ಹುಬ್ಬಳ್ಳಿ: ಹಿಂಸಾಚಾರಕ್ಕೆ ಪ್ರೇರಣೆ ನೀಡಿದ ಅನುರಾಗ್ ಠಾಕೂರ್ ಹಾಗೂ ಪ್ರವೀಶ್ ವರ್ಮಾರನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿ ಎಸ್ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಾಮೀಯಾ ವಿದ್ಯಾರ್ಥಿಗಳ ಮೇಲೆ ನಡೆದ ಗುಂಡಿನ ದಾಳಿಗೆ ಇವರ ಪ್ರಚೋದನಾತ್ಮಕ ಹೇಳಿಕೆಯೇ ಕಾರಣ. ಇವರ ಹೇಳಿಕೆಯಿಂದ ಬಜರಂಗದಳದ ಕಾರ್ಯಕರ್ತ ಗೋಪಾಲ್ ರಾಮ್ ಗುಂಡು ಹಾರಿಸಿದ್ದಾನೆ. ಗುಂಡಿನ ದಾಳಿಯ ನಂತರ ದಾಳಿಕೋರನನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದು, ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂದು ಆರೋಪಿಸಿದರು.
ಹೀಗಾಗಿ ಕೋಮು ದ್ವೇಷದ ಸಂದೇಶ ಹರಡುವ ಅನುರಾಗ್ ಠಾಕೂರ್ ಹಾಗೂ ಪ್ರವೀಶ್ ವರ್ಮಾರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಬಂಧಿಸುವಂತೆ ಒತ್ತಾಯಿಸಿದರು.