ETV Bharat / city

ಬಿಜೆಪಿ ಕೋಟೆಗೆ ಲಗ್ಗೆ ಇಡಲಿದೆಯೇ ಕೈ ಪಾಳಯ... ಇಲ್ಲಿದೆ ಧಾರವಾಡ ಲೋಕಸಭಾ ಕ್ಷೇತ್ರದ ಡಿಟೇಲ್ಸ್​

ಸದ್ಯ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಭದ್ರವಾಗಿ ನೆಲೆಯೂರಿದೆ. ಈ ಬಾರಿಯೂ ತನ್ನ ಬುನಾದಿಯನ್ನ ಮತ್ತಷ್ಟು ಗಟ್ಟಿಗೊಳಿಸಲು ಬಿಜೆಪಿ ಶತಾಯ-ಗತಾಯ ಪ್ರಯತ್ನಿಸುತ್ತಿದೆ. ಧಾರವಾಡ ಲೋಕಸಭಾ ಕ್ಷೇತ್ರದ ಕಂಪ್ಲೀಟ್​ ಡಿಟೇಲ್ಸ್​ ಇಲ್ಲಿದೆ ನೋಡಿ...

ಹುಬ್ಬಳ್ಳಿ ನಗರ
author img

By

Published : Mar 25, 2019, 11:39 PM IST

ಹುಬ್ಬಳ್ಳಿ: ಸಾಹಿತ್ಯ, ಸಂಗೀತ, ಹೋರಾಟ, ಶಿಕ್ಷಣದ ತವರು ಧಾರವಾಡ. ಕರ್ನಾಟಕ ವಿಶ್ವವಿದ್ಯಾನಿಲಯ, ಕೃಷಿ ವಿಶ್ವವಿದ್ಯಾನಿಲಯ, ಐಐಟಿಗಳಿಂದಾಗಿ ಶಿಕ್ಷಣ ಕಾಶಿ ಎಂಬ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಹೈಕೋರ್ಟ್ ಸಂಚಾರಿ ಪೀಠ, ನೈಋತ್ಯ ರೈಲ್ವೆ ವಲಯ, ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ತನ್ನ ಒಡಲಲ್ಲಿ ಹೊಂದಿರುವ ಜಿಲ್ಲೆ ಈ ಧಾರವಾಡ.

2008ರ ಕ್ಷೇತ್ರ ಪುನರ್ ವಿಂಗಡನೆಗಿಂತ ಮೊದಲು ಧಾರವಾಡ ಉತ್ತರ ಲೋಕಸಭಾ ಕ್ಷೇತ್ರವೆಂದು ಇದನ್ನು ಕರೆಯಲಾಗುತ್ತಿತ್ತು. ಧಾರವಾಡ ಜಿಲ್ಲೆಯ 7, ಹಾವೇರಿ ಜಿಲ್ಲೆಯ ಶಿಗ್ಗಾಂವ್​ ವಿಧಾನ ಸಭೆ ಕ್ಷೇತ್ರ ಸೇರಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಿ ಧಾರವಾಡ ಲೋಕಸಭಾ ಕ್ಷೇತ್ರವನ್ನ ರಚನೆ ಮಾಡಲಾಗಿದೆ. ವಿಶೆಷ ಅಂದ್ರೆ, 1991ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಿವಂಗತ ಡಿ.ಕೆ. ನಾಯ್ಕರ್ ಕೊನೆಯದಾಗಿ ಕಾಂಗ್ರೆಸ್​ನಿಂದ ಆಯ್ಕೆಯಾಗಿದನ್ನು ಬಿಟ್ರೆ, ನಿರಂತರ 6 ಬಾರಿ ಬಿಜೆಪಿ ಅಭ್ಯರ್ಥಿಗಳೇ ಸತತವಾಗಿ ಧಾರವಾಡ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾಗುತ್ತಾ ಬಂದಿದ್ದಾರೆ.

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಬುನಾದಿಯನ್ನು ಮತ್ತಷ್ಟು ಭದ್ರಪಡಿಸಲು ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಕಾಂಗ್ರೆಸ್ ಕೂಡ ಕ್ಷೇತ್ರವನ್ನು ತೆಕ್ಕೆಗೆ ತೆಗೆದುಕೊಳ್ಳಲು ಕಾರ್ಯತಂತ್ರ ರೂಪಿಸುತ್ತಿದ್ದು, ರಾಷ್ಟ್ರೀಯ ಪಕ್ಷಗಳ ನೇರ ಹಣಾಹಣಿಯಿಂದ ಕುತೂಹಲ ಕೆರಳಿಸಿದೆ. ಕಳೆದ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದ ವಿನಯ್​ ಕುಲಕರ್ಣಿಗೆ ಈ ಬಾರಿಯೂ ಟಿಕೆಟ್ ಸಿಗಬಹುದು ಎನ್ನಲಾಗುತ್ತಿದೆ. ಆದ್ರೆ ಧಾರವಾಡ ಕಟ್ಟಡ ದುರಂತ ಪ್ರಕರಣದಿಂದ ಹಿನ್ನಡೆಯಾಗಿದೆ.

ದುರಂತ ಕಟ್ಟಡ ವಿನಯ ಕುಲಕರ್ಣಿಯವರ ಮಾವನಿಗೆ ಸಂಬಂಧಿಸಿದ್ದು ಎಂಬ ಕಾರಣಕ್ಕೆ ಟಿಕೆಟ್ ಕೈ ತಪ್ಪುವ ಆತಂಕದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸದಾನಂದ ಡಂಗನವರ್ ಹಾಗೂ ಮಾಜಿ ಸಚಿವ ಸಂತೋಷ್ ಲಾಡ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈ ಬಾರಿ ಧಾರವಾಡ ಕ್ಷೇತ್ರವನ್ನ ಅಲ್ಪಸಂಖ್ಯಾತ ಕೋಟಾದಡಿಯಲ್ಲಿ ಮುಸ್ಲಿಮರಿಗೆ ಬಿಟ್ಟುಕೊಡಬೇಕೆಂಬ ಮಾತು ಜೋರಾಗಿ ಕೇಳಿ ಬರುತ್ತಿದೆ. ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಸಿ.ಎಂ ಇಬ್ರಾಹಿಂ, ಮಾಜಿ ಸಂಸದ ಐಜಿ ಸನದಿ ಪುತ್ರ ಶಾಕೀರ್ ಸನದಿ ಟಿಕೆಟ್​ಗಾಗಿ ಪ್ರಯತ್ನ ನಡೆಸಿದ್ದಾರೆ.

ಹ್ಯಾಟ್ರಿಕ್ ಜಯ ಸಾಧಿಸಿರುವ ಸಂಸದ ಪ್ರಹ್ಲಾದ್​ ಜೋಶಿ ಅವರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಲು, ದೋಸ್ತಿಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಹರಸಾಹಸ ಪಡುತ್ತಿದ್ದು, ಇಲ್ಲೂ ಮೈತ್ರಿ ಖಚಿತವಾಗಿದೆ. ಪ್ರಬಲ ಕೋಮುಗಳಾದ ಲಿಂಗಾಯತ ಹಾಗೂ ಹಿಂದುಳಿದ ವರ್ಗದವರಿಗೆ ಟಿಕೆಟ್ ನೀಡಿದ್ರೆ ಮಾತ್ರ ಬ್ರಾಹ್ಮಣ ಸಮುದಾಯದ ಪ್ರಹ್ಲಾದ್​ ಜೋಶಿ ಅವರನ್ನ ಕಟ್ಟಿಹಾಕಲು ಸಾಧ್ಯ ಅನ್ನೊ ಸುದ್ದಿ ದೋಸ್ತಿಗಳ ಪಾಳಯದಿಂದ್ಲೇ ಕೇಳಿ ಬರ್ತಿದೆ.

ಹುಬ್ಬಳ್ಳಿ ನಗರ

ಜೋಶಿಗೆ ಪ್ಲಸ್ ಪಾಯಿಂಟ್ಸ್..

ಇನ್ನು ಸಂಸದ ಪ್ರಹ್ಲಾದ ಜೋಶಿ ಅವರ ಕೆಲಸ ನಮಗೆ ತೃಪ್ತಿದಾಯಕವಾಗಿದೆ ಅಂತ ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಸಂಸದ ಪ್ರಹ್ಲಾದ್ ಜೋಶಿಯವರು ಕೇಂದ್ರದಿಂದ ಸ್ಮಾರ್ಟ್​ ಸಿಟಿ, ಐಐಟಿ ಮತ್ತು ಏಮ್ಸ್ ಅನ್ನು ಹುಬ್ಬಳ್ಳಿ- ಧಾರವಾಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಅನ್ನೋ ಮಾತು ಇದೆ. ಮುಖ್ಯವಾಗಿ 6 ಸಾವಿರ ಕೋಟಿ ರೂಪಾಯಿ ಸಿರ್​ಎಫ್ ಅನುದಾನ ತಂದು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಹಾಗೂ ನಗರ ರಸ್ತೆಗಳನ್ನು ಅಭಿವೃದ್ಧಿ ಮಾಡಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣವನ್ನ ಅಂತಾರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೇರಿಸಲು ವಿಶೇಷ ಅನುದಾನ ತಂದಿರುವುದಲ್ಲದೇ, ಸಾಕಷ್ಟು ವಾಣಿಜ್ಯ ನಗರಗಳಿಗೆ ಹುಬ್ಬಳ್ಳಿಯನ್ನ ಸಂಪರ್ಕ ಕೊಂಡಿಯನ್ನಾಗಿ ಮಾಡಿದ್ದಾರೆ. ಹುಬ್ಬಳ್ಳಿ ರೈಲ್ವೇ ನಿಲ್ದಾಣ ಮತ್ತು ವರ್ಕ್​ಶಾಪ್ ಅಧುನೀಕರಣ ಹಾಗೂ ಗುಡ್​ಶೆಡ್ ನಿರ್ಮಾಣ, ಐವತ್ತು ಹಾಸಿಗೆಗಳ ರಾಜ್ಯ ಕಾರ್ಮಿಕ ವಿಮಾ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲು ಶ್ರಮಿಸಿದ್ದಾರೆ. ಅಲ್ಲದೆ, ಕ್ಲೀನ್ ಇಮೇಜ್ ಮತ್ತು ಸುಲಭ ಲಭ್ಯತೆಯ ಕಾರಣ ಜನರಲ್ಲಿ ಉತ್ತಮ ಅಭಿಪ್ರಾಯವಿದೆ.

ಮೈನಸ್ ಪಾಯಿಂಟ್ಸ್...

ಸಂಸದರನ್ನ ಕೊಂಡಾಡೋ ವರ್ಗ ಒಂದೆಡೆಯಾದ್ರೆ, ಅವರೇನೂ ಹೇಳಿಕೊಳ್ಳೊ ಅಭಿವೃದ್ಧಿ ಕೆಲ್ಸ ಮಾಡಿಲ್ಲ ಅನ್ನೊ ವರ್ಗದವರೂ ಇದ್ದಾರೆ. ಪ್ರಮುಖವಾಗಿ ಮಹದಾಯಿ ಮತ್ತು ಕಳಸಾ- ಬಂಡೂರಿ ಯೋಜನೆಗೆ ಸಂಬಂಧಿಸಿದಂತೆ ತೀರ್ಪು ಬಂದ್ರೂ ಕೂಡ, ಕೇಂದ್ರದಿಂದ ಗೆಜೆಟ್ ಹೊರಡಿಸಲು ಶ್ರಮಿಸಿಲ್ಲ. ಅಲ್ಲದೆ, ಉದ್ಯೋಗ ಸೃಷ್ಟಿಯಲ್ಲಿ ವಿಫಲರಾಗಿದ್ದು, ವಿದ್ಯಾವಂತ ಯುವಕರು ಕೆಲಸ ಅರಸಿ ಹೊರ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ದೊಡ್ಡ ಉದ್ಯಮ ಮತ್ತು ಕೈಗಾರಿಕೆಗಳನ್ನು ತರುವುದು ಈವರೆಗೂ ಸಾಧ್ಯವಾಗಿಲ್ಲ. ಸಿಆರ್​ಎಫ್ ಅಡಿ ಸಾವಿರಾರು ಕೋಟಿ ಅನುದಾನ ಬಂದರೂ ಕಾಮಗಾರಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಹಾಗೂ ವಿಮಾನ ನಿಲ್ದಾಣ ಅಭಿವೃದ್ಧಿಗೆ ಜಮೀನನ್ನ ಸ್ವಾಧೀನ ಪಡಿಸಿಕೊಂಡ ಜಮೀನು ಮಾಲಿಕರಿಗೆ ಈವರೆಗೂ ಹೆಚ್ಚುವರಿ ಹಣ ಕೊಡಿಸಿಲ್ಲ. ಸಂಸದರ ಆದರ್ಶ ಗ್ರಾಮ ನಿರೀಕ್ಷಿತ ಅಭಿವೃದ್ಧಿ ಕಂಡಿಲ್ಲ ಎಂದು ಸಾಕಷ್ಟು ಆರೋಪಗಳು ಪ್ರಹ್ಲಾದ್​ ಜೋಶಿ ಅವರನ್ನ ಸುತ್ತಿಕೊಂಡಿವೆ.

ಧಾರವಾಡ ಲೋಕಸಭಾ ಕ್ಷೇತ್ರ (11)

ಕ್ಷೇತ್ರದ ಒಟ್ಟು ಮತದಾರರು - 16,88,067
ಮಹಿಳಾ ಮತದಾರರು - 8,58,370
ಪುರುಷ ಮತದಾರರು - 8,29,697

ಧಾರವಾಡ ಲೋಕಸಭಾ ಕ್ಷೇತ್ರದ ಹಾಲಿ ಸಂಸದರು ಮತ್ತು ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿನ ಹಾಲಿ ಶಾಸಕರ ವಿವರ.

ಹಾಲಿ ಸಂಸದ- ಪ್ರಹ್ಲಾದ್​ ಜೋಶಿ- ಬಿಜೆಪಿ

ಹಾಲಿ ಶಾಸಕರು...

1. ನವಲಗುಂದ - ಬಿಜೆಪಿ - ಶಂಕರ್‌ ಪಾಟೀಲ್‌ ಮುನೇನಕೊಪ್ಪ.
2. ಕುಂದಗೋಳ - ಕಾಂಗ್ರೆಸ್‌ - ಪೌರಾಡಳಿತ ಸಚಿವ- ಸಿ.ಎಸ್. ಶಿವಳ್ಳಿ.
3. ಧಾರವಾಡ ಗ್ರಾಮೀಣ - ಬಿಜೆಪಿ - ಅಮೃತ್ ದೇಸಾಯಿ.
4. ಹುಬ್ಬಳ್ಳಿ- ಧಾರವಾಡ ಪೂರ್ವ - ಕಾಂಗ್ರೆಸ್‌ - ಪ್ರಸಾದ್‌ ಅಬ್ಬಯ್ಯ- ಲಿಡ್ಕರ್‌ ನಿಗಮದ ಅಧ್ಯಕ್ಷ.
5. ಹುಬ್ಬಳ್ಳಿ- ಧಾರವಾಡ ಕೇಂದ್ರ - ಬಿಜೆಪಿ - ಜಗದೀಶ್ ಶೆಟ್ಟರ್- ಮಾಜಿ ಸಿಎಮ್.
6. ಹುಬ್ಬಳ್ಳಿ- ಧಾರವಾಡ ಪಶ್ಚಿಮ- ಬಿಜೆಪಿ - ಅರವಿಂದ್ ಬೆಲ್ಲದ್.
7. ಕಲಘಟಗಿ - ಬಿಜೆಪಿ - ಸಿ.ಎಮ್. ನಿಂಬಣ್ಣವರ್.
8. ಶಿಗ್ಗಾವಿ - ಬಿಜೆಪಿ - ಬಸವರಾಜ್ ಬೊಮ್ಮಾಯಿ.

ಕ್ಷೇತ್ರದ ವ್ಯಾಪ್ತಿಯಲ್ಲಿರುವ ಎಂಟು ವಿಧಾನಸಭಾ ಕ್ಷೇತ್ರಗಳ ಹೆಸರು ಮತ್ತು ಸಂಖ್ಯೆ.
ಕ್ಷೇತ್ರ ಮತ್ತು ಸಂಖ್ಯೆ - ಒಟ್ಟು ಮತದಾರರು.
1. ನವಲಗುಂದ (69) - 2,03,245
2. ಕುಂದಗೋಳ (70) - 1,86,339
3. ಧಾರವಾಡ ಗ್ರಾಮೀಣ (71) - 2,07,663
4. ಹುಬ್ಬಳ್ಳಿ- ಧಾರವಾಡ ಪೂರ್ವ (72) - 1,93,126
5. ಹುಬ್ಬಳ್ಳಿ- ಧಾರವಾಡ ಕೇಂದ್ರ (73) - 2,39,717
6. ಹುಬ್ಬಳ್ಳಿ- ಧಾರವಾಡ ಪಶ್ಚಿಮ (74) - 2,34,548
7. ಕಲಘಟಗಿ (75) - 1,90,540
8. ಶಿಗ್ಗಾವಿ (83) (ಹಾವೇರಿ ಜಿಲ್ಲೆ) - 2,13,089

ಕ್ಷೇತ್ರದಲ್ಲಿ 1952ರಿಂದ ಸತತವಾಗಿ ಹತ್ತು ಬಾರಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆದ್ದಿದ್ದಾರೆ ಹಾಗೂ 1996ರಿಂದ ಸತತವಾಗಿ ಆರುಬಾರಿ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ.

ಕಳೆದ ಚುನಾವಣಾ ಫಲಿತಾಂಶ ಮತ್ತು ಗೆಲುವಿನ ಅಂತರ.

ಪ್ರಹ್ಲಾದ್ ಜೋಶಿ - ಬಿಜೆಪಿ - 545395
ವಿನಯ ಕುಲಕರ್ಣಿ- ಕಾಂಗ್ರೆಸ್‌ - 431738
ಗೆಲುವಿನ ಅಂತರ - 113657

ಕಳೆದ ಐದು ಚುನಾವಣೆಗಳಲ್ಲಿ ಗೆದ್ದವರು ಮತ್ತು ಎರಡನೆಯ ಸ್ಥಾನ ಪಡೆದ ಅಭ್ಯರ್ಥಿಗಳು ಪಡೆದ ಮತಗಳ ವಿವರ.
2014ರ ಚುನಾವಣಾ ಫಲಿತಾಂಶ.
ಪ್ರಹ್ಲಾದ್ ಜೋಶಿ - ಬಿಜೆಪಿ - 545395
ವಿನಯ ಕುಲಕರ್ಣಿ - ಕಾಂಗ್ರೆಸ್‌ - 431738

2009ರ ಚುನಾವಣಾ ಫಲಿತಾಂಶ
ಪ್ರಹ್ಲಾದ್ ಜೋಶಿ - ಬಿಜೆಪಿ - 446786
ಮಂಜುನಾಥ್ ಕುನ್ನೂರ್ - ಕಾಂಗ್ರೆಸ್ - 309123

2004ರಲ್ಲಿ ಧಾರವಾಡ ಉತ್ತರ ಲೋಕಸಭಾ ಕ್ಷೇತ್ರ ಎಂದು ಕರೆಯಲ್ಪಡುತ್ತಿತ್ತು.
2004ರ ಚುನಾವಣಾ ಫಲಿತಾಂಶ
ಪ್ರಹ್ಲಾದ್ ಜೋಶಿ - ಬಿಜೆಪಿ - 385084
ಬಿ.ಎಸ್. ಪಾಟೀಲ್ - ಕಾಂಗ್ರೆಸ್- 302006

1999ರ ಚುನಾವಣಾ ಫಲಿತಾಂಶ
ವಿಜಯ ಸಂಕೇಶ್ವರ್‌ - ಬಿಜೆಪಿ - 345197
ವೀರಣ್ಣ ಮತ್ತಿಕಟ್ಟಿ - ಕಾಂಗ್ರೆಸ್- 303595

1998ರ ಚುನಾವಣಾ ಫಲಿತಾಂಶ
ವಿಜಯ ಸಂಕೇಶ್ವರ್‌ - ಬಿಜೆಪಿ - 339660
ಡಿ.ಕೆ. ನಾಯ್ಕರ್‌ - ಕಾಂಗ್ರೆಸ್‌ - 289260

ಜಾತಿವಾರು ಮತದಾರರ ಲೆಕ್ಕಾಚಾರ

ಲಿಂಗಾಯತ - 575000
ಪರಿಶಿಷ್ಟ ಜಾತಿ - 184000
ಪರಿಶಿಷ್ಟ ಪಂಗಡ - 72000
ಮುಸ್ಲಿಂ - 255000
ಕ್ರಿಶ್ಚಿಯನ್‌ - 42000
ಕುರುಬ - 168000
ಮರಾಠ - 122000
ಬ್ರಾಹ್ಮಣ - 96000
ಜೈನ್‌ - 13000
ಒಕ್ಕಲಿಗ - 8000
ಈಡಿಗ - 12000

sample description

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.