ಹುಬ್ಬಳ್ಳಿ: ಸರಿಯಾದ ನಿರ್ವಹಣೆ ಇಲ್ಲದೆ ಹಾಳು ಕೊಂಪೆಯಾಗಿದ್ದ ನಗರದ ಹೃದಯ ಭಾಗದಲ್ಲಿರುವ ನೆಹರು ಕ್ರೀಡಾಂಗಣಕ್ಕೆ ಕೊನೆಗೂ ಸ್ವಚ್ಛತಾ ಭಾಗ್ಯ ಸಿಕ್ಕಿದೆ.
ನೆಹರು ಕ್ರೀಡಾಂಗಣದ ಅವ್ಯವಸ್ಥೆ ಬಗ್ಗೆ ಈಟಿವಿ ಭಾರತ ವಿಸ್ತೃತ ವರದಿ ಬಿತ್ತರಿಸಿತ್ತು. ಸುದ್ದಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಮಹಾನಗರ ಪಾಲಿಕೆ ಅಧಿಕಾರಿಗಳು ಸ್ವಚ್ಛತಾ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದಾರೆ.
ಇದನ್ನು ಓದಿ-ಸರಿಯಾದ ನಿರ್ವಹಣೆ ಇಲ್ಲದೆ ಸೊರಗುತ್ತಿದೆ ಹುಬ್ಬಳ್ಳಿಯ ನೆಹರೂ ಕ್ರೀಡಾಂಗಣ
ಮಳೆಯ ನೀರು ನಿಂತುಕೊಂಡು ಕೆರೆಯಂತಾಗಿತ್ತು. ಎಲ್ಲೆಂದರಲ್ಲಿ ಕಸ ಬೆಳೆದು ನಿಂತಿದ್ದರಿಂದ ಇದೊಂದು ಕ್ರೀಡಾಂಗಣವಾ ಎಂಬ ಸಂಶಯ ನೋಡುಗರಲ್ಲಿ ಮೂಡುತ್ತಿತ್ತು. ಇಂದು ಪಾಲಿಕೆ ಸಿಬ್ಬಂದಿ ಸ್ವಚ್ಛಗೊಳಿಸಿದ್ದಾರೆ. ಈಟಿವಿ ಭಾರತ ವರದಿಗೆ ಸ್ಪಂದಿಸಿ ಕ್ರೀಡಾಂಗಣ ಸ್ವಚ್ಛಗೊಳಿಸಿರುವ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಧನ್ಯವಾದ ತಿಳಿಸುತ್ತೇವೆ. ಈ ಕ್ರೀಡಾಂಗಣ ಸಾರ್ವಜನಿಕರ ಕ್ರೀಡಾಭ್ಯಾಸಕ್ಕೆ ಅನುಕೂಲವಾಗಲಿ ಎಂದು ಆಶಿಸುತ್ತೇವೆ.