ಹುಬ್ಬಳ್ಳಿ : ಆರ್‌ಟಿ ಗೋಲ್ಡ್ ಎಂಬ ಆ್ಯಪ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಅಧಿಕ ಹಣ ಗಳಿಸಬಹುದು ಎಂದು ನಂಬಿಸಿ ನಗರದ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ 4,27,010 ರೂ. ಹಣ ವರ್ಗಾಯಿಸಿಕೊಂಡು ವಂಚಿಸಿರುವ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Hubli fraud case : ಸಲೇನಾ ಎಂಬ ಮಹಿಳೆ ಪ್ರಕರಣದ ಆರೋಪಿಯಾಗಿದ್ದಾರೆ. ಹುಬ್ಬಳ್ಳಿಯ ನವನಗರ ಕೆಹೆಚ್‌ಬಿ ಕಾಲೋನಿ ನಿವಾಸಿ ಸುಧಾಕರ ಕುರ್ಲೇಕರ್ ಎಂಬುವರು ವಂಚನೆಗೀಡಾದವರು.
ಆರ್‌ಟಿ ಗೋಲ್ಡ್ ಆ್ಯಪ್‌ನಲ್ಲಿ ಹಣ ಹೂಡಿದರೆ ಅಧಿಕ ಲಾಭ ಗಳಿಸಬಹುದು ಎಂದು ಸುಧಾಕರ್ ಅವರ ಸ್ನೇಹಿತ ರಾಜೇಶ ಜಾಧವ್ ಅಕ್ಟೋಬರ್ 10ರಂದು ಐಡಿ ಕ್ರಿಯೇಟ್ ಮಾಡಿಕೊಟ್ಟಿದ್ದರು.
ವಂಚನೆ : ನಂತರ ಆ್ಯಪ್ ಮ್ಯಾನೇಜರ್ ಎಂದು ಹೇಳಿಕೊಂಡ ಸಲೇನಾ ಎಂಬ ಮಹಿಳೆ ಸುಧಾಕರ್ ಅವರನ್ನು ವಾಟ್ಸ್‌ಆ್ಯಪ್ ಮೂಲಕ ಸಂಪರ್ಕಿಸಿದ್ದರು. ಹಣ ಹೂಡಿಕೆ ಬಗ್ಗೆ ಸೂಚನೆಗಳನ್ನು ನೀಡಿದ್ದರು.
ಪ್ರಾರಂಭದಲ್ಲಿ ಸ್ವಲ್ಪ ಲಾಭ ಕೊಟ್ಟು ನಂಬಿಕೆ ಹುಟ್ಟಿಸಿದ್ದರು. ಬಳಿಕ ಹೆಚ್ಚು ಹಣ ಹೂಡಿಕೆ ಮಾಡಿಸಿಕೊಂಡು ಲಾಭವನ್ನು ಕೊಡದೇ ವಂಚಿಸಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ.
ಇದನ್ನೂ ಓದಿ: ಬೆಳ್ತಂಗಡಿ : ಮೌಢ್ಯಕ್ಕೆ ಬಲಿಯಾದ ಹೂ ಬಿಟ್ಟ ಅಪರೂಪದ 'ಶ್ರೀತಾಳೆ' ಮರ
ಘಟನೆಯ ಕುರಿತು ಹುಬ್ಬಳ್ಳಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.