ETV Bharat / city

"ಎಸಿಬಿಗೆ ದಾಳಿಗೆ ಕಾರಣ ನೀನೇ": ನೆರೆಮನೆ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ನಗರಸಭೆಯ ಯೋಜನಾ ನಿರ್ದೇಶಕ!

ಕೋಲಾರ ಜಿಲ್ಲೆಯ ಮಾಲೂರು ನಗರಸಭೆಯ ಯೋಜನಾ ನಿರ್ದೇಶಕ ಎಚ್.ಕೆ ಕೃಷ್ಣಪ್ಪ ಹಾಗೂ ಸಂಬಂಧಿಕರ ಆಸ್ತಿಯ ಬಗ್ಗೆ ಇದೇ ಗ್ರಾಮದ ಎಚ್.ಜೆ ಗಣೇಶ ಎಂಬುವರು ಎಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರಂತೆ. ಹೀಗೆಂದು ಆರೋಪಿಸಿ ಕೃಷ್ಣಪ್ಪ ಸಂಬಂಧಿಕರು ಗಣೇಶ್​ ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ.

davangere
ಯೋಜನಾ ನಿರ್ದೇಶಕ ಎಚ್.ಕೆ ಕೃಷ್ಣಪ್ಪ
author img

By

Published : Sep 8, 2021, 1:29 PM IST

ದಾವಣಗೆರೆ: ಎಸಿಬಿಗಳಿಗೆ ಭ್ರಷ್ಟಾಚಾರದ ಬಗ್ಗೆ ಮಾಹಿತಿ‌ ನೀಡಿದ್ದಾರೆ ಎಂದು ಆರೋಪಿಸಿ ನಗರಸಭೆ ಯೋಜನಾ ನಿರ್ದೇಶಕ ಹಾಗೂ ಆತನ ಸಂಬಂಧಿಕರು ಪಕ್ಕದ ಮನೆಯ ವ್ಯಕ್ತಿಗೆ ನಿತ್ಯ ಕಿರುಕುಳ ನೀಡಿ ಹಲ್ಲೆ ಮಾಡಲು ಯತ್ನಿಸಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೇವರಹಳ್ಳಿಯಲ್ಲಿ ನಡೆದಿದೆ.

ಕೋಲಾರ ಜಿಲ್ಲೆಯ ಮಾಲೂರು ನಗರಸಭೆಯ ಯೋಜನಾ ನಿರ್ದೇಶಕ ಎಚ್.ಕೆ ಕೃಷ್ಣಪ್ಪ ಹಾಗೂ ಸಂಬಂಧಿಕರ ಆಸ್ತಿಯ ಬಗ್ಗೆ ಇದೇ ಗ್ರಾಮದ ಎಚ್.ಜೆ ಗಣೇಶ ಎಂಬುವರು ಎಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರಂತೆ. ಹೀಗೆಂದು ಆರೋಪಿಸಿ ಕೃಷ್ಣಪ್ಪ ಸಂಬಂಧಿಕರು ಗಣೇಶ್​ ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ.

Davangere
ಹಲ್ಲೆಗೊಳಗಾದ ಗಣೇಶ್​

ಎಸಿಬಿ ದಾಳಿ: ಜುಲೈ 15 ರಂದು ಕೃಷ್ಣಪ್ಪ ಅವರ ಮನೆ ಮೇಲೆ ಎಸಿಬಿ ದಾಳಿ ನಡೆಸಿತ್ತು. ಬೆಂಗಳೂರು, ಶಿವಮೊಗ್ಗ ಸೇರಿದಂತೆ ಸ್ವ ಗ್ರಾಮವಾದ ಚನ್ನಗಿರಿ ತಾಲೂಕಿನ ದೇವರಹಳ್ಳಿಯಲ್ಲಿರುವ ಮನೆ, ತೋಟವನ್ನು ಪರಿಶೀಲನೆ ನಡೆಸಿದ್ದರು. ಈ ಸಂದರ್ಭದಲ್ಲಿ ಕೋಟ್ಯಾಂತರ ರೂ. ಅಕ್ರಮ ಆಸ್ತಿ ಪತ್ತೆಯಾಗಿತ್ತು. ಇನ್ನು ಅಧಿಕಾರಿಗಳಿಗೆ ತಮ್ಮ ಆಸ್ತಿ ಬಗ್ಗೆ ಮಾಹಿತಿ ನೀಡಿದ್ದು ಗಣೇಶ್​ ಎಂದು ಆರೋಪಿಸಿ ಕೃಷ್ಣಪ್ಪ ಕುಟುಂಬ ಆತನ ಮೇಲೆ ಹಲ್ಲೆ ನಡೆಸಲು ಮುಂದಾಗಿದೆ.

Davangere
ದಾಳಿ ಸಂದರ್ಭದಲ್ಲಿ ಪತ್ತೆಯಾದ ಅಕ್ರಮ ಆಸ್ತಿ

ಅಧಿಕಾರಿಗಳು ಪತ್ತೆ ಹಚ್ಚಿದ ಆಸ್ತಿ: ಶಿವಮೊಗ್ಗ ನಗರದ ಶಿವಪ್ಪ ನಾಯಕ ಬಡಾವಣೆಯಲ್ಲಿ ಒಂದು ಬೃಹತ್ ಮನೆ, ಶಿವಮೊಗ್ಗದ ವಿವಿಧ ಕಡೆ 3200 ಚದರ್ ಅಡಿ ಸೈಟ್, ಬೆಂಗಳೂರಿನ ನೆಲಗದ್ದೆಯಲ್ಲಿ 3399 ಅಳತೆಯ ಒಂದು ಸೈಟ್, ವಿಜಯನಗರ ಬಡಾವಣೆಯಲ್ಲಿ ಮೂರು ಅಂತಸ್ತಿನ ಮನೆ, ಸ್ವಗ್ರಾಮ ದೇವರಹಳ್ಳಿಯಲ್ಲಿ 15 ಎಕರೆ ಜಮೀನು ಹಾಗೂ ಮನೆ, ಒಂದು ಕೆಜಿ ಚಿನ್ನ, 565 ಗ್ರಾಂ ಬೆಳ್ಳಿ, ಇನೋವಾ ಕಾರು ಎಸಿಬಿ ಅಧಿಕಾರಿಗಳಿಗೆ ದೊರಕಿದ್ದವು. ಈ ಎಲ್ಲಾ ಮಾಹಿತಿಯನ್ನು ಎಸಿಬಿ ಅಧಿಕಾರಿಗಳಿಗೆ ಗಣೇಶ ನೀಡಿದ್ದಾನೆ ಎಂದು ಆರೋಪಿಸಿ ಅಧಿಕಾರಿ ಕೃಷ್ಣಪ್ಪನ ಸಂಬಂಧಿಕರು ಕಿರುಕುಳ ನೀಡಿ ಹಲ್ಲೆ ಮಾಡಿದ್ದರು ಎಂದು ಆರೋಪಿಸಲಾಗಿದೆ.

ಸದ್ಯ ಈ ಸಂಬಂಧ ಗಣೇಶ್ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.