ETV Bharat / city

ದಾವಣಗೆರೆಯ 25 ಗ್ರಾಮಗಳು ಸೀಲ್​​ಡೌನ್​.. ಆದ್ರೂ ಕ್ಯಾರೇ ಎನ್ನದ ಜನ

author img

By

Published : Jun 18, 2021, 3:54 PM IST

Updated : Jun 18, 2021, 10:28 PM IST

ಇದರಿಂದ 25 ಗ್ರಾಮಗಳಲ್ಲಿ 10ಕ್ಕಿಂತ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣ ಕಂಡು ಬಂದಿರುವ ಬೆನ್ನಲ್ಲೇ ಸೀಲ್‌ಡೌನ್ ಮಾಡಿ ಕಟ್ಟುನಿಟ್ಟಿನ ಕ್ರಮಕೈಗೊಂಡರೂ ಕೂಡ ಯಾವುದೇ ಪ್ರಯೋಜನ ಇಲ್ಲ ಎಂದು ಸ್ಥಳೀಯ ಅಧಿಕಾರಿಗಳು ಅಸಹಾಯಕಥೆ ತೋರಿರುವುದು ಹೊನ್ನಾಳಿ ತಾಲೂಕಿನ ಕುಳಗಟ್ಟೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ..

 Twenty-five villages of Davanagere seal down

ದಾವಣಗೆರೆ : ಜಿಲ್ಲೆಯಲ್ಲಿ ಕೊರೊನಾ ಪ್ರಮಾಣ ಹೆಚ್ಚಿರುವ ಕಾರಣ ಇನ್ನು ಒಂದು ವಾರ ಕಾಲ ಲಾಕ್‌ಡೌನ್‌ ಸರ್ಕಾರ ಮುಂದುವರಿಸಿದೆ. ದಾವಣಗೆರೆ ಗ್ರಾಮೀಣ ಭಾಗದಲ್ಲಿ ಕೊರೊನಾ ಹೆಚ್ಚಾಗಿ ಉಲ್ಭಣಗೊಂಡಿದ್ದರಿಂದ ಜಿಲ್ಲಾಡಳಿತ 25 ಗ್ರಾಮಗಳ ಮೇಲೆ ನಿಗವಹಿಸಿ, ಈಗಾಗಲೇ ಸೀಲ್‌ಡೌನ್ ಮಾಡಿದೆ. ಆದರೆ, ಜನ ಮಾತ್ರ ಕ್ಯಾರೇ ಎನ್ನುತ್ತಿಲ್ಲ.

ದಾವಣಗೆರೆ ನಗರದಲ್ಲಿ ಸದ್ಯ ಕೊರೊನಾ ಪ್ರಕರಣ ಇಳಿಮುಖವಾಗುತ್ತಿವೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿವೆ. ಸೋಂಕಿನ ಪ್ರಮಾಣ ಹೆಚ್ಚಿರುವ ಕಾರಣ ಸರ್ಕಾರ ಒಂದು ವಾರದ ಕಾಲ ಲಾಕ್‌ಡೌನ್ ಮುಂದುವರೆಸಿದೆ. ಇದರಿಂದ ಎಚ್ಚೆತ್ತ ಜಿಲ್ಲಾಡಳಿತ ಜಿಲ್ಲೆಯ 10ಕ್ಕಿಂತ ಹೆಚ್ಚು ಪ್ರಕರಣ ಕಂಡು ಬಂದ ಗ್ರಾಮಗಳ ಮೇಲೆ ನಿಗಾವಹಿಸಿ ಅಂತಹ 25 ಗ್ರಾಮಗಳನ್ನು ಸೀಲ್‌ಡೌನ್ ಮಾಡಿ ಕಟ್ಟುನಿಟ್ಟಿನ ಕ್ರಮವಹಿಸಿದೆ. ಅದ್ರೂ ಕೂಡ ಗ್ರಾಮಸ್ಥರು ಮಾತ್ರ ಯಾವುದಕ್ಕೂ ಕ್ಯಾರೇ ಎನ್ನದೇ ತಮಗಿಷ್ಟ ಬಂದಂತೆ ವರ್ತಿಸುತ್ತಿರುವುದು ಅಧಿಕಾರಿಗಳನ್ನು ಹೈರಾಣು ಮಾಡಿದೆ.

ಸೀಲ್‌ಡೌನ್ ಮಾಡಿದ ಗ್ರಾಮಗಳಿವು..

ದಾವಣಗೆರೆಯ 25 ಗ್ರಾಮಗಳು ಸೀಲ್​​ಡೌನ್​.. ಆದ್ರೂ ಕ್ಯಾರೇ ಎನ್ನದ ಜನ

ದಾವಣಗೆರೆ ತಾಲೂಕಿನಲ್ಲಿ ಕಾಶಿಪುರ, ಬೇತೂರು, ಅಣಬೇರು, ಕುಕ್ಕುವಾಡ, ಕುರ್ಕಿ, ಕೈದಾಳೆ, ತುರ್ಚಘಟ್ಟ, ಮಳಲಕೆರೆ, ಹರಿಹರ ತಾಲೂಕಿನಲ್ಲಿ ಗುತ್ತೂರು, ಬಾನುಹಳ್ಳಿ, ಕೆಬೇವಿನಹಳ್ಳಿ, ನಂದಿತಾವರೆ, ಹೊಳೆ ಸಿರಿಗೆರೆ ಹಾಗೂ ಹಾಲಿವಾಣ, ಇನ್ನು ಹೊನ್ನಾಳಿ ತಾಲೂಕಿಗೆ ಸಂಬಂದಿಸಿದಂತೆ ಕುಳಗಟ್ಟೆ, ಹನುಮನಹಳ್ಳಿ, ಕೂಲಂಬಿ, ಐನೂರು, ಗೊಲ್ಲರಹಳ್ಳಿ, ನ್ಯಾಮತಿ ತಾಲೂಕಿನ ಕುಂಕ್ವ, ಫಲವನಹಳ್ಳಿ, ಗಂಜೇನಹಳ್ಳಿ, ಸುರಹೊನ್ನೆ, ಚನ್ನಗಿರಿ ತಾಲೂಕಿನಲ್ಲಿ ಸಿದ್ದನಮಠ, ಜಗಳೂರಿನಲ್ಲಿ ಗಡಿಮಾಕುಂಠೆ ಇಷ್ಟು ಗ್ರಾಮಗಳಲ್ಲಿ ಹತ್ತಕ್ಕು ಹೆಚ್ಚು ಪ್ರಕರಣ ಕಂಡು ಬಂದಿದ್ದರಿಂದ ಸೀಲ್ಡೌನ್ ಮಾಡಲಾಗಿದೆ.

ಎಷ್ಟು ಗ್ರಾಮಗಳಲ್ಲಿ ಎಷ್ಟೆಷ್ಟು ಪ್ರಕರಣಗಳಿವೆ?:

218 ಗ್ರಾಮಗಳಲ್ಲಿ ಶೂನ್ಯ ಕೊರೊನಾ ಪ್ರಕರಣಗಳಿವೆ. 411 ಗ್ರಾಮಗಳಲ್ಲಿ 1 ರಿಂದ 5 ಕೊರೊನಾ ಪ್ರಕರಣಗಳಿವೆ. 93 ಗ್ರಾಮಗಳಲ್ಲಿ 6 ರಿಂದ 10 ಪಾಸಿಟಿವ್ ಪ್ರಕರಣಗಳು, 66 ಗ್ರಾಮಗಳಲ್ಲಿ 10 ಕ್ಕಿಂತ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣ ಕಂಡು ಬಂದಿವೆ.

ಇದರಿಂದ 25 ಗ್ರಾಮಗಳಲ್ಲಿ 10ಕ್ಕಿಂತ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣ ಕಂಡು ಬಂದಿರುವ ಬೆನ್ನಲ್ಲೇ ಸೀಲ್‌ಡೌನ್ ಮಾಡಿ ಕಟ್ಟುನಿಟ್ಟಿನ ಕ್ರಮಕೈಗೊಂಡರೂ ಕೂಡ ಯಾವುದೇ ಪ್ರಯೋಜನ ಇಲ್ಲ ಎಂದು ಸ್ಥಳೀಯ ಅಧಿಕಾರಿಗಳು ಅಸಹಾಯಕಥೆ ತೋರಿರುವುದು ಹೊನ್ನಾಳಿ ತಾಲೂಕಿನ ಕುಳಗಟ್ಟೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

Last Updated : Jun 18, 2021, 10:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.