ಹುಬ್ಬಳ್ಳಿ: ಕಮರಿಪೇಟೆಯಲ್ಲಿ ಪ್ರತಿ ವರ್ಷವೂ ದಸರಾ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಈ ಬಾರಿಯೂ ಕಮರಿಪೇಟೆಯ ಟಗರು ಕಾಳಗ ಎಲ್ಲರ ಗಮನ ಸೆಳೆಯಿತು.
ಉತ್ತರ ಕರ್ನಾಟಕದ ಹೃದಯ ಭಾಗದಲ್ಲಿರುವ ಹುಬ್ಬಳ್ಳಿಯ ಕಮರಿಪೇಟೆಯಲ್ಲಿ ದಸರಾ ಹಬ್ಬವನ್ನು ಟಗರು ಕಾಳಗದ ಮೂಲಕ ಆಚರಣೆ ಮಾಡಲಾಗುತ್ತದೆ. ಸುಮಾರು ವರ್ಷಗಳಿಂದ ಟಗರು ಕಾಳಗದ ಮೂಲಕ ದಸರಾ ಆಚರಿಸಲಾಗುತ್ತಿದ್ದು, ಈ ಕಾಳಗಕ್ಕೆ ಐತಿಹಾಸಿಕ ಹಿನ್ನೆಲೆಯಿದೆ. ಮನುಷ್ಯರಿಗೆ ಮಾತ್ರ ಮನರಂಜನೆಯಲ್ಲ ಪ್ರಾಣಿಗಳಿಗೂ ಕೂಡ ಒಂದು ಸ್ಪರ್ಧೆಯ ಮೂಲಕ ಮನರಂಜನೆ ನೀಡಬೇಕು ಎಂಬ ಸದುದ್ದೇಶದಿಂದ ಕಮರಿಪೇಟೆಯಲ್ಲಿ ಪ್ರತಿ ವರ್ಷವೂ ಟಗರಿನ ಕಾಳಗ ಆಯೋಜಿಸಲಾಲಾಗುತ್ತದೆ.
ಈ ಬಾರಿ ಕೋವಿಡ್ ಭೀತಿ ಹಿನ್ನೆಲೆ ದಸರಾವನ್ನು ಸರಳವಾಗಿ ಆಚರಣೆ ಮಾಡಲಾಗಿದೆ. ಅಲ್ಲದೇ ಸಂಪ್ರದಾಯದ ಆಚರಣೆ ಕೈ ಬಿಡಬಾರದು ಎಂಬ ಹಿನ್ನೆಲೆಯಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿದೆ. ಈ ಟಗರಿನ ಕಾಳಗ ಸ್ನೇಹ, ಪ್ರೀತಿ ಸಹಬಾಳ್ವೆಗೆ ಸಾಕ್ಷಿಯಾಗಿದೆ ಎನ್ನುತ್ತಾರೆ ಸ್ಥಳೀಯರು.
ಇದನ್ನೂ ಓದಿ: ಜಪಾನ್ ಪ್ರಧಾನ ಮಂತ್ರಿಗಳ ಶಿಷ್ಯವೇತನಕ್ಕೆ ಮುದ್ದೇಬಿಹಾಳದ ವಿದ್ಯಾರ್ಥಿನಿ ಆಯ್ಕೆ
ಟಗರಿನ ಕಾಳಗ ಎಸ್.ಎಸ್.ಕೆ ಸಮಾಜದ ಒಂದು ಸಾಂಪ್ರದಾಯಿಕ ಆಚರಣೆ ಆಗಿದ್ದು, ಮಕ್ಕಳು, ಹಿರಿಯರು ಹಾಗೂ ಯುವ ಸಮುದಾಯ ಸಾಕಷ್ಟು ಸಂತೋಷದಿಂದ ಟಗರು ಕಾಳಗ ವೀಕ್ಷಿಸಿದ್ದು ವಿಶೇಷವಾಗಿತ್ತು.