ETV Bharat / city

ಧಾರವಾಡ ಕಾರಾಗೃಹ: ಕೈದಿಗಳ ಜೊತೆ ಸಂಬಂಧಿಕರು ಮಾತನಾಡಲು ದಕ್ಷಿಣ ಕೊರಿಯಾ ಮಾದರಿ ವ್ಯವಸ್ಥೆ

ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಜೈಲುವಾಸಿಗಳು ತಮ್ಮ ಕುಟುಂಬ ಸದಸ್ಯರ ಜೊತೆ ತೀರಾ ವೈಯಕ್ತಿಕವಾಗಿ ಮಾತನಾಡಲು ದಕ್ಷಿಣ ಕೊರಿಯಾ ಮಾದರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.‌‌

darawada central jail
ಧಾರವಾಡ ಕೇಂದ್ರ ಕಾರಾಗೃಹ
author img

By

Published : Aug 20, 2021, 3:13 PM IST

Updated : Aug 20, 2021, 3:28 PM IST

ಧಾರವಾಡ: ಅಪರಾಧ ಪ್ರಕರಣದಡಿ ಜೈಲಿನಲ್ಲಿರುವ ಕೈದಿಗಳ ಜೊತೆ ಸಂಬಂಧಿಕರು ಮಾತನಾಡುವುದಕ್ಕೆ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ವಿದೇಶಿ ಮಾದರಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಧಾರವಾಡ ಕೇಂದ್ರ ಕಾರಾಗೃಹಕ್ಕೆ ಹೈಟೆಕ್ ಸ್ಪರ್ಶ

ದಕ್ಷಿಣ ಕೊರಿಯಾ ಮಾದರಿಯಲ್ಲಿ ವ್ಯವಸ್ಥೆ:

ಜೈಲುವಾಸಿಗಳು ತಮ್ಮ ಕುಟುಂಬ ಸದಸ್ಯರ ಜೊತೆ ತೀರಾ ವೈಯಕ್ತಿಕವಾಗಿ ಮಾತನಾಡಲು ದಕ್ಷಿಣ ಕೊರಿಯಾ ಮಾದರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.‌‌ ಇದರೊಂದಿಗೆ ಜೈಲಿನ ಒಳಗಡೆ ಇದ್ದವರ ಸುರಕ್ಷತಾ ದೃಷ್ಟಿಯಿಂದಲೂ ಹೈಟೆಕ್ ತಂತ್ರಜ್ಞಾನ ಅಳವಡಿಸಲಾಗಿದೆ.

ಕಾರಾಗೃಹಕ್ಕೆ ಹೈಟೆಕ್ ಸ್ಪರ್ಶ:

ಧಾರವಾಡ ಕೇಂದ್ರ ಕಾರಾಗೃಹಕ್ಕೆ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ. ಮೊದ‌ ಮೊದಲು ಸಂದರ್ಶಕ ಕೊಠಡಿಗಳಲ್ಲಿ ಸಂಬಂಧಿಕರು ತುಂಬಿ ತುಳುಕುತ್ತಿದ್ದರು. ಈ ಹಿನ್ನೆಲೆ, ಪರಸ್ಪರವಾಗಿ ಮಾತನಾಡಲು ಆಗುತ್ತಿರಲಿಲ್ಲ. ಹೀಗಾಗಿ ಧಾರವಾಡದ ಕಾರಾಗೃಹದಲ್ಲಿ ಸಂದರ್ಶಕರ ಕೊಠಡಿಯಲ್ಲಿ ಇದೀಗ ಕೈದಿಗಳು ಹಾಗೂ ಕುಟುಂಬ ಸದಸ್ಯರು ಎದುರು - ಬದುರು ಕುಳಿತುಕೊಂಡು ಪರಸ್ಪರ ಮಾತನಾಡಬಹುದಾಗಿದೆ.

ಟೆಲಿಫೋನ್ ಮೂಲಕ ಪರಸ್ಪರ ಮಾತುಕತೆ:

ಧಾರವಾಡದ ಕಾರಾಗೃಹದಲ್ಲಿ ಈಗ ವಿನೂತನ ತಂತ್ರಜ್ಞಾನದ ಮೂಲಕ ಕೈದಿಗಳು ಹಾಗೂ ಅವರ ಕುಟುಂಬದವರು ಪರಸ್ಪರ ಮಾತನಾಡಲು ವಿಭಿನ್ನ ಬಗೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಕೈದಿಗಳು ಕುಳಿತುಕೊಳ್ಳುವ ವಿಭಾಗ ಹಾಗೂ ಕುಟುಂಬದವರು ಕುಳಿತುಕೊಳ್ಳುವ ವಿಭಾಗದ ಮಧ್ಯೆ ಪಾರದರ್ಶಕ ಗಾಜನ್ನು ಅಳವಡಿಸಲಾಗಿದೆ.

ಅಲ್ಲದೇ ಕೈದಿಗಳು ಕುಳಿತುಕೊಳ್ಳಲು ಸಣ್ಣ ಸಣ್ಣ ಕೌಂಟರ್ ಕೂಡ ಮಾಡಲಾಗಿದೆ. ಅವರ ಎದುರಿನಲ್ಲಿ ಕುಟುಂಬದವರು ಕುಳಿತುಕೊಳ್ಳಲು ಕೂಡ ಅದೇ ವ್ಯವಸ್ಥೆ ಮಾಡಲಾಗಿದ್ದು, ಪರಸ್ಪರ ಮಾತನಾಡಲು ಟೆಲಿಫೋನ್ ಮೂಲಕ ವ್ಯವಸ್ಥೆ ಮಾಡಲಾಗಿದೆ.

ಬುಲೆಟ್ ಪ್ರೂಫ್ ವ್ಯವಸ್ಥೆ:

ಈ ಯೋಜನೆಗೆ ಒಟ್ಟು 18 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಇಬ್ಬರ ಮಧ್ಯೆ ಇರುವ ಗಾಜು ಬುಲೆಟ್ ಪ್ರೂಫ್ ಆಗಿದೆ. ಕುಟುಂಬದವರು ತಂದು ನೀಡುವ ಬ್ಯಾಗ್​​ಗಳನ್ನು ವಿಮಾನ ನಿಲ್ದಾಣದಲ್ಲಿನ ವ್ಯವಸ್ಥೆಯಂತೆ ಸ್ಕ್ಯಾನ್ ಮಾಡಲು ಹೈಟೆಕ್ ಯಂತ್ರಗಳನ್ನು ಅಳವಡಿಸಲಾಗಿದೆ. ಇನ್ನು ಸಂದರ್ಶಕರ ಕೊಠಡಿಗೆ ಬರುವ ಕೈದಿಗಳ ವಿವರ ಅಟೋಮ್ಯಾಟಿಕ್ ಯಂತ್ರದ ಮೂಲಕ ದಾಖಲಾಗುತ್ತದೆ. ಜೊತೆಗೆ ಕೈದಿಗಳು ಕುಳಿತುಕೊಳ್ಳುವ ಪ್ರದೇಶದಲ್ಲಿಯೂ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಹೀಗಾಗಿ ಇಲ್ಲಿ ಯಾವುದೇ ಅಹಿತರಕರ ಘಟನೆಗಳಿಗೆ ಅವಕಾಶ ಕಡಿಮೆ.

ಇದನ್ನೂ ಓದಿ: ಡಿ ದೇವರಾಜ ಅರಸು ನಮಗೆ ಆದರ್ಶ.. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಅವರ ಕನಸು.. ಸಿಎಂ ಬೊಮ್ಮಾಯಿ

ಒಟ್ಟಿನಲ್ಲಿ ಯಾವುದೇ ಒಂದು ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ಜೈಲು ಸೇರಿರುವವರಿಗೆ ಇದೀಗ ಅನುಕೂಲವಾಗಿದೆ. ಕೊರೊನಾ ಕಾರಣ ಕೆಲ ಸಲ ಸಂಬಂಧಿಕರ‌ ಜೊತೆ ಮಾತುಕತೆಗೆ ಅಡಚಣೆಯಾಗುತ್ತಿತ್ತು. ಆದರೆ ಈ ವ್ಯವಸ್ಥೆಯಿಂದ ಸಾಮಾಜಿಕ ಅಂತರ ಕೂಡ ಕಾಯ್ದುಕೊಂಡು ಮಾತನಾಡಬಹುದಾಗಿದೆ..

Last Updated : Aug 20, 2021, 3:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.