ETV Bharat / city

ಐತಿಹಾಸಿಕ ಗತವೈಭವ ಸಾರುವ ಚಿಟಗುಪ್ಪಿ ಆಸ್ಪತ್ರೆ ಇನ್ಮುಂದೆ ನೆನಪು ಮಾತ್ರ

ಹುಬ್ಬಳ್ಳಿ ನಗರದ ಹೃದಯಭಾಗದಲ್ಲಿದ್ದ ಚಿಟಗುಪ್ಪಿ ಆಸ್ಪತ್ರೆ (Chitaguppi Hospital) ರೋಗಿಗಳಿಗೆ ತುಂಬಾ ಅನುಕೂಲವಾಗಿತ್ತು. ಆದ್ರೆ ಆಸ್ಪತ್ರೆ ಕಟ್ಟಡ ಶಿಥಿಲಾವಸ್ಥೆ ತಲುಪಿರುವ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.

Chitaguppi Hospital
ಚಿಟಗುಪ್ಪಿ ಆಸ್ಪತ್ರೆ ತೆರವು ಕಾರ್ಯಾಚರಣೆ
author img

By

Published : Nov 11, 2021, 3:40 PM IST

ಹುಬ್ಬಳ್ಳಿ: ಹುಬ್ಬಳ್ಳಿಯ ಐತಿಹಾಸಿಕ ಗತವೈಭವ ಸಾರುವ ಚಿಟಗುಪ್ಪಿ ಆಸ್ಪತ್ರೆ (Chitaguppi Hospital) ಇನ್ಮುಂದೆ ನೆನಪು ಮಾತ್ರ. ಶಿಥಿಲಾವಸ್ಥೆ ತಲುಪಿರುವ ಆಸ್ಪತ್ರೆಯ ತೆರವು ಕಾರ್ಯಾಚರಣೆ ಇದೀಗ ಆರಂಭಗೊಂಡಿದೆ.

127 ವರ್ಷಗಳನ್ನು ಪೂರೈಸಿರುವ ಚಿಟಗುಪ್ಪಿ ಆಸ್ಪತ್ರೆಯನ್ನು ರಾವ್ ಬಹದ್ದೂರ್ ಶ್ರೀನಿವಾಸ ಬಾಲಾಜಿ ಚಿಟಗುಪ್ಪಿ ಔಷಧಾಲಯ (Rao Bahaddur Srinivas Balaji Chitaguppi Pharmacy) ಎಂಬ ಹೆಸರಿನಲ್ಲಿ ಪ್ರಾರಂಭವಾಗಿತ್ತು. ನಂತರ 1936 ರ ಅಗಸ್ಟ್​ನಲ್ಲಿ ಆಸ್ಪತ್ರೆಯಾಗಿ ಬದಲಾಯಿತು. ಮುಂದೆ 1961 ರಲ್ಲಿ ಹಸ್ತಾಂತರಗೊಂಡಿತು. ಲಕ್ಷಾಂತರ ರೋಗಿಗಳಿಗೆ ಚಿಕಿತ್ಸೆ ನೀಡಿರುವ ಚಿಟಗುಪ್ಪಿ ಆಸ್ಪತ್ರೆ, ಇದೀಗ ಭೂತಾಯಿಯ ಗರ್ಭ ಸೇರುತ್ತಿದೆ.

ಚಿಟಗುಪ್ಪಿ ಆಸ್ಪತ್ರೆಯನ್ನು 1998 ರಲ್ಲಿ ಶತಮಾನೋತ್ಸವದ ಅಂಗವಾಗಿ ನವೀಕರಣ ಕಾರ್ಯ ಮಾಡಲಾಗಿತ್ತು. ಇದೀಗ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಸ್ಮಾರ್ಟ್ ಸಿಟಿ ಯೋಜನೆಯಡಿ (Smart City Project) 19 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ಕೆಡವಿ, ತೆರವು ಮಾಡುವ ಕಾರ್ಯ ಇದೀಗ ಆರಂಭಗೊಂಡಿದೆ. ಇನ್ನೊಂದು ವಾರದಲ್ಲಿ ಸಂಪೂರ್ಣ ತೆರವು ಕಾರ್ಯಚರಣೆ ಮುಕ್ತಾಯವಾಗುವ ಸಾಧ್ಯತೆಯಿದೆ.

ಮಳೆಗಾಲದಲ್ಲಿ ಮೇಲ್ಛಾವಣಿ ಸೋರುತ್ತಿತ್ತು. ರೋಗಿಗಳಿಗೆ ಅಗತ್ಯ ಸೌಕರ್ಯಗಳು ಸಹ ಇರಲಿಲ್ಲ. ಹಾಗಾಗಿ, ಮುಂದೆ ಅಪಾಯ ಎದುರಾಗಬಹುದು ಎಂಬ ಉದ್ದೇಶದಿಂದ ಸ್ಮಾರ್ಟ್ ಸಿಟಿ ಯೋಜನೆಯಡಿ ಆಸ್ಪತ್ರೆ ತೆರವುಗೊಳಿಸಿ, ಮರು ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.