ಹುಬ್ಬಳ್ಳಿ : ಸ್ಮಾರ್ಟ್ ಸಿಟಿ ಯೋಜನೆ ವಾಣಿಜ್ಯ ನಗರಿಯಲ್ಲಿ ಅವ್ಯವಸ್ಥೆ ತಲೆದೋರುವಂತೆ ಮಾಡಿದೆ. ಇಲ್ಲಿ ಕಾಮಗಾರಿ ಯೋಜನೆಗಳು ಕೇವಲ ಪ್ರಾರಂಭಕ್ಕಷ್ಟೇ, ಮುಕ್ತಾಯವಾಗುವುದಿಲ್ಲ. ಇದರಿಂದ ಇಲ್ಲಿನ ಜನರು ಬೇಸತ್ತು ಹೋಗಿದ್ದಾರೆ.
ಪಟ್ಟಣದ ಈಶ್ವರ ನಗರದಿಂದ ಗಿರಯಾಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಪ್ರಾರಂಭವಾಗಿ ಸುಮಾರು 6 ತಿಂಗಳೆ ಕಳೆದು ಹೋಗಿದೆ. ಆದರೆ, ಇಲ್ಲಿಯವರೆಗೂ ಕೂಡಾ ಪೂರ್ಣ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಅಲ್ಲದೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಾ ಇತ್ತ ಗಮನ ಕೂಡಾ ಹರಿಸಿಲ್ಲ.
ಪ್ರತಿನಿತ್ಯ ಸಾವಿರಾರು ಜನ ಈ ರಸ್ತೆಯಲ್ಲಿ ಸಂಚಾರ ಮಾಡುತ್ತಾರೆ. ರಸ್ತೆಯನ್ನು ಅಗೆದ ಹಾಗೆಯೇ ಬಿಟ್ಟಿರುವ ಪರಿಣಾಮ ಸಂಚಾರಕ್ಕೆ ತೊಡಕುಂಟಾಗಿದೆ.
ಸಮಸ್ಯೆ ಕುರಿತು ಮಹಾನಗರ ಪಾಲಿಕೆಯ ಅಧಿಕಾರಿಗಳ ಗಮನಕ್ಕೆ ಸಾಕಷ್ಟು ಬಾರಿ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ರಾತ್ರಿಯ ಸಮಯದಲ್ಲಿ ಇಲ್ಲಿ ಅನೇಕ ಚಕ್ಕಡಿ ಹಾಗೂ ಬೈಕ್ ಸವಾರರು ಬೀಳೋದು ಸರ್ವೇಸಾಮಾನ್ಯವಾಗಿದೆ.