ಹುಬ್ಬಳ್ಳಿ: ಧಾರವಾಡದ ಅಣ್ಣಿಗೇರಿ ಪಟ್ಟಣದಲ್ಲಿ ಮುಸ್ಲಿಂ ಸಮಾಜದ ಹಿರಿಯರು, ಬಡ ಕುಟುಂಬಗಳಿಗೆ ಅಗತ್ಯ ಸಾಮಗ್ರಿಗಳನ್ನ ವಿತರಿಸಿದ್ದಾರೆ.
ಪ್ರತಿ ವರ್ಷ ರಂಜಾನ್ ಹಬ್ಬವನ್ನ ಸಂಭ್ರಮದಿಂದ ಆಚರಿಸಲಾಗುತ್ತಿತ್ತು. ಈ ವರ್ಷ ಮಹಾಮಾರಿ ಕೊರೊನಾ ವೈರಸ್ನಿಂದಾಗಿ ರಂಜಾನ್ ಹಬ್ಬವನ್ನ ಮನೆಯಲ್ಲೇ ಆಚರಿಸಲು ಸರ್ಕಾರ ತಿಳಿಸಿದೆ.
ಹೀಗಾಗಿ ಇಂತಹ ಪರಿಸ್ಥಿತಿಯಲ್ಲಿ ಬಡ ಜನರಿಗೆ ಅಕ್ಕಿ, ತೊಗರಿ ಬೆಳೆ, ಎಣ್ಣೆ, ಸೋಪ್ ಹೀಗೆ ತಮ್ಮ ಕೈಲಾದಷ್ಟು ನೆರವು ನೀಡಲು ಮುಂದಾಗಿದ್ದಾರೆ.