ಹುಬ್ಬಳ್ಳಿ : ಉತ್ತರ ಕರ್ನಾಟಕ ಹೆಬ್ಬಾಗಿಲು ಎಂದೇ ಖ್ಯಾತಿ ಪಡೆದ ಹುಬ್ಬಳ್ಳಿಯಲ್ಲಿ ರೈಲು ಹಾಗೂ ಸಾರಿಗೆ ಸೇವೆ ಜನಪ್ರಿಯತೆ ಪಡೆದಿರುವಂತೆ ವಿಮಾನ ಸೇವೆ ಕೂಡ ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಉತ್ತಮ ಸೇವೆ ಹಾಗೂ ಸಂಪರ್ಕದ ಮೂಲಕ ಹುಬ್ಬಳ್ಳಿಯ ವಿಮಾನ ನಿಲ್ದಾಣ ವಿಂಗ್ಸ್ ಇಂಡಿಯಾ-2022 ಯಲ್ಲಿ 'ಅತ್ಯುತ್ತಮ ವಿಮಾನ ನಿಲ್ದಾಣ' ಎಂಬ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ.
-
ನಮ್ಮ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ವಿಂಗ್ಸ್ ಇಂಡಿಯಾ 2022 ಅವರ Regional Connectivity Scheme ವಿಭಾಗದಲ್ಲಿ ಅತ್ಯುತ್ತಮ ವಿಮಾನ ನಿಲ್ದಾಣ ಪ್ರಶಸ್ತಿ ದೊರಕಿದ್ದು ನಮ್ಮೇಲ್ಲರಿಗೂ ಹೆಮ್ಮೆಯ ವಿಷಯ.@aaihbxairport ತಂಡದವರಿಗೆ ಹಾರ್ದಿಕ ಅಭಿನಂದನೆಗಳು. ಸತತವಾಗಿ ಮೂರನೇ ಬಾರಿ ಪುರಸ್ಕಾರ ಪಡೆಯುತ್ತಿರುವದು ಗರ್ವದ ವಿಷಯ
— Pralhad Joshi (@JoshiPralhad) March 26, 2022 " class="align-text-top noRightClick twitterSection" data="
">ನಮ್ಮ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ವಿಂಗ್ಸ್ ಇಂಡಿಯಾ 2022 ಅವರ Regional Connectivity Scheme ವಿಭಾಗದಲ್ಲಿ ಅತ್ಯುತ್ತಮ ವಿಮಾನ ನಿಲ್ದಾಣ ಪ್ರಶಸ್ತಿ ದೊರಕಿದ್ದು ನಮ್ಮೇಲ್ಲರಿಗೂ ಹೆಮ್ಮೆಯ ವಿಷಯ.@aaihbxairport ತಂಡದವರಿಗೆ ಹಾರ್ದಿಕ ಅಭಿನಂದನೆಗಳು. ಸತತವಾಗಿ ಮೂರನೇ ಬಾರಿ ಪುರಸ್ಕಾರ ಪಡೆಯುತ್ತಿರುವದು ಗರ್ವದ ವಿಷಯ
— Pralhad Joshi (@JoshiPralhad) March 26, 2022ನಮ್ಮ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ವಿಂಗ್ಸ್ ಇಂಡಿಯಾ 2022 ಅವರ Regional Connectivity Scheme ವಿಭಾಗದಲ್ಲಿ ಅತ್ಯುತ್ತಮ ವಿಮಾನ ನಿಲ್ದಾಣ ಪ್ರಶಸ್ತಿ ದೊರಕಿದ್ದು ನಮ್ಮೇಲ್ಲರಿಗೂ ಹೆಮ್ಮೆಯ ವಿಷಯ.@aaihbxairport ತಂಡದವರಿಗೆ ಹಾರ್ದಿಕ ಅಭಿನಂದನೆಗಳು. ಸತತವಾಗಿ ಮೂರನೇ ಬಾರಿ ಪುರಸ್ಕಾರ ಪಡೆಯುತ್ತಿರುವದು ಗರ್ವದ ವಿಷಯ
— Pralhad Joshi (@JoshiPralhad) March 26, 2022
ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ವಿಂಗ್ಸ್ ಇಂಡಿಯಾ ಪ್ರಾದೇಶಿಕ ಸಂಪರ್ಕದ ವಿಭಾಗದಲ್ಲಿ ಅತ್ಯುತ್ತಮ ವಿಮಾನ ನಿಲ್ದಾಣ ಪ್ರಶಸ್ತಿ ದೊರಕಿದ್ದು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಟ್ವಿಟರ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಕೋವಿಡ್ ನಂತರದಲ್ಲಿ ಚೇತರಿಕೆ ಕಂಡಿರುವ ಹುಬ್ಬಳ್ಳಿ ವಿಮಾನ ನಿಲ್ದಾಣ ಇತ್ತೀಚೆಗೆ ಕಾರ್ಗೋ ಸೇವೆಯ ಮೂಲಕ ಸರಕು ಸಾಗಾಣಿಕೆಯಲ್ಲಿಯೂ ಸಾಧನೆ ಮಾಡುತ್ತಿದ್ದು, ಪ್ರಯಾಣಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಸ್ವಚ್ಛತೆ, ವ್ಯವಸ್ಥಿತ ಪರಿಸರ ಹೀಗೆ ಹಲವಾರು ವಿಷಯ ವಸ್ತುಗಳ ಮಾನದಂಡವನ್ನು ಆಧರಿಸಿ ಅತ್ಯುತ್ತಮ ವಿಮಾನ ನಿಲ್ದಾಣ ಎಂಬ ಪ್ರಶಸ್ತಿಗೆ ಹುಬ್ಬಳ್ಳಿಯ ವಿಮಾನ ನಿಲ್ದಾಣ ಭಾಜನವಾಗಿರುವುದು ಹುಬ್ಬಳ್ಳಿಗೆ ಹೆಮ್ಮೆ ವಿಷಯವಾಗಿದೆ.
ಓಕೆ: ಚಾರ್ಜ್ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್ನಲ್ಲಿ ಬೆಂಕಿ, ಮಲಗಿದ್ದ ತಂದೆ-ಮಗಳು ಉಸಿರುಗಟ್ಟಿ ಸಾವು!