ಹುಬ್ಬಳ್ಳಿ: ಅದ್ಧೂರಿಯಾಗಿ ಜನ್ಮದಿನ ಆಚರಣೆ ಮಾಡಿಕೊಳ್ಳುವುದು ಈಗಿನ ಕಾಲದ ಟ್ರೆಂಡ್. ಆದರೆ, ಇಲ್ಲೊಬ್ಬ ಅನ್ನದಾತ ಮನೆಗಾಗಿ ದುಡಿದ ಎತ್ತಿನ ಹುಟ್ಟು ಹಬ್ಬವನ್ನ ಆಚರಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದ್ದಾನೆ.
ಧಾರವಾಡ ಜಿಲ್ಲೆಯ ಸಂಕ್ಲಿಪೂರ ಗ್ರಾಮದಲ್ಲಿ ಕೃಷಿ ಕಾರ್ಯಕ್ಕೆ ಮಾತ್ರವಲ್ಲದೇ, ಮನರಂಜನೆಗಾಗಿ ಏರ್ಪಡಿಸುವ ಗಾಡಾ ಸ್ಪರ್ಧೆಯಲ್ಲಿ ಸಾಕಷ್ಟು ಸಾಧನೆ ಮಾಡಿರುವ ಗ್ರಾಮದ ಶಂಕರಗೌಡ್ರ ಕೋಟಿಗೌಡ್ರ ಎಂಬುವವರ 'ಗಾಡಾ ಕಿಂಗ್ ಶ್ರೀ ನಂದಿ' ಎತ್ತಿನ ಜನ್ಮದಿನವನ್ನು ಹೂವಿನಶಿಗ್ಲಿ ವಿರಕ್ತಮಠದ ನಿರಂಜನ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಕೇಕ್ ಕತ್ತರಿಸುವ ಮೂಲಕ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
![Ox Sri Nandi Birthday Celebration at Hubli](https://etvbharatimages.akamaized.net/etvbharat/prod-images/15554057_38_15554057_1655195640197.png)
ಈಗಾಗಲೇ ಧಾರವಾಡ, ಗದಗ, ಹಾವೇರಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಯಲ್ಲಿ ಗಾಡಾ ಸ್ಪರ್ಧೆಯಲ್ಲಿ ಚಿನ್ನದ ಬಹುಮಾನವನ್ನು ಪಡೆದುಕೊಂಡಿರುವ ಶ್ರೀನಂದಿ 'ಗಾಡಾ ಕಿಂಗ್' ಎಂದೇ ಖ್ಯಾತಿ. ರೈತನ ಮಿತ್ರನಾಗಿ ಕೃಷಿ ಕಾರ್ಯಾದಲ್ಲಿ ಸದಾ ಜೊತೆಗಿರುವ ಎತ್ತಿನ ಜನ್ಮದಿನ ಆಚರಣೆ ಮಾಡುವ ಮೂಲಕ ವಿಶೇಷ ಗೌರವ ಸಮರ್ಪಣೆ ಮಾಡಲಾಯಿತು. ಇಂತಹ ವಿಶೇಷ ಕಾರ್ಯಕ್ರಮದ ಕುರಿತು ನಿರಂಜನ ಸ್ವಾಮೀಜಿ ಅಭಿನಂದನೆ ಸಲ್ಲಿಸಿದರು.