ಹುಬ್ಬಳ್ಳಿ: ನಿರಾಶ್ರಿತರು, ಕೊರೊನಾ ವಾರಿಯರ್ಸ್ಗಳಿಗೆ ಆಹಾರ ವಿತರಣೆ ಮಾಡುವ ಮೂಲಕ ಸಹಾಯಸ್ತ ಚಾಚಿದ ಗುರುದ್ವಾರ ಕಮಿಟಿಗೆ ಜಿಲ್ಲಾ ಬಿಜೆಪಿ ಪಕ್ಷದಿಂದ ಅಭಿನಂದನೆ ಸಲ್ಲಿಸಲಾಯಿತು.
ನಗರದ ಗುರುದ್ವಾರದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಅವರು ಗುರುದ್ವಾರ ಕಮಿಟಿ ಸದಸ್ಯರಾದ ಜಸ್ಮಿಲ್ಸಿಂಗ್, ಗ್ಯಾನಿಮೇಗಾರ ಸಿಂಗ್, ಜಸ್ಬಿರ್ ಸಿಂಗ್, ಸುಭಾಸ್ ಜೊತ್ವಾನಿ ಸೇರಿದಂತೆ ಹಲವರಿಗೆ ಸನ್ಮಾನಿಸಲಾಯಿತು. ಇದೇ ವೇಳೆ ಧಾರವಾಡ ಜಿಲ್ಲಾ ಬಿಜೆಪಿಯಿಂದ 21 ಸಾವಿರ ಚೆಕ್ ಅನ್ನು ಗುರುದ್ವಾರಕ್ಕೆ ಹಸ್ತಾಂತರಿಸಲಾಯಿತು. ಆದರೆ, ಗುರುದ್ವಾರ ಆಡಳಿತಮಂಡಳಿ ಅದೇ ಚೆಕ್ ಅ ನ್ನುಪಿಎಂ ಕೇರ್ ಫಂಡ್ಗೆ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ನಾಯಕರಾದ ರವಿ ನಾಯಕ್, ಮಾಗರಾಜ್ ಬಾಲ್ಕಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.