ETV Bharat / city

ಕೋವಿಡ್‌ ತಗ್ಗಿದ್ರೂ ಬಾರದ ಪ್ಯಾಸೆಂಜರ್‌ ರೈಲು; ಹುಬ್ಬಳ್ಳಿ ಗ್ರಾಮೀಣ ಜನರಿಗೆ ತಪ್ಪದ ಸಂಕಷ್ಟ - ಧಾರವಾಡ ಜಿಲ್ಲೆ

ಕೋವಿಡ್‌ ಸೋಂಕು ಕಡಿಮೆಯಾದ ಬಳಿಕ ಹಂತ ಹಂತವಾಗಿ ಲಾಕ್‌ಡೌನ್‌ ತೆರವುಗೊಳಿಸಲಾಗಿತ್ತು. ಬಸ್‌, ವಿಮಾನ, ವಿಶೇಷ ರೈಲು ಸೇವೆಗೂ ಅವಕಾಶ ನೀಡಲಾಗಿತ್ತು. ಆದರೆ ಪ್ಯಾಸೆಂಜರ್‌ ರೈಲು ಸೇವೆ ಆರಂಭವಾಗದಿದ್ದಕ್ಕೆ ಗ್ರಾಮೀಣ ಭಾಗದ ಜನರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ.

Covid effect; on passenger train in Hubli
ಕೋವಿಡ್‌ ತಗ್ಗಿದ್ರೂ ಬಾರದ ಪ್ಯಾಸೆಂಜರ್‌ ರೈಲು; ಹುಬ್ಬಳ್ಳಿ ಗ್ರಾಮೀಣ ಜನರಿಗೆ ತಪ್ಪದ ಸಂಕಷ್ಟ!
author img

By

Published : Oct 26, 2021, 2:19 PM IST

Updated : Oct 26, 2021, 7:23 PM IST

ಹುಬ್ಬಳ್ಳಿ: ಕಿಲ್ಲರ್ ಕೊರೊನಾ ಹಾವಳಿ ತಗ್ಗಿದ್ದರೂ ಕೂಡ ನೈಋತ್ಯ ರೈಲ್ವೆ ವಲಯದಲ್ಲಿ ಸಂಪೂರ್ಣ ರೈಲ್ವೆ ಕಾರ್ಯಾಚರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಸಂಪೂರ್ಣ ಕಾರ್ಯಾಚರಣೆ ಇಲ್ಲದೇ ಗ್ರಾಮೀಣ ಭಾಗದ ಪ್ರಯಾಣಿಕರು ಪರದಾಡುವಂತಾಗಿದೆ.

ಕೋವಿಡ್‌ ತಗ್ಗಿದ್ರೂ ಬಾರದ ಪ್ಯಾಸೆಂಜರ್‌ ರೈಲು; ಹುಬ್ಬಳ್ಳಿ ಗ್ರಾಮೀಣ ಜನರಿಗೆ ತಪ್ಪದ ಸಂಕಷ್ಟ

ಕೋವಿಡ್ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಆಗಿದ್ದ ಸಂದರ್ಭದಲ್ಲಿ ಸಂಪೂರ್ಣ ಪ್ರಯಾಣಿಕರ ರೈಲುಗಳನ್ನು ಬಂದ್ ಮಾಡಲಾಗಿತ್ತು.‌ ಕ್ರಮೇಣವಾಗಿ ಪಾಸಿಟಿವ್ ದರ ಕಡಿಮೆಯಾದಂತೆ ರೈಲು ಸಂಚಾರ ಪ್ರಾರಂಭ ಮಾಡಲಾಗಿತ್ತು. ಆದರೆ ಬಸ್ ಸಂಚಾರ, ವಿಮಾನ ಹಾರಾಟ ಯಥಾಸ್ಥಿತಿಗೆ ಬಂದಿದ್ದರೂ ಭಾರತೀಯ ರೈಲ್ವೆ ಮಾತ್ರ ಸ್ಪೆಷಲ್ ರೈಲು ಸಂಚಾರಕ್ಕೆ ನೀಡಿರುವ ಒತ್ತನ್ನು ಗ್ರಾಮೀಣ ಭಾಗದ ಪ್ಯಾಸೆಂಜರ್ ರೈಲಿಗೆ ನೀಡಿಲ್ಲ. ಇದರಿಂದ ಅದೆಷ್ಟೋ ಜನರು ದಿನಗೂಲಿ ಕಳೆದುಕೊಂಡು ಮನೆಯಲ್ಲಿಯೇ ಇರುವಂತಾಗಿದೆ.

ಈಗಾಗಲೇ ಸುಮಾರು 80-90ರಷ್ಟು ರೈಲ್ವೆ ಕಾರ್ಯಾಚರಣೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀಶ್ ಹೆಗಡೆ ಮಾಹಿತಿ ನೀಡಿದ್ದಾರೆ. ಆದರೆ ಅವುಗಳು ಗ್ರಾಮೀಣ ಭಾಗದ ರೈಲು ನಿಲ್ದಾಣದಲ್ಲಿ ನಿಲುಗಡೆಗೊಳ್ಳುವುದಿಲ್ಲ. ಇದರಿಂದ ಗ್ರಾಮೀಣ ಭಾಗದ ಜನರು ಇಂತಹದೊಂದು ಸಮಸ್ಯೆ ಅನುಭವಿಸುವಂತಾಗಿದೆ. ಅಲ್ಲದೇ ಸಾಕಷ್ಟು ಕುಟುಂಬಗಳು ಕೋವಿಡ್ ಕಡಿಮೆಯಾಗಿದ್ದರೂ ಗ್ರಾಮಗಳಲ್ಲೇ ಉಳಿಯುವಂತಾಗಿದೆ.

ಇನ್ನಾದರೂ ಭಾರತೀಯ ರೈಲ್ವೆ ಹಾಗೂ ನೈಋತ್ಯ ರೈಲ್ವೆ ವಲಯ ಈ ಬಗ್ಗೆ ಸೂಕ್ತ ರೀತಿಯಲ್ಲಿ ಪರಿಶೀಲನೆ ನಡೆಸಿ ಸಾರ್ವಜನಿಕ ಪ್ರಯಾಣಕ್ಕೆ ಅನುಕೂಲವಾಗುವ ರೀತಿಯಲ್ಲಿ ಪ್ಯಾಸೆಂಜರ್ ರೈಲು ಆರಂಭ ಮಾಡಬೇಕಿದೆ.

Last Updated : Oct 26, 2021, 7:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.