ಹುಬ್ಬಳ್ಳಿ: ಮುಸ್ಲಿಂ ಸಮುದಾಯದಲ್ಲಿ ತಲಾಖ್ ಹೇಗೆಲ್ಲಾ ನೀಡಲಾಗುತ್ತೆ ಹಾಗೂ ಅದರ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು ತಯಾರಾಗಿರುವ ತಲಾಖ್ ಚಿತ್ರ ಜನವರಿ 22 ರಂದು ತೆರೆ ಕಾಣಲಿದೆ.
ತಲಾಖ್, ತಲಾಖ್, ತಲಾಖ್ ಎಂಬ ಶೀರ್ಷಿಕೆ ಅಡಿಯಲ್ಲಿ ಭಾರತೀಯರಿಗೆ ತಲಾಖ್ ಬಗ್ಗೆ ಅರಿವು ಮೂಡಿಸಲು ಚಿತ್ರವನ್ನು ನಿರ್ಮಾಣ ಮಾಡಲಾಗಿದ್ದು, ಇದೇ ತಿಂಗಳು 22 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ಚಿತ್ರದ ನಿರ್ದೇಶಕ ವೈದ್ಯನಾಥ ಹೇಳಿದರು.
ಈ ಚಿತ್ರದ ಚಿತ್ರೀಕರಣ ತೀರ್ಥಹಳ್ಳಿ, ಆಗುಂಬೆ ಹಾಗೂ ಇನ್ನಿತರ ಪ್ರವಾಸಿ ಸ್ಥಳದಲ್ಲಿ ನಡೆದಿದ್ದು, ಎಲ್ಲಾ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿವೆ ಎಂದರು. ಪ್ರತಿಯೊಬ್ಬ ಮುಸ್ಲಿಂ ಸಮುದಾಯದ ವ್ಯಕ್ತಿ ನೋಡುವ ರೀತಿ ಈ ಸಿನಿಮಾ ಕಥೆ ಹೆಣೆಯಲಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಸಹ ಸಿನಿಮಾ ನೋಡಿ ಪ್ರೋತ್ಸಾಹ ಮಾಡಬೇಕು ಎಂದು ಮನವಿ ಮಾಡಿದರು.