ETV Bharat / city

ಕುಳಗಟ್ಟೆ ಗ್ರಾಮದಲ್ಲಿ ಸೋಂಕು ನಿಯಂತ್ರಣಕ್ಕೆ ಅಧಿಕಾರಿಗಳ ಹರಸಾಹಸ

ಹಳ್ಳಿಯ ಜನ ಮಾತು ಕೇಳದೇ ಇರೋದಕ್ಕೆ ಕುಳಗಟ್ಟೆ ಗ್ರಾಮ ಪಂಚಾಯತ್ ಪಿಡಿಒ ಭಾರತಿ ಅವರು ದಾವಣಗೆರೆ ಎಸಿ ಮಮತಾ ಹೊಸಗೌಡರ್ ಬಳಿ ಅಸಹಾಯಕತೆ ತೋರಿದ್ದಾರೆ. ಈ ಹಿನ್ನೆಲೆ ಮಮತಾ ಅವರೇ ಗ್ರಾಮಕ್ಕೆ ಹೋಗಿ ಜನರಿಗೆ ಅರಿವು ಮೂಡಿಸಿದ್ದಾರೆ.

 kulagatte villagers not follow corona rules

author img

By

Published : Jun 17, 2021, 5:48 PM IST

Updated : Jun 17, 2021, 9:22 PM IST

ದಾವಣಗೆರೆ: 127 ಕೊರೊನಾ ಪ್ರಕರಣ ಹೊಂದಿದ್ದ ಕುಳಗಟ್ಟೆ ಗ್ರಾಮದಲ್ಲಿ ಸೋಂಕು ನಿಯಂತ್ರಿಸಲು ಅಧಿಕಾರಿಗಳು ಹರ ಸಾಹಸ ಪಡುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಳಗಟ್ಟೆ ಗ್ರಾಮದಲ್ಲಿ ಸೋಂಕು ಸ್ಫೋಟವಾಗಿತ್ತು. 3 ತಿಂಗಳ ಅಂತದರಲ್ಲಿ ಒಟ್ಟು 127 ಕೊರೊನಾ ಪ್ರಕರಣ ದಾಖಲಾಗಿದ್ದು, ಸದ್ಯ 23 ಸಕ್ರಿಯ ಪ್ರಕರಣ ಹೊಂದಿದ್ದು, 4 ಜನ ಸೋಂಕಿನಿಂದ ಮೃತಪಟ್ಟಿದ್ದಾರೆ.

10ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣ ಹೊಂದಿದ್ದಕ್ಕೆ ಜಿಲ್ಲಾಡಳಿತದಿಂದ ಇಡೀ ಕುಳಗಟ್ಟೆ ಗ್ರಾಮ ಸೀಲ್ ಡೌನ್ ಮಾಡಿದ್ದು, ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದರೂ ಗ್ರಾಮದ ಜನ ಎಚ್ಚೆತ್ತುಕೊಳ್ಳದೇ ಇರುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಕುಳಗಟ್ಟೆ ಗ್ರಾಮದಲ್ಲಿ ಸೋಂಕು ನಿಯಂತ್ರಣಕ್ಕೆ ಅಧಿಕಾರಿಗಳ ಹರಸಾಹಸ

ಹಳ್ಳಿಯ ಜನ ಮಾತು ಕೇಳದೆ ಇರೋದಕ್ಕೆ ಕುಳಗಟ್ಟೆ ಗ್ರಾಮ ಪಂಚಾಯತ್ ಪಿಡಿಒ ಭಾರತಿ ಅವರು ದಾವಣಗೆರೆ ಎಸಿ ಮಮತಾ ಹೊಸಗೌಡರ್ ಬಳಿ ಅಸಹಾಯಕತೆ ತೋರಿದ್ದಾರೆ.

ಸೀಲ್ ಡೌನ್ ಮಾಡಿದ್ದರು ಕೂಡ ಜನ ಓಡಾಟ ನಡೆಸುತ್ತಿದ್ದ ಹಿನ್ನೆಲೆ ಸ್ವತಃ ಫೀಲ್ಡ್ ಗೆ ಇಳಿದು ಎಸಿ ಮಮತ ಹೊಸಗೌಡರ್ ಅವರು ಜಾಗೃತಿ ಮೂಡಿಸಿದರು. ಇನ್ನು ಕೆಲಸಕ್ಕೆ ಹೋದವರು ಹಳ್ಳಿಗೆ ವಾಪಸ್ಸು ಆಗಿದ್ದರಿಂದಲೇ ಈ ಮಟ್ಟಿನ ಸೋಂಕು ಸ್ಫೋಟವಾಗಿತ್ತು. ಅತೀ ಹೆಚ್ಚು ಪಾಸಿಟಿವ್ ಪ್ರಕರಣ ಹೊಂದಿರೊ ಹಳ್ಳಿ ಎಂಬ ಕುಖ್ಯಾತಿಗೆ ಪಾತ್ರವಾಗಿದ್ದ ಕುಳಗಟ್ಟೆ ಗ್ರಾಮದಲ್ಲಿ ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಜನ ಲೆಕ್ಕಕ್ಕೆ ತೆಗೆದುಕೊಳ್ಳದೇ ಇರುವುದು ಆತಂಕಕ್ಕೆ ಕಾರಣವಾಗಿದೆ.

Last Updated : Jun 17, 2021, 9:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.