ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ಅನೇಕ ಪ್ರತಿಭೆಗಳಿದ್ದು, ಅವರೆಲ್ಲರೂ ಅವಕಾಶಗಳನ್ನು ಬಳಸಿಕೊಂಡು ಮುನ್ನುಗ್ಗುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಪೇಡಾ ನಗರಿಯ ಯುವತಿಯೊಬ್ಬರು ಈಜಿಪ್ಟ್ನಲ್ಲಿ ನಡೆಯಲಿರುವ ಮಿಸ್ ಎಕೋ ಟೀನ್ ಇಂಟರ್ ನ್ಯಾಷನಲ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ.
ಧಾರವಾಡದ ಏಕನಾಥ್ ಟಿಕಾರೆ, ಶೈಲಾ ಟಿಕಾರೆ ದಂಪತಿಯ ಮಗಳಾದ ಖುಷಿ ಟಿಕಾರೆ ಎಂಬಾಕೆ ಮಿಸ್ ಎಕೋ ಟೀನ್ ಇಂಟರ್ ನ್ಯಾಷನಲ್ ಸ್ಪರ್ಧೆಯಲ್ಲಿ ಭಾರತದಿಂದ ಏಕೈಕ ಯುವತಿಯಾಗಿ ಭಾಗವಹಿಸುತ್ತಿದ್ದಾರೆ. ಯುವತಿ ಜೆಎಸ್ಎಸ್ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾರೆ.
ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಬ್ಯೂಟಿ ಕಂಟೆಸ್ಟಂಟ್ ಸ್ಪರ್ಧೆಯಲ್ಲಿ 50 ಅಭ್ಯರ್ಥಿಗಳ ನಡುವೆ ಏಕೈಕ ಯುವತಿಯಾಗಿ ಖುಷಿ ಟಿಕಾರೆ ಆಯ್ಕೆಯಾಗಿದ್ದು, ಇದಕ್ಕೆ ಖುಷಿ ಟಿಕಾರೆ ಪಾಲಕರು ಸಂತಸ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಮೂಲದ ತಕ್ಷನ್ ರಾಮ್ ಅವರ ಆರ್ಕಿಡ್ ಇವೆಂಟ್ಸ್ ಇಂಟರ್ ನ್ಯಾಷನಲ್ ಮೂಲಕ ನಡೆಸಲಾದ ಮಿಸ್ ಎಕೋ ಟೀನ್ ಇಂಟರ್ ನ್ಯಾಷನಲ್ ಇಂಡಿಯಾ ಖುಷಿ ಟಿಕಾರೆ ಜಯಗಳಿಸಿದ್ದು, ಈಜಿಪ್ಟ್ಗೆ ತೆರಳಲಿದ್ದಾರೆ. ಡಿಸೆಂಬರ್ 10ರಂದು ನಡೆಯಲಿರುವ ಈ ಸ್ಪರ್ಧೆಯಲ್ಲಿ ಖುಷಿ ಜಯಶಾಲಿಯಾಗಲಿ ಎಂಬುದು ಎಲ್ಲರ ಆಶಯ.
ಇದನ್ನೂ ಓದಿ: ಇಂಜಿನಿಯರಿಂಗ್ ಪರೀಕ್ಷೆ ಬರೆದ ನಕಲಿ ಹಾಗೂ ಅಸಲಿ ವಿದ್ಯಾರ್ಥಿಗೆ 6 ತಿಂಗಳ ಜೈಲು ಶಿಕ್ಷೆ!