ETV Bharat / city

ಪಾಕ್ ಪರ ಘೋಷಣೆ ಕೂಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹೊರಟ್ಟಿ,ಜೋಶಿ ಆಗ್ರಹ - prahallad Joshi and basavaraj horatti demands action against pro-Pak shouters

ಹುಬ್ಬಳ್ಳಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಆಗ್ರಹಿಸಿದರು.

prahallad Joshi and basavaraj horatti
ಬಸವರಾಜ ಹೊರಟ್ಟಿ, ಪ್ರಹ್ಲಾದ್​ ಜೋಶಿ
author img

By

Published : Feb 15, 2020, 5:42 PM IST

ಧಾರವಾಡ: ಹುಬ್ಬಳ್ಳಿಯ ಕೆಎಲ್‌ಇ ಕಾಲೇಜಿನಲ್ಲಿ ಇಂಜಿನಿಂಯರಿಂಗ್ ವ್ಯಾಸಂಗ ಮಾಡುತ್ತಿರುವ ಕಾಶ್ಮೀರ ಮೂಲದ ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿದ್ದು ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಬಸವರಾಜ ಹೊರಟ್ಟಿ, ಪ್ರಹ್ಲಾದ್​ ಜೋಶಿ

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಲ್ಲಿ ಈ ರೀತಿಯ ಘಟನೆ ನಡೆದಾಗ ಏನಾಗಿದೆ ಅಂತ ಗೊತ್ತಿದೆ. ಅಂತವರ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು‌‌.‌ ಯಾವುದೇ ರಾಜಕೀಯ ಬೆಂಬಲ ಇದ್ರೂ ಸಹ ಅಧಿಕಾರಿಗಳು ಇಂತವರನ್ನು ಹಿಡಿದು ಒದ್ದು ಒಳಗೆ ಹಾಕಬೇಕು. ದೇಶದ್ರೋಹಿ ಕೆಲಸ ಮಾಡಿದ್ದಾಗ ಎಲ್ಲವನ್ನು ಬಿಟ್ಟು, ದೇಶವನ್ನು ನೋಡಬೇಕು ಎಂದು ಹೇಳಿದರು.

ದೇಶದ್ರೋಹದ ಘೋಷಣೆ ವಿಚಾರಕ್ಕೆ ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಸಹ ಆಕ್ರೋಶ ವ್ಯಕ್ತಪಡಿಸಿದರು. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಸರ್ಕಾರದ ಸ್ಕಾಲರ್​ ಶಿಪ್ ಪಡೆದವರು ಘೋಷಣೆ ಕೂಗಿದ್ದಾರೆ.‌ ಘೋಷಣೆ ಕೂಗಿದ್ರೆ ಏನೂ ಆಗೋದಿಲ್ಲ ಎನ್ನುವ ಮಾನಸ್ಥಿತಿ ಇದೆ ಅನಿಸುತ್ತಿದೆ.‌ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪೌರತ್ವ ಕಾಯಿದೆ ವಿರೋಧಿ ಹೋರಾಟದಲ್ಲಿ ಪಾಕ್ ಪರ ಕೆಲ ಶಕ್ತಿಗಳು ಕೂಡ ತೊಡಗಿಕೊಂಡಿದ್ದವು. ಪ್ರಜಾಪ್ರಭುತ್ವದಡಿ ಹೋರಾಟ ಮಾಡುವುದಕ್ಕೆ ನಮ್ಮ ವಿರೋಧ ಇಲ್ಲ, ಯಾವುದೇ ನೀತಿಯ ವಿರುದ್ಧ ಹೋರಾಟ ಮಾಡುವುದಕ್ಕೆ ಅಭ್ಯಂತರ ಇಲ್ಲ, ಸಿದ್ದರಾಮಯ್ಯನಂತಹ ನಾಯಕರು ಸಪೋರ್ಟ್ ಮಾಡ್ತಾ ಇರೋದಿಂದ್ರ ಹೀಗೆಲ್ಲಾ ಆಗುತ್ತಿದೆ ಎಂದು ಆರೋಪಿಸಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.