ಹುಬ್ಬಳ್ಳಿ : ಮತಾಂತರ ನಿಷೇಧ ಕಾಯ್ದೆ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ಮೇಲ್ಮನೆಯಲ್ಲಿ ನಮಗೆ ಬೆಂಬಲ ಇಲ್ಲ. ಅಲ್ಲಿ ನಮ್ಮವರು ಇರಲಿಲ್ಲ. ಅವರು ಬಂದಿದ್ದರೆ ನಾವು ಅವರ ಬೆಂಬಲ ಕೇಳುತ್ತಿದ್ದೆವು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಇಂದು ಮಾತನಾಡಿದ ಅವರು, ಸಭಾಪತಿ ಅನ್ನೋದನ್ನ ಮರೆತು ಕಾಂಗ್ರೆಸ್ನವರು ಅವರ ತೇಜೋವಧೆ ಮಾಡಿದ್ದಾರೆ. ಅವರ ಮನಸಿಗೆ ನೋವಾಗಿ ರಾಜೀನಾಮೆ ಸಹ ನೀಡಲು ಮುಂದಾಗಿದ್ದರು. ನಾನೇ ಅವರಿಗೆ ಕರೆ ಮಾಡಿ, ಆ ರೀತಿ ನಿರ್ಧಾರ ಮಾಡಬೇಡಿ ಎಂದು ಕೇಳಿಕೊಂಡೆ. ನಂತರ ಅವರ ಮನವೊಲಿಸಿದ್ದೇವೆ ಎಂದರು.
ಮುಖ್ಯಮಂತ್ರಿಯವರು ಶಸ್ತ್ರ ಚಿಕಿತ್ಸೆಗೆ ವಿದೇಶಕ್ಕೆ ಹೋಗುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ, ಡಾವೋಸ್ ಶೃಂಗಸಭೆ ಮುಂದೆ ಹೋಗಿದೆ. ಯಾವುದೇ ಕಾರಣಕ್ಕೂ ಮುಂದೆಯೂ ನಾನು ವಿದೇಶ ಪ್ರವಾಸಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಒಮಿಕ್ರಾನ್ ಭೀತಿ ಹಿನ್ನೆಲೆ ಬೆಂಗಳೂರಿಗೆ ಹೋಗಿ ತಜ್ಞರ ಜತೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಾಗುವುದು. ಫೆಬ್ರವರಿಯಲ್ಲಿ ಜಂಟಿ ಸದನ ಕರೆಯುತ್ತೇವೆ. ಒಂದು ವಾರದ ನಂತರ ಬಜೆಟ್ ಅಧಿವೇಶನ ನಡೆಯುತ್ತದೆ ಎಂದು ಇದೇ ವೇಳೆ ಸಿಎಂ ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ: ಅಧಿವೇಶನದ ಬಳಿಕ ಸಿಎಂ ರಿಲ್ಯಾಕ್ಸ್: ಬೆಳಗಾವಿಯಲ್ಲಿ ಪಾನಿಪುರಿ, ಗಿರ್ಮಿಟ್ ಸವಿದ ಬೊಮ್ಮಾಯಿ