ಹುಬ್ಬಳ್ಳಿ: ಶಿಕ್ಷಣ ಕಲಿತ ವಿದ್ಯಾರ್ಥಿಗಳು ಮುಂದೆ ಏನು ಮಾಡುವುದು..? ಉದ್ಯೋಗ ಹೇಗೆ ಹುಡುಕುವುದು..? ಎಂಬ ಆಲೋಚನೆ ಮಾಡುವುದು ಸಹಜ. ಇಂತಹ ಸಂದಂರ್ಭದಲ್ಲಿ ತರಬೇತಿ ಕೇಂದ್ರವೊಂದು ಶಿಕ್ಷಣದ ಜೊತೆಗೆ ಉದ್ಯೋಗ ಕಲ್ಪಿಸುತ್ತಿದ್ದು, ಅದರ ಸಂಪೂರ್ಣ ವರದಿ ಇಲ್ಲಿದೆ.
ಓದಿ: ರಾಜ್ಯದಲ್ಲಿಂದು 590 ಮಂದಿಗೆ ಸೋಂಕು ದೃಢ; 6 ಮಂದಿ ಬಲಿ
ಗೋಕುಲ ರಸ್ತೆಯಲ್ಲಿನ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಸಂಸ್ಥೆ (ಜಿಟಿಟಿಸಿ) ಕೇವಲ ಶಿಕ್ಷಣಕ್ಕಷ್ಟೇ ಸೀಮಿತವಾಗಿಲ್ಲ. ಸದ್ಯದ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ನೂತನ ಕೋರ್ಸ್ ಪರಿಚಯಿಸುತ್ತಾ, ತರಬೇತಿ ನೀಡುತ್ತಾ ಯುವಜನರ ಉದ್ಯೋಗಕ್ಕೆ ವೇದಿಕೆ ಒದಗಿಸುತ್ತಾ ಬಂದಿದೆ.
ಸಾಮಾಜಿಕ ಚಟುವಟಿಕೆಗೂ ಕೇಂದ್ರ ತೆರೆದುಕೊಂಡಿದೆ. ಕೋವಿಡ್–19 ಪರಿಣಾಮ ಅದೆಷ್ಟೋ ವಿದ್ಯಾರ್ಥಿಗಳು ಕೆಲಸ ಕಳೆದುಕೊಂಡ ನಂತರವೂ ಸ್ವತಃ ಉದ್ಯೋಗ ಮಾಡಿಕೊಳ್ಳಲು ಸಹಾಯ ಮಾಡುತ್ತಿದೆ. 20 ಸಾವಿರ ಫೇಸ್ ಶೀಲ್ಡ್‌ಗಳನ್ನು ವಿವಿಧ ಸಂಸ್ಥೆಗಳಿಗೆ ತಯಾರಿಸಿ ಕೊಟ್ಟಿದ್ದು, ಇತರೆ ಪರಿಕರಗಳನ್ನು ಬೇಡಿಕೆ ಮೇರೆಗೆ ಪೂರೈಕೆ ಮಾಡಿದೆ.
ತರಬೇತಿ ಅವಧಿಯಲ್ಲೇ ಯಾವುದಾದರೂ ಕಂಪನಿಯಲ್ಲಿ ಉದ್ಯೋಗಕ್ಕೆ ಆಯ್ಕೆಯಾಗುತ್ತಾರೆ. ಇಲ್ಲ ಸ್ವಂತ ಉದ್ಯಮ ಆರಂಭಿಸುತ್ತಾರೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ನೆಚ್ಚಿನ ತರಬೇತಿ ಕೇಂದ್ರವಾಗಿದೆ. ಇನ್ನು ಎಸ್‌ಎಸ್‌ಎಲ್‌ಸಿಯಿಂದ ಹಿಡಿದು ಎಂಜಿನಿಯರಿಂಗ್ ಮುಗಿಸಿರುವವರು ಇಲ್ಲಿ ತರಬೇತಿ ಪಡೆದು ಬದುಕು ಕಟ್ಟಿಕೊಂಡಿದ್ದಾರೆ.
ಕಂಪನಿಗಳೊಂದಿಗೆ ಒಪ್ಪಂದ: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್, ಪಿಟಿಸಿ (ಪ್ಯಾರಾಮೆಟ್ರಿಕ್ ಟೆಕ್ನಾಲಜಿ ಇಂಡಿಯಾ), ಆಟೊಡೆಸ್ಕ್, ಆಶೀರ್ವಾದ್ ಪೈಪ್ಸ್, ವಿಶ್ವೇಶ್ವರ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಜಿಟಿಟಿಸಿಯೊಂದಿಗೆ ವಿವಿಧ ತರಬೇತಿಗಾಗಿ ಒಪ್ಪಂದ ಮಾಡಿಕೊಂಡಿವೆ.
ಸಿಎನ್‌ಸಿ, ಕ್ಯಾಡ್ ಕ್ಯಾಮ್, ಮೆಕ್ಯಾನಿಸ್ಟ್, ಟೂಲ್ ರೂಂ ಮೆಕ್ಯಾನಿಸ್ಟ್ ಹಾಗೂ ಟೂಲ್ ಮತ್ತು ಡೈ ಟೆಕ್ನಿಷಿಯನ್‌ನಂತಹ ಕೋರ್ಸ್‌ಗಳ ತರಬೇತಿ ನೀಡಲಾಗುತ್ತಿತ್ತು. ಈಗ ಅಡ್ವಾನ್ಸ್ಡ್ ತರಬೇತಿ ಆರಂಭಿಸಲಾಗಿದ್ದು, ಆಟೋ ಮೊಬೈಲ್, ತಂತ್ರಜ್ಞಾನ, ತಯಾರಿಕಾ ಕ್ಷೇತ್ರಗಳು ಹೆಚ್ಚಿನ ಬದಲಾವಣೆಗೆ ತೆರೆದುಕೊಂಡಿವೆ. ದೇಶದಲ್ಲಿ ಮೇಕ್ ಇನ್ ಇಂಡಿಯಾಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ಉದ್ಯೋಗ ತರಬೇತಿ ನೀಡುವ ಕೆಲಸ ಜಿಟಿಟಿಸಿ ತರಬೇತಿ ಕೇಂದ್ರ ಮಾಡುತ್ತಿದೆ.
ಒಟ್ಟಿನಲ್ಲಿ ಶಿಕ್ಷಣ ಕಲಿಸುವ ಜೊತೆಗೆ ಸ್ವತಃ ಉದ್ಯಮ ಹಾಗೂ ಉದ್ಯೋಗ ಕಲ್ಪಿಸುತ್ತಿರುವ ಜಿಟಿಟಿಸಿ ತರಬೇತಿ ಕೇಂದ್ರ ಕಾರ್ಯಕ್ಕೆ ಎಲ್ಲಾ ವರ್ಗದ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.