ದಾವಣಗೆರೆ: ಗ್ರಾಮಸ್ಥರು ಸೇರಿ ಕಳ್ಳತನದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಕೂಡಿ ಹಾಕಿದ ಘಟನೆ ಹರಪನಹಳ್ಳಿ ತಾಲೂಕು ಹಿರೆಮೇಗಳಗೆರೆ ಗ್ರಾಮದಲ್ಲಿ ನಡೆದಿದೆ.
ಮಧ್ಯರಾತ್ರಿ ಕುರಿಗಳ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ವ್ಯಕ್ತಿಯನ್ನು ಹಿಡಿದು ಗ್ರಾ.ಪಂ. ಕಚೇರಿಯಲ್ಲಿ ಗ್ರಾಮಸ್ಥರು ಕೂಡಿ ಹಾಕಿದ್ದಾರೆ ಎನ್ನಲಾಗಿದೆ.
ಸದ್ಯ ಸ್ಥಳಕ್ಕೆ ಅರಸಿಕೆರೆ ಪೊಲೀಸರು ಭೇಟಿ ನೀಡಿ ಯುವಕನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.