ಧಾರವಾಡ: ಇಂದಿರಾ ಕ್ಯಾಂಟೀನ್‌ಗಳಲ್ಲಿ ಗೋಲ್‌ಮಾಲ್ ಆರೋಪ ಕೇಳಿ ಬಂದ ಹಿನ್ನೆಲೆ ಧಾರವಾಡದ ಇಂದಿರಾ ಕ್ಯಾಂಟೀನ್‌ಗೆ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅನಿರೀಕ್ಷಿತವಾಗಿ ಭೇಟಿ ನೀಡಿದರು.
ಮಿನಿ ವಿಧಾನಸೌಧ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿದ ಶಾಸಕ, ಕಟ್ಟಡದ ಗುಣಮಟ್ಟ, ಆಹಾರ ಪೂರೈಕೆ, ಸ್ವಚ್ಛತೆ ಕುರಿತು ಚರ್ಚೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ ಮುಚ್ಚುವ ಬದಲಿಗೆ ಇಲ್ಲಿನ ವ್ಯವಸ್ಥೆ ಸುಧಾರಿಸಬೇಕಿದೆ. ಮುಚ್ಚುವುದು ಬೇಡ, ನಿತ್ಯ ಐನೂರು ಜನಕ್ಕೆ ನಿತ್ಯ ಊಟ ಕೊಡುತ್ತೇವೆ ಅಂತಾ ಲೆಕ್ಕ ತೋರಿಸುತ್ತಿದ್ದಾರೆ. ಆದ್ದರಿಂದ ಈಗಿರುವ ವ್ಯವಸ್ಥೆ ಸುಧಾರಿಸಿ ಮುಂದುವರಿಸಬೇಕಿದೆ. ಇಲ್ಲಿನ ವ್ಯವಸ್ಥೆ ಡಿಜಿಟಲೀಕರಣ ಮಾಡಬೇಕು. ಊಟಕ್ಕೆ ಬರುವವರ ಆಧಾರ ಸಂಖ್ಯೆ ಹಾಗೂ ಹೆಬ್ಬೆಟ್ಟಿನ ಸ್ಕ್ಯಾನಿಂಗ್ ಮಾಡುವ ವ್ಯವಸ್ಥೆ ಮಾಡಬೇಕು. ಆಗ ಮಾತ್ರ ಈ ಕ್ಯಾಂಟೀನ್‌ನಲ್ಲಿನ ಭ್ರಷ್ಟಾಚಾರ ನಿಲ್ಲಬಹುದು ಎಂದರು.