿದೆ.

ನಷ್ಟ
ನಷ್ಟ
author img

By

Published : Apr 24, 2021, 9:16 PM IST

ಹುಬ್ಬಳ್ಳಿ: ಸಾರಿಗೆ ನೌಕರರು ನಡೆಸಿದ ಮುಷ್ಕರದಿಂದಾಗಿ ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗಕ್ಕೆ ಅಂದಾಜು 6 ಕೋಟಿ ರೂ. ಸಾರಿಗೆ ಆದಾಯ ನಷ್ಟವಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ರಾಮನಗೌಡರ ತಿಳಿಸಿದ್ದಾರೆ.

ಹುಬ್ಬಳ್ಳಿ ಗ್ರಾಮಾಂತರ ವಿಭಾಗದಲ್ಲಿ 2,110 ಸಿಬ್ಬಂದಿ ಇದ್ದಾರೆ. 470 ಬಸ್ಸುಗಳಿವೆ. ಈ ಬಸ್ಸುಗಳು ಪ್ರತಿದಿನ 400ರಿಂದ 415 ಅನುಸೂಚಿ ಮಾರ್ಗಗಳಲ್ಲಿ 1.4 ಲಕ್ಷ ಕಿಲೋ ಮೀಟರ್ ಕ್ರಮಿಸುತ್ತಿದ್ದವು. ನಿತ್ಯ 1.2 ಲಕ್ಷ ಜನರು ಪ್ರಯಾಣಿಸುತ್ತಿದ್ದರು. ಇದರಿಂದ ಸಂಸ್ಥೆಗೆ 40ರಿಂದ 45 ಲಕ್ಷ ರೂ. ಆದಾಯ ಸಂಗ್ರಹವಾಗುತ್ತಿತ್ತು.

ಮುಷ್ಕರದ ಆರಂಭದ ದಿನ ಏ. 7ರಂದು ಯಾವುದೇ ಬಸ್ ಡಿಪೋಗಳಿಂದ ಹೊರ ಬರಲಿಲ್ಲ. ನಂತರ ನಾಲ್ಕು ದಿನ ಬೆರಳೆಣಿಕೆ ಬಸ್ಸುಗಳಷ್ಟೇ ಸಂಚರಿಸಿದ್ದವು. ನಂತರದ ಅವಧಿಯಲ್ಲಿ ಕೆಲ ಬಸ್ಸುಗಳ ಸಂಚಾರ ಇದ್ದರೂ ಪ್ರಯಾಣಿಕರ ಸಂಖ್ಯೆ ತೀರಾ ವಿರಳವಾಗಿತ್ತು. ಅಲ್ಲದೇ ಯುಗಾದಿ, ಅಂಬೇಡ್ಕರ್​ ಜಯಂತಿ ಪ್ರಯುಕ್ತ ಸರಣಿ ರಜೆ ದಿನಗಳಲ್ಲಿ ಹೆಚ್ಚಿನ ಜನ ಸಂಚಾರ ಹಾಗೂ ಹೆಚ್ಚುವರಿ ಸಾರಿಗೆ ಆದಾಯ ನಿರೀಕ್ಷಿಸಲಾಗಿತ್ತು.

ಹಬ್ಬದ ವಿಶೇಷ ಬಸ್ಸುಗಳ ಕಾರ್ಯಾಚರಣೆಗೂ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಮುಷ್ಕರದಿಂದಾಗಿ ಹೆಚ್ಚುವರಿ ಬಸ್ಸುಗಳಿರಲಿ, ನಿತ್ಯದ ಬಸ್ಸುಗಳನ್ನೇ ಕಾರ್ಯಾಚರಣೆ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಸಂಸ್ಥೆಗೆ ಬರಬೇಕಾಗಿದ್ದ ಬಹುತೇಕ ಆದಾಯ ಕೈತಪ್ಪಿದಂತಾಗಿದೆ ಎಂದು ಅವರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.