ಹುಬ್ಬಳ್ಳಿ: ಇಂದು ಹೃದಯಾಘಾತದಿಂದ ನಿಧನರಾದ ಸಚಿವ ಸಿ ಎಸ್ ಶಿವಳ್ಳಿಯವರ ಪಾರ್ಥಿವ ಶರೀರವನ್ನು ಜೆಪಿ ನಗರ ನಿವಾಸಕ್ಕೆ ರವಾನಿಸಲಾಗಿದೆ.
ಹುಬ್ಬಳ್ಳಿ ಆಸ್ಪತ್ರೆಯಿಂದ, ಹುಬ್ಬಳ್ಳಿಯ ಜೆಪಿ ನಗರದ ನಿವಾಸಕ್ಕೆ ಶಿವಳ್ಳಿ ಮೃತದೇಹವನ್ನು ಆಂಬ್ಯುಲೆನ್ಸ್ನಲ್ಲಿ ಕೊಂಡೊಯ್ಯಲಾಯಿತು. ಸಂಜೆ ಆರು ಗಂಟೆಯವರೆಗೆ ಜೆಪಿ ನಗರದ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಭಿಮಾನಿಗಳು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಶಿವಳ್ಳಿ ಮನೆ ಮುಂದೆಯೂ ಸಾಕಷ್ಟು ಅಭಿಮಾನಿಗಳು ಸೇರಿದ್ದು, ದುಃಖ ಮಡುಗಟ್ಟಿದೆ.
ಇನ್ನುಅಂತಿಮ ದರ್ಶನಕ್ಕೆ ಮದಿನಾ ಕಾಲೋನಿಯಲ್ಲಿ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಈ ಬಗ್ಗೆ ಜಿಲ್ಲಾಧಿಕಾರಿ ದೀಪಾ ಜೋಳನ್ ಹಾಗೂ ಮಾಜಿ ಸಚಿವ ವಿನಯ ಕುಲಕರ್ಣಿ ಚರ್ಚೆ ನಡೆಸಿದ್ದಾರೆ. ಇಂದು ರಾತ್ರಿಯವರಗೆ ಮಾತ್ರ ಹುಬ್ಬಳ್ಳಿ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆಮಾಡಲಾಗಿದೆ. ರಾತ್ರಿ ಸ್ವಗ್ರಾಮ ಯರಗುಪ್ಪಿಗೆ ಪಾರ್ಥಿವ ಶರೀರ ರವಾನೆಯಾಗಲಿದೆ.