ETV Bharat / city

ಕಂಟೈನ್​ಮೆಂಟ್ ಏರಿಯಾದಲ್ಲಿ ಗಲಾಟೆ ಮಾಡಿದ ಮೂವರ ವಿರುದ್ಧ ಪ್ರಕರಣ - Hubli Containment Area Uproar

ನಗರದ ಕಂಟೈನ್​ಮೆಂಟ್ ಏರಿಯಾದಲ್ಲಿ ಬ್ಯಾರಿಕೇಡ್​ ಎಳೆದು ಪುಂಡಾಟ ಮೆರೆದಿದ್ದ ಮೂವರು ಯುವಕರ ವಿರುದ್ಧ ಘಂಟಿಕೇರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Containment Area
ಹುಬ್ಬಳ್ಳಿ
author img

By

Published : May 11, 2020, 10:16 AM IST

ಹುಬ್ಬಳ್ಳಿ: ನಗರದ ಕಂಟೈನ್​ಮೆಂಟ್​ ವಲಯವಾದ ನಗರದ ಬಮ್ಮಾಪುರ ಓಣಿ‌ ಸಮೀಪದ ಕುಂಬಾರ ಓಣಿಯಲ್ಲಿ ರಸ್ತೆಗೆ ಅಡ್ಡವಾಗಿ ಇಟ್ಟಿದ್ದ ಬ್ಯಾರಿಕೇಡ್​ಗಳನ್ನು ಯುವಕರ ಗುಂಪು ಎಳೆದಾಡಿ ಪುಂಡಾಟ ಮೆರೆದಿದೆ.

ಕಂಟೈನ್​ಮೆಂಟ್ ಏರಿಯಾದಲ್ಲಿ ಗಲಾಟೆ ಮಾಡಿದ ಯುವಕರ ತಂಡ

ಕೊರೊನಾ ವೈರಸ್ ಪತ್ತೆಯಾದ ವಲಯವನ್ನು ಜಿಲ್ಲಾಡಳಿತ ಸೀಲ್ ಡೌನ್ ಮಾಡಿ, ಬೇರೆಯವರು ಈ ಪ್ರದೇಶದಲ್ಲಿ ಸಂಚರಿಸದಂತೆ ಬ್ಯಾರಿಕೇಡ್​ಗಳನ್ನು ಹಾಕಲಾಗಿದೆ. ಆದರೆ ಕೆಲ ಯುವಕರು ಅದನ್ನು ತೆಗೆದು ಗಲಾಟೆ ಮಾಡಿದ್ದಾರೆ.

ಇದನ್ನು ಪ್ರಶ್ನಿಸಿದವರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ. ಸ್ಥಳೀಯ ಯುವಕರ ಜತೆ ಜಗಳವಾಡಿದ್ದ ಅನ್ಯ ಕೋಮಿನ ಮೂವರು ಯುವಕರ ವಿರುದ್ಧ ಘಂಟಿಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.