ETV Bharat / city

ದೇವಾಂಗ ಸಮಾಜದವರಿಗೆ 'ಅಭಿವೃದ್ಧಿ ನಿಗಮ' ಸ್ಥಾಪಿಸುವಂತೆ ಆಗ್ರಹಿಸಿ ಪ್ರತಿಭಟನೆ

ದೇವಾಂಗ ಸಮಾಜ ಅಖಂಡ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ವಾಸಿಸುವ ಬಹುದೊಡ್ಡ ಸಮಾಜ. ಆದರೂ ಸಹ ರಾಜಕೀಯ, ಶೈಕ್ಷಣಿಕ ರಂಗಗಳಲ್ಲಿ ಹಿಂದುಳಿದ ಸಮಾಜವಾಗಿದೆ.

Devanga society Protest in Hubli
'ಅಭಿವೃದ್ಧಿ ನಿಗಮ' ಸ್ಥಾಪಿಸುವಂತೆ ಆಗ್ರಹಿಸಿ ಪ್ರತಿಭಟನೆ
author img

By

Published : Feb 10, 2021, 3:43 PM IST

ಹುಬ್ಬಳ್ಳಿ: ದೇವಾಂಗ ಸಮಾಜದವರಿಗೆ 'ಅಭಿವೃದ್ಧಿ ನಿಗಮ' ಸ್ಥಾಪಿಸುವಂತೆ ಆಗ್ರಹಿಸಿ ನೇಕಾರ ದೇವಾಂಗ ಸಮಾಜದವರು ಪ್ರತಿಭಟನೆ ನಡೆಸಿದರು.

ದೇವಾಂಗ ಸಮಾಜದವರಿಗೆ 'ಅಭಿವೃದ್ಧಿ ನಿಗಮ' ಸ್ಥಾಪಿಸುವಂತೆ ಆಗ್ರಹಿಸಿ ಪ್ರತಿಭಟನೆ

ನಗರದ ತಹಶೀಲ್ದಾರ್​ರ ಕಚೇರಿ ಎದುರು ಪ್ರತಿಭಟನೆ ನಡೆಸಿದ ನೇಕಾರ ದೇವಾಂಗ ಸೇವೆ ಸಮಿತಿಯ ಸದಸ್ಯರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದೇವಾಂಗ ಸಮಾಜ ಅಖಂಡ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ವಾಸಿಸುವ ಬಹುದೊಡ್ಡ ಸಮಾಜ. ಆದರೂ ಸಹ ರಾಜಕೀಯ, ಶೈಕ್ಷಣಿಕ ರಂಗಗಳಲ್ಲಿ ಹಿಂದುಳಿದ ಸಮಾಜವಾಗಿದೆ. ನಮ್ಮ ಸಮಾಜ ಆರ್ಥಿಕವಾಗಿ ಸಬಲವಾಗಿಲ್ಲದ ಕಾರಣ ಉನ್ನತ ಶಿಕ್ಷಣ ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ನಿಲುಕದಂತಾಗಿದೆ.

ಉದ್ಯಮ ಕ್ಷೇತ್ರದಲ್ಲಿ ದೇವಾಂಗ ಸಮಾಜದವರು ಬೆರಳೆಣಿಕೆಯಷ್ಟು ಮಾತ್ರ ಇದ್ದಾರೆ. ನೇಕಾರಿಕೆಯನ್ನು ಅವಲಂಬಿಸಿ ಬದುಕುತ್ತಿರುವ ನೇಕಾರ ವರ್ಗ ಕೆಲವು ಊರುಗಳಲ್ಲಿ ಅಧಿಕವಾಗಿದ್ದು, ಅವರ ಮಕ್ಕಳಿಗೆ ಕರ್ನಾಟಕ ಸರ್ಕಾರದಿಂದ ಶಿಕ್ಷಣ, ಆರೋಗ್ಯ ಸೇವೆ ಸೇರಿದಂತೆ ಇನ್ನಿತರ ಸೌಲಭ್ಯಗಳು ದೊರೆಯುತ್ತಿಲ್ಲ. ಆದ್ದರಿಂದ ಸರ್ಕಾರ ಈ ಎಲ್ಲಾ ಅಂಶಗಳನ್ನು ಗಮನಿಸಿ ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಆಗ್ರಹಿಸಿ ತಹಶೀಲ್ದಾರರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.