ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆಯಾದ ನಗರದ ಪ್ರೆಸಿಡೆಂಟ್ ಹೋಟೆಲ್ಗೆ ಎಡಿಜಿಪಿ ಅಲೋಕ್ ಕುಮಾರ್ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಹೋಟೆಲ್ ಸಿಬ್ಬಂದಿ ಮತ್ತು ಸೆಕ್ಯೂರಿಟಿ ಗಾರ್ಡ್ನಿಂದ ಪ್ರಕರಣದ ಕುರಿತು ಮಾಹಿತಿ ಪಡೆದರು.
ಇಂತಹ ದೊಡ್ಡ ಹೋಟೆಲ್ನಲ್ಲಿ ಮೆಟಲ್ ಡಿಟೆಕ್ಟರ್ ಇಟ್ಟುಕೊಂಡಿಲ್ವಾ ಎಂದು ಹೋಟೆಲ್ ಸಿಬ್ಬಂದಿಗೆ ಇದೇ ವೇಳೆ ಎಡಿಜಿಪಿ ಪ್ರಶ್ನಿಸಿದರು. ಅಲೋಕ್ ಕುಮಾರ್ ಜೊತೆ ಹುಬ್ಬಳ್ಳಿ-ಧಾರವಾಡ ಪೊಲೀಸರು ಕೂಡ ಇದ್ದರು.
ಜುಲೈ 5 ರಂದು ಚಂದ್ರಶೇಖರ್ ಗುರೂಜಿ ತಂಗಿದ್ದ ಹೋಟೆಲ್ಗೆ ಬಂದಿದ್ದ ಆರೋಪಿಗಳು, ಗುರೂಜಿ ಕಾಲಿಗೆ ನಮಸ್ಕರಿಸುವ ನೆಪದಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು. ಬಳಿಕ ರಾಮದುರ್ಗದಲ್ಲಿ ಆರೋಪಿಗಳಾದ ಕಲಘಟಗಿ ತಾಲೂಕಿನ ಮಂಜುನಾಥ್ ಮತ್ತು ಮಹಾಂತೇಶ ಸಿಕ್ಕಿಬಿದ್ದಿದ್ದಾರೆ.
(ಇದನ್ನೂ ಓದಿ: ಚಂದ್ರಶೇಖರ ಗುರೂಜಿ ಅಂತಿಮ ದರ್ಶನದ ವೇಳೆ ಕಂಬನಿ ಮಿಡಿದ ಶ್ವಾನ)