ETV Bharat / city

’ವಿಶ್ವನಾಥ್ ಏನು ಮಾತನಾಡಿದ್ರೂ ನಮಗೆ ಆಶೀರ್ವಾದವಿದ್ದಂತೆ’: ರಮೇಶ್​ ಜಾರಕಿಹೊಳಿ - ಸಚಿವ ರಮೇಶ್​ ಜಾರಕಿಹೊಳಿ ಹೇಳಿಕೆ

ಹೆಚ್​.ವಿಶ್ವನಾಥ್ ನಮ್ಮ ಗುರುಗಳು. ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರು ಏನು ಮಾತನಾಡಿದ್ರೂ ನಮಗೆ ಆಶೀರ್ವಾದವಿದ್ದಂತೆ ಎಂದು ಸಚಿವ ರಮೇಶ್​ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.

Minister Ramesh jarakiholi  statement about h vishwanath
ವಿಶ್ವನಾಥ್ ಅವರು ಏನು ಮಾತನಾಡಿದ್ರೂ ನಮಗೆ ಆರ್ಶೀವಾದವಿದ್ದಂತೆ: ರಮೇಶ್​ ಜಾರಕಿಹೊಳಿ
author img

By

Published : Jan 15, 2021, 2:03 PM IST

Updated : Jan 15, 2021, 2:30 PM IST

ಹುಬ್ಬಳ್ಳಿ: ಹೆಚ್​.ವಿಶ್ವನಾಥ್​ ಅವರು ಏನು ಮಾತನಾಡಿದ್ದಾರೋ ನನಗೆ ಗೊತ್ತಿಲ್ಲ. ಅವರು ನಮ್ಮ ಗುರುಗಳು. ಅವರ ಮಾತು ನಮಗೆ ಆಶೀರ್ವಾದ ಎಂದು ಸಚಿವ ರಮೇಶ್​ ಜಾರಕಿಹೊಳಿ ಹೇಳಿದರು.

ವಿಶ್ವನಾಥ್ ಅವರು ಏನು ಮಾತನಾಡಿದ್ರೂ ನಮಗೆ ಆಶೀರ್ವಾದವಿದ್ದಂತೆ: ರಮೇಶ್​ ಜಾರಕಿಹೊಳಿ

ನಗರದಲ್ಲಿಂದು ಮಾತನಾಡಿದ ಅವರು, ಹೆಚ್​.ವಿಶ್ವನಾಥ್ ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರು ಏನು ಮಾತನಾಡಿದ್ರೂ ನಮಗೆ ಆಶೀರ್ವಾದವಿದ್ದಂತೆ. ಆದರೆ, ಅವರಿಗೆ ಮಂತ್ರಿಸ್ಥಾನ ನೀಡುವ ವಿಚಾರ ಕೋರ್ಟ್​ನಲ್ಲಿದೆ ಎಂದರು.

ಇನ್ನು, ಬಸವನಗೌಡ ಪಾಟೀಲ್ ಯತ್ನಾಳ್​ ಅವರ ಬಗ್ಗೆಯೂ ಅಪಾರ ಗೌರವವಿದೆ. ಹಿರಿಯ ನಾಯಕರು ಅವರಿಗೆ ಸ್ಥಾನಮಾನ ಸಿಗಬೇಕು ಎಂಬ ಆಗ್ರಹವಿದೆ. ಆದರೆ, ಸಿಡಿ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಧ್ಯಮಗಳ ಮುಂದೆ ಪಕ್ಷದ ಆಂತರಿಕ ವಿಚಾರ ಮಾತನಾಡಬಾರದು ಎಂದು ಮನವಿ ಮಾಡುತ್ತೇನೆ ಎಂದರು.

ಓದಿ: ಬಿಜೆಪಿಯವರೇ ಬ್ಲಾಕ್ ಮೇಲ್ ಗಿರಾಕಿಗಳು: ಸಿದ್ದರಾಮಯ್ಯ ಟೀಕಾ ಪ್ರಹಾರ

ಸಿ.ಪಿ.ಯೋಗೀಶ್ ಅವರ ಮೇಲೆ ಗಂಭೀರ ಆರೋಪಗಳಿದ್ದರೆ, ಅದನ್ನು ವರಿಷ್ಠರ ಗಮನಕ್ಕೆ ತಂದರೆ ಅವರು ಕ್ರಮ ತಗೆದುಕೊಳ್ಳುತ್ತಾರೆ.‌ ವಿಜಯೇಂದ್ರ ಅವರು ಎಲ್ಲದರಲ್ಲೂ ಹಸ್ತಕ್ಷೇಪ ಮಾಡುತ್ತಾರೆ ಎಂಬುದು ಸುಳ್ಳು. ಸಿಎಂ ಮಗ ಅಂತ ಆರೋಪ ಮಾಡುತ್ತಾರೆ. ನಮ್ಮ ಇಲಾಖೆ ಅಲ್ಲ, ಬೇರೆ ಇಲಾಖೆಗೂ ಅವರು ಕೈಹಾಕಿಲ್ಲ ಎಂದರು.

Last Updated : Jan 15, 2021, 2:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.