ಹುಬ್ಬಳ್ಳಿ: ಪ್ರಾಣಿಗಳ ಮೇಲೆ ಎಲ್ಲರಿಗೂ ಒಂದಿಲ್ಲೊಂದು ರೀತಿಯಲ್ಲಿ ಪ್ರೇಮ, ಕರುಣೆ ಇದ್ದೇ ಇರುತ್ತದೆ. ಆದರೆ, ಸಾಕಿದ ಪ್ರಾಣಿಗಳ ಮೇಲೆ ಅದೆಷ್ಟೋ ಜನರು ತಮ್ಮ ಪ್ರಾಣವನ್ನೇ ಇಟ್ಟುಕೊಂಡಿರುತ್ತಾರೆ. ತಮ್ಮ ನೆಚ್ಚಿನ ನಾಯಿ ಹಾಗೂ ಬೆಕ್ಕಿನ ಅಗಲಿಕೆಗೆ ಅದೆಷ್ಟೋ ಜನರು ಮಾನಸಿಕವಾಗಿ ಕುಗ್ಗಿ ಹೋಗಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಸಾಹಸಿ ತನ್ನ ಸಾಕಿದ ನಾಯಿಯ ಪ್ರಾಣ ಉಳಿಸಲು ತನ್ನ ಜೀವದ ಹಂಗು ತೊರೆದು ಹೋರಾಟ ನಡೆಸಿದ್ದಾನೆ.
ನಗರದ ಗೊಪ್ಪನಕೊಪ್ಪದಲ್ಲಿ ಮೂರು ಬೀದಿ ನಾಯಿಗಳು ಒಂದೇ ನಾಯಿಯ ಮೇಲೆ ಅಟ್ಯಾಕ್ ಮಾಡಿವೆ. ತನ್ನ ಮನೆಯ ದಾಳಿ ಮಾಡಿರುವುದನ್ನು ಗಮಿನಿಸಿದ ಮಾಲಿಕ ತನ್ನ ನಾಯಿಯನ್ನು ರಕ್ಷಿಸಲು ಮುಂದಾಗಿದ್ದಾನೆ. ಬೀದಿ ನಾಯಿಗಳು ಸಾಕು ನಾಯಿಯ ಗಂಟಲು ಭಾಗವನ್ನು ಬಿಗಿಯಾಗಿ ಕಚ್ಚಿ ಹಿಡಿದಿದ್ದು, ತನ್ನ ನಾಯಿಯ ಜೀವ ರಕ್ಷಿಸಲು ಮಾಲಿಕ ಹರಸಾಹಸ ಪಟ್ಟಿರುವ ದೃಶ್ಯ ಸೆರೆಯಾಗಿದೆ.
ಇನ್ನೂ ಅದೆಷ್ಟೋ ಜಗ್ಗಾಡಿದರೂ ಕೂಡ ನಾಯಿಗಳು ಬಿಡದಿದ್ದಾಗ ಕಲ್ಲಿನಿಂದ ಹೊಡೆದು ನಾಯಿಗಳ ಜಗಳವನ್ನು ಬಿಡಿಸಿ ತನ್ನ ನಾಯಿಯನ್ನು ರಕ್ಷಣೆ ಮಾಡಿದ್ದಾನೆ. ಬೀದಿ ನಾಯಿಗಳ ಹಾವಳಿಯಿಂದ ಅದೆಷ್ಟೋ ಜೀವಗಳು ಬಲಿಯಾಗಿರುವ ಸುದ್ಧಿಯನ್ನು ಕೇಳಿದ್ದೇವೆ ನೋಡಿದ್ದೇವೆ. ಆದರೆ ಹುಬ್ಬಳ್ಳಿಯ ಗೋಪನಕೊಪ್ಪದ ಈ ಸಾಹಸಿ ತನ್ನ ನಾಯಿಗಾಗಿ ಜೀವದ ಹಂಗು ತೊರೆದು ಹೋರಾಟ ನಡೆಸಿರುವ ವಿಡಿಯೋ ಈಗ ವೈರಲ್ ಆಗಿದ್ದು ನಾಯಿ ಪ್ರೇಮಿಯ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಚಡ್ಡಿ ಮಾನವ ಕುಲದ ಗೌರವ ಕಾಪಾಡುವ ಸಂಕೇತ: ಛಲವಾದಿ ನಾರಾಯಣ ಸ್ವಾಮಿ