ಧಾರವಾಡ: ಪಾಲಿಕೆ ಗುತ್ತಿಗೆದಾರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆ ಮಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಧಾರವಾಡದಲ್ಲಿ ನ. 24 ರಂದು ಈ ಘಟನೆ ನಡೆದಿದೆ.
ಪಾಲಿಕೆ ಬದಿಯ ಕಡಪಾ ಮೈದಾನದಲ್ಲಿ ಹಲ್ಲೆ ಮಾಡಲಾಗಿದ್ದು, ಅಜೀಜ್ ಮಾಲಿ ಹಲ್ಲೆಗೊಳಗಾದ ಗುತ್ತಿಗೆದಾರ. ಹು-ಧಾ ಮಹಾನಗರ ಪಾಲಿಕೆ ಗುತ್ತಿಗೆದಾರನಾಗಿರುವ ಅಜೀಜ್ ಮಾಲಿ ಬೈಕ್ ನಿಲ್ಲಿಸಿಕೊಂಡಿದ್ದ ಸಂದರ್ಭದಲ್ಲಿ ಹಿಂದಿನಿಂದ ಬಂದು ಹಲ್ಲೆ ಮಾಡಲಾಗಿದೆ.
ಕೋಲಿನಿಂದ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಹೊಡೆತಕ್ಕೆ ಕೆಳಕ್ಕೆ ಉರುಳಿ ಬಿದ್ದ ಅಜೀಜ್ ಅವರನ್ನು ಕೆಳಗೆ ಬಿದ್ದ ಮೇಲೂ ದುಷ್ಕರ್ಮಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸದ್ಯ ಅಜೀಜ್ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಸ್ನೇಹಿತನ ಕೊಲೆ ಪ್ರಕರಣ: ಎಂಟು ಅಪ್ರಾಪ್ತರ ಬಂಧಿಸಿದ ಕ್ರೈ ಬ್ರಾಂಚ್ ಪೊಲೀಸರು!