ದಾವಣಗೆರೆ : ಇದುವರೆಗೂ ನನಗೆ ಎಐಸಿಸಿಯಿಂದ ಯಾವುದೇ ನೋಟೀಸ್ ಬಂದಿಲ್ಲ, ಬಂದಿದ್ದರೆ ಈಗಾಗಲೇ ನನಗೆ ತಲುಪಿರುವುದು. ಆದರೆ ನೋಟಿಸ್ ಬರುವಂತಹದ್ದು ನಾನೇನು ಮಾಡಿದ್ದೇನೆ ಎಂದು ಮಾಜಿ ಸಚಿವ ಶಾಸಕ ಜಮೀರ್ ಅಹ್ಮದ್ ಖಾನ್ ಪ್ರಶ್ನಿಸುವ ಮೂಲಕ ನೋಟಿಸ್ ಬಗ್ಗೆ ಸ್ಪಷ್ಟನೆ ನೀಡಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು ನಾನು ಯಾವ ಜಾತಿಯ ಬಗ್ಗೆ ಮಾತನಾಡಿಲ್ಲ, ಯಾವ ಜಾತಿ ವಿರುದ್ದ ಮಾತನಾಡಿದ್ದೇನೆ ಹೇಳಿ, ಒಂದು ಜಾತಿ ವೋಟ್ ತೆಗೆದುಕೊಂಡು ಸಿಎಂ ಆಗೋಕೆ ಸಾಧ್ಯ ಇಲ್ಲ ಎಂದು ಹೇಳಿದ್ದೇನೆ ಅಷ್ಟೇ. ಎಲ್ಲ ಜಾತಿಯವರನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕಾಗುತ್ತೆ ಎಂದಿದ್ದೇನೆ ಎಂದರು.
ನಾನು ಮಂತ್ರಿ ಇದ್ದಾಗ ಕಾಗಿನೆಲೆ ಶ್ರೀ ಬಳಿ ಹೋಗ್ತಿದ್ದೆ: ನಾನು ಮಂತ್ರಿ ಇದ್ದಾಗ ಸ್ವಾಮೀಜಿಯವರ ಬಳಿ ಹೋಗಿ ಬರ್ತಾ ಇದ್ದೆ, ಅದರಂತೆ ಇಂದು ಕೂಡ ಸ್ವಾಮೀಜಿ ಆಶೀರ್ವಾದ ಪಡೆಯಲು ಹೋಗಿದ್ದೆ. ಸ್ವಾಮೀಜಿ ಆರೋಗ್ಯ ವಿಚಾರಿಸಲು ಹೋಗಿದ್ದೆ. ಸಿದ್ದರಾಮಯ್ಯ ಅವರ ಕಾರ್ಯಕ್ರಮಕ್ಕೆ ಆಹ್ವಾನ ಮಾಡಲು ಹೋಗಿರಲಿಲ್ಲ, ಇನ್ನು ನಾಳೆ ದಾವಣಗೆರೆಯಲ್ಲಿ ಅಲ್ಪಸಂಖ್ಯಾತ ಸಭೆ ಇದೆ ಎಂದರು.
ಹುಬ್ಬಳ್ಳಿ, ಹಾವೇರಿ ಬೆಳಗಾವಿಯಲ್ಲಿ ಸಭೆ ಮಾಡಲಾಗಿದೆ, ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತರನ್ನು ಸೇರಿಸಲು ಸಭೆ ನಡೆಸುತ್ತೇವೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅಲ್ಪಸಂಖ್ಯಾತರಿಗೆ ಹೆಚ್ಚು ಅನುದಾನ ನೀಡಿದ್ದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸ್ಮರಿಸಿದರು.
ಇದನ್ನೂ ಓದಿ : ಎಐಸಿಸಿ ಯಿಂದ ಜಮೀರ್ ಅಹಮ್ಮದ್ಗೆ ವಾರ್ನಿಂಗ್: ಪತ್ರ ಮೂಲಕ ಖಡಕ್ ಎಚ್ಚರಿಕೆ ನೀಡಿದ ಸುರ್ಜೆವಾಲ