ETV Bharat / city

ಕಾಲ್ನಡಿಗೆಯಲ್ಲಿ ಸುವರ್ಣ ಸೌಧಕ್ಕೆ ತೆರಳಿ ಮುತ್ತಿಗೆ ಹಾಕುತ್ತೇವೆ : ಕರವೇ ನಾರಾಯಣಗೌಡ - ಕರವೇ ಸುವರ್ಣಸೌಧ ಮುತ್ತಿಗೆ

ಇಂದು ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಬೆಳಗಾವಿ ಚನ್ನಮ್ಮ ವೃತ್ತದಿಂದ 12 ಗಂಟೆಗೆ ಕಾಲ್ನಡಿಗೆಯ ಮೂಲಕ ಸುವರ್ಣಸೌಧಕ್ಕೆ ತೆರಳಿ ಮುತ್ತಿಗೆ ಹಾಕುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಹೇಳಿದರು..

karave-suvarna-soudha-gherao
ಕರವೇ ನಾರಾಯಣಗೌಡ
author img

By

Published : Dec 20, 2021, 11:32 AM IST

ಧಾರವಾಡ : 12 ಗಂಟೆಗೆ ಬೆಳಗಾವಿಯಲ್ಲಿ ಹೋರಾಟ ಆರಂಭ ಆಗುತ್ತದೆ. ಕಿತ್ತೂರು ರಾಣಿ ವೃತ್ತದಿಂದ ಕಾಲ್ನಡಿಗೆಯ ಮೂಲಕ ಸುವರ್ಣಸೌಧಕ್ಕೆ ತೆರಳಿ ಮುತ್ತಿಗೆ ಹಾಕುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ತಿಳಿಸಿದರು.

ಬೆಳಗಾವಿಯತ್ತ ಕರವೇ

ಕರವೇ ಸುವರ್ಣಸೌಧ ಮುತ್ತಿಗೆ : ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಂಇಎಸ್, ಶಿವಸೇನೆ ಕಾರ್ಯಕರ್ತರು ನಮ್ಮ ಗಡಿಯೊಳಗೆ ಉದ್ಧಟತನ ತೋರುತ್ತಿದ್ದಾರೆ. ಇದು ಖಂಡನೀಯ. ಅದಕ್ಕೆ ಈ ರ್ಯಾಲಿ ನಡೆಸುತ್ತಿದ್ದೇವೆ. ಸಾವಿರಾರು ಸಂಖ್ಯೆಯಲ್ಲಿ ಸೇರುತ್ತೇವೆ. ಬೆಂಗಳೂರಿನಿಂದ 120 ವಾಹನಗಳಲ್ಲಿ ಬಂದಿದ್ದೇವೆ ಎಂದು ಹೇಳಿದರು.

ಎಂಇಎಸ್ ಅಸ್ತಿತ್ವ ಕಳೆದುಕೊಂಡಿದೆ‌. ಬೆಳಗಾವಿ ಪಾಲಿಕೆ ಅವರ ಕೈಯಲ್ಲಿ ಇತ್ತು. ಚೆನ್ನಮ್ಮ, ರಾಯಣ್ಣ ಹುಟ್ಟಿದ ನಾಡಲ್ಲಿ ಗೂಂಡಾವರ್ತನೆ ಮಾಡುತ್ತಿದೆ. ಎಂಇಎಸ್ ನಿಷೇಧ ಮಾಡಬೇಕು ಎಂದು ನಾವು ಮನವಿ ಮಾಡುತ್ತಲೇ ಬಂದಿದ್ದೇವೆ. ಆದರೆ, ಕರ್ನಾಟಕ ಸರ್ಕಾರ, ಬೆಳಗಾವಿ ನಾಯಕರು ಅವರನ್ನು ಓಲೈಸುತ್ತಲೇ ಬಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಅವರು ನಮ್ಮ ಧ್ವಜ ಸುಡುತ್ತಾರೆ. ಅದು ನಮಗೆ ಕೋಪ ತರಿಸುತ್ತೆ. ಇಂಥ ಪುಂಡಾಟಿಕೆಯನ್ನು ನಾವು ಹೇಗೆ ಸಹಿಸಿಕೊಳ್ಳಬೇಕು‌. ಸಿಎಂಗೆ ನಾನು ನೇರವಾಗಿ ಹೇಳುತ್ತೇನೆ, ನಿಮ್ಮದು ರಣಹೇಡಿ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅವರ ಮೇಲೆ ಕಠಿಣ ಕ್ರಮ ತೆಗದುಕೊಳ್ಳಬೇಕು. ಇಂದು ಅಧಿವೇಶನದಲ್ಲಿ ಚರ್ಚೆ ಮಾಡಬೇಕು. ನಾನು ಅನೇಕ ಶಾಸಕರೊಂದಿಗೆ ಈ ಬಗ್ಗೆ ಮಾತನಾಡಿದ್ದೇನೆ ಎಂದು ನಾರಾಯಣಗೌಡರು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.