ETV Bharat / city

ದಾವಣಗೆರೆಯ ‘ಲೇಡಿ ಸಿಂಗಂ ತುಂಗಾ’ ಸನ್ಮಾನಿಸಿದ ಸಚಿವ! - 74ನೇ ಸ್ವಾತಂತ್ರ್ಯ ದಿನಾಚರಣೆ

ಕೊಲೆ, ದರೋಡೆ, ಕಳ್ಳತನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಲೇಡಿ ಸಿಂಗಂ ಖ್ಯಾತಿಯ ತುಂಗಾ ಶ್ವಾನಕ್ಕೆ ಸನ್ಮಾನ ಮಾಡಲಾಯಿತು.

Felicity for the dog
‘ಲೇಡಿಸಿಂಗಂ ತುಂಗಾ’ಗೆ ಸನ್ಮಾನ
author img

By

Published : Aug 15, 2020, 1:01 PM IST

Updated : Aug 15, 2020, 11:52 PM IST

ದಾವಣಗೆರೆ: ಚನ್ನಗಿರಿ ತಾಲೂಕಿನ ಸೂಳೆಕೆರೆ ಗುಡ್ಡದಲ್ಲಿ ನಡೆದಿದ್ದ ಕೊಲೆ ಪ್ರಕರಣ ಬೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತುಂಗಾ ಶ್ವಾನಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಸನ್ಮಾನಿಸಲಾಯಿತು.

Felicity for the dog
‘ಲೇಡಿಸಿಂಗಂ ತುಂಗಾ’ಗೆ ಸನ್ಮಾನ

ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್, ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ, ಐಜಿಪಿ ರವಿ ಸೇರಿದಂತೆ ಇತರೆ ಅಧಿಕಾರಿಗಳು ತುಂಗಾಳಿಗೆ ಹಾರ ಹಾಕಿ ಶಾಲು ಹೊದಿಸಿ ಸನ್ಮಾನಿಸಿದರು. ಈ ವೇಳೆ ಶ್ವಾನದ ಫೋಟೋ ಕ್ಲಿಕ್ಲಿಸಲು ಜನರು ನಾ ಮುಂದು, ತಾ ಮುಂದು ಎಂದು ಮುಗಿ ಬಿದ್ದರು. ಮತ್ತೆ ಕೆಲವರು ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು.

ತುಂಗಾ ಶ್ವಾನಗೆ ಸನ್ಮಾನಿಸಿದ ಸಚಿವ

ಕೊಲೆ, ದರೋಡೆ, ಕಳ್ಳತನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸುವ ಮೂಲಕ ದಾವಣಗೆರೆಯ ಲೇಡಿ ಸಿಂಗಂ ಎಂದೇ ತುಂಗಾ ಖ್ಯಾತಿ ಪಡೆದಿದ್ದಾಳೆ.

Last Updated : Aug 15, 2020, 11:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.