ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಎರಡನೇ ಹಂತದ ಲಾಕ್ ಡೌನ್ ಮುಕ್ತಾಯಗೊಂಡು ಕೊಂಚ ಸಡಿಲಿಕೆಯೊಂದಿಗೆ ಲಾಕ್ ಡೌನ್ 3.0 ಪ್ರಾರಂಭಗೊಂಡಿದ್ದು, ಕೊರೊನಾ ವೈರಸ್ ಭೀತಿಯಿಲ್ಲದೇ ಸಾರ್ವಜನಿಕರು ರಸ್ತೆಗೆ ಲಗ್ಗೆ ಇಡುತ್ತಿದ್ದಾರೆ.
ಮದ್ಯಪ್ರಿಯರು ಬೆಳ್ಳಂಬೆಳಗ್ಗೆ ಮದ್ಯದ ಅಂಗಡಿಯ ಮುಂದೆ ಸರದಿ ಸಾಲಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ನಿಂತಿದ್ದರೆ, ಸಾರ್ವಜನಿಕರು ವಾಹನಗಳ ಮೂಲಕ ರಸ್ತೆಗೆ ಇಳಿಯುತಿದ್ದು, ಎಲ್ಲೆಡೆಯೂ ಬೈಕ್ ಹಾಗೂ ವಾಹನಗಳು ರಸ್ತೆಯಲ್ಲಿ ಸಂಚರಿಸುತ್ತಿವೆ.
ಸಾಮಾನ್ಯವಾಗಿ ಎಲ್ಲಾ ಅಂಗಡಿಮುಗಟ್ಟುಗಳು ತೆರೆದಿವೆ. ವಾಯುವ್ಯ ಕರ್ನಾಟಕ ಸಾರಿಗೆ, ಆಟೋ, ಲಾಡ್ಜ್, ಹೋಟೆಲ್ ಗಳನ್ನು ಹೊರತುಪಡಿಸಿ ಎಲ್ಲಾ ಅಂಗಡಿಗಳು ತೆರೆದಿದ್ದು ಸಾರ್ವಜನಿಕರು ಬಿಂದಾಸ್ ಆಗಿ ಓಡಾಡುತ್ತಿದ್ದಾರೆ.