ಹುಬ್ಬಳ್ಳಿ: ಚಾಮರಾಜನಗರದ ಆಕ್ಸಿಜನ್ ಪ್ರಕರಣ ಮಾಸುವ ಮುನ್ನ ಮತ್ತೊಂದು ಅವಘಡ ವಾಣಿಜ್ಯ ನಗರಿಯಲ್ಲಿ ಸಂಭವಿಸಿದೆ. ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಭಾಣಜಿ ಖಿಮಜಿ ಲೈಫಲೈನ್ ಆಸ್ಪತ್ರೆಯಲ್ಲಿ ಐವರು ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮೃತರನ್ನು ನಾಲ್ಕು ದಿನದ ಹಿಂದೆಯಷ್ಟೇ ಮದುವೆಯಾಗಿದ್ದ ಕಾರವಾರ ರಸ್ತೆಯ ಶ್ರೀನಗರದ ಶ್ರೇಯಸ್ ಧ್ರುನಾವತ್ (32), ಗೋಕುಲ ರೋಡ್ ಸನ್ಮಾನ ಕಾಲೋನಿಯ ಬಾಲಚಂದ್ರ ದಂಡಗಿ (62), ಶಿರಸಿಯ ಅಮಿನಹಳಿಯ ವಿನಯಾ ನಾಯಕ (47), ಕೇಶ್ವಾಪುರ ಎಸ್ಬಿಐ ಕಾಲೋನಿಯ ವಾಣಿ ವೆಂಕಟೇಶ್ ಜನ್ನು (52) ಮತ್ತು ಅಮರಗೋಳದ ದೇಸಾಯಿಗೌಡ್ರ ಶಂಕರಗೌಡ್ರ ಪಾಟೀಲ ಎಂದು ಗುರುತಿಸಲಾಗಿದೆ.
ಆಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆಯಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ಐವರು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಆರೋಗ್ಯ ಅಧಿಕಾರಿ ಯಶವಂತ ಮದೀನಕರ ತನಿಖೆ ಬಳಿಕ ಸ್ಪಷ್ಟತೆ ಸಿಗಲಿದೆ. ಐವರ ಸಾವಿಗೆ ಆಕ್ಸಿಜನ್ ಸಮಸ್ಯೆ ಕಾರಣವಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಮೃತರ ಕಡೆಯವರು ಆಕ್ಸಿಜನ್ ಸಮಸ್ಯೆ ಯಿಂದ ಸಾವಿಗೀಡಾಗಿದ್ದಾರೆ ಎಂದು ಕಣ್ಣೀರು ಹಾಕುತ್ತಿದ್ದಾರೆ.
ಈಗಾಗಲೇ ಆಸ್ಪತ್ರೆಗೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ರಾಜ್ಯಾದ್ಯಂತ ಕೊರೊನಾ ಹೆಚ್ಚುತ್ತಿದ್ದು, ನಗರದಲ್ಲಿಯೂ ಬಲಿ ಪಡೆಯುತ್ತಿದೆ. (ಹುಬ್ಬಳ್ಳಿ ಲೈಫ್ಲೈನ್ ಆಸ್ಪತ್ರೆ ಸೋಂಕಿತರು ಆಕ್ಸಿಜನ್ ಕೊರತೆಯಿಂದ ಸಾವನಪ್ಪಿಲ್ಲ: ಡಿಹೆಚ್ಒ ಸ್ಪಷ್ಟನೆ)