ಹುಬ್ಬಳ್ಳಿ: ಇನ್ಸ್ಟಾಗ್ರಾಮ್ನಲ್ಲಿ ಮೊಬೈಲ್ ಫೋನ್ ಮಾರಾಟದ ಜಾಹೀರಾತು ನೀಡಿ, ಬಳಿಕ ಹಣ ಹಾಕಿಸಿಕೊಂಡು ವಂಚಿಸುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಕ್ರೈಂ ಬ್ರ್ಯಾಂಚ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸನಗರದ ನಿವಾಸಿ ದೇವ ತಂದೆ ಶಂಕರ ಲಾಲವಾನಿ (19 ) ಬಂಧಿತ ಆರೋಪಿ. 2020ರ ಫೆಬ್ರವರಿ 20ರಂದು ದೂರುದಾರರು, ಇನ್ಸ್ಟಾಗ್ರಾಮ್ನಲ್ಲಿ ಐಫೋನ್ ಮಾರಾಟಕ್ಕಿದೆ ಎಂದು ಆರೋಪಿ ಲಾಲವಾನಿ ಹಾಕಿದ್ದ ಜಾಹೀತರಾತು ನೋಡಿ ಅದನ್ನು ಕೊಂಡುಕೊಳ್ಳಲು ಯೋಚಿಸಿದ್ದರು. ಬಳಿಕ ಆತನನ್ನು ಸಂಪರ್ಕಿಸಿ, 55 ಸಾವಿರ ರೂಪಾಯಿಯನ್ನು ಆನ್ಲೈನ್ ಮೂಲಕ ವರ್ಗಾವಣೆ ಮಾಡಿದ್ದರು. ಹಣ ವರ್ಗಾವಣೆ ಮಾಡಿಸಿಕೊಂಡ ಆರೋಪಿ, ಐಫೋನ್ ಕಳಿಸದೇ, ಕೀ ಪ್ಯಾಡ್ ಮೊಬೈಲ್ ಕಳುಹಿಸಿ ವಂಚಿಸಿದ್ದನಂತೆ.
ಓದಿ:ಕಿರುಕುಳಕ್ಕೆ ಬೇಸತ್ತ ಮಹಿಳೆ: ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ
ಈ ಬಗ್ಗೆ ನೀಡಿದ ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಹುಬ್ಬಳ್ಳಿ ಕ್ರೈಂ ಬ್ರ್ಯಾಂಚ್ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಕೃತ್ಯಕ್ಕೆ ಉಪಯೋಗಿಸಿದ ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ.