ETV Bharat / city

ಹುಬ್ಬಳ್ಳಿಯಲ್ಲಿ ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದ ಜನರಿಗೆ ತಂಪೆರೆದ ವರುಣ - Heavy rain in Hubli

ಬಿಸಿಲಿನಿಂದ ಕಂಗೆಟ್ಟಿದ್ದ ವಾಣಿಜ್ಯ ನಗರಿ ಹುಬ್ಬಳ್ಳಿ ಜನತೆ ಇಂದು ಸುರಿದ ಮಳೆಯಿಂದ ಖುಷಿಯಾಗಿದ್ದಾರೆ. ರೈತರು ಕೂಡಾ ಬಿತ್ತನೆಗೆ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದು ವರುಣ ರೈತರ ಮೊಗದಲ್ಲಿ ಕೂಡಾ ಮಂದಹಾಸ ತರಿಸಿದ್ದಾನೆ.

Rain fall in Commercial city Hubli
ಹುಬ್ಬಳ್ಳಿಯಲ್ಲಿ ಮಳೆ
author img

By

Published : May 22, 2020, 9:27 PM IST

ಹುಬ್ಬಳ್ಳಿ: ಒಂದು ಕಡೆ ಕೊರೊನಾ, ಒಂದೆಡೆ ರಣಬಿಸಿಲಿನಿಂದ ಕಂಗೆಟ್ಟಿದ್ದ ಹುಬ್ಬಳ್ಳಿ ಜನರಿಗೆ ಇಂದು ವರುಣ ಸ್ವಲ್ಪ ಸಮಾಧಾನ ತಂದಿದ್ದಾನೆ. ಬಿಸಿಲಿನ ತಾಪಕ್ಕೆ ಬೇಸತ್ತ ಜನತೆ ಮಳೆಯಿಂದ ಬಹಳ ಖುಷಿಯಾಗಿದ್ದಾರೆ.

ಹುಬ್ಬಳ್ಳಿಯಲ್ಲಿ ವರುಣನ ಆರ್ಭಟ

ಹೌದು, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವರುಣನ ಆರ್ಭಟ ಜೋರಾಗಿದ್ದು, ರೈತರ ಕಷ್ಟಕ್ಕೆ ಸ್ಪಂದಿಸಿದ ವರುಣ‌ ಧರೆಗೆ ತಂಪೆರೆಯುತ್ತಿದ್ದಾನೆ. ‌ಮುಂಗಾರು ಬಿತ್ತನೆಗೆ ರೈತ ಸಮುದಾಯ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಬಿತ್ತನೆಯ ಕಾರ್ಯ ಚುರುಕಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಇಂದು ನಗರದಲ್ಲಿ ಮಳೆರಾಯನ ಆಗಮನ ರೈತರ ಮೊಗದಲ್ಲಿ ಕೂಡಾ ಮಂದಹಾಸ ಮೂಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.