ದಾವಣಗೆರೆ: ಏಷ್ಯಾದ ಎರಡನೇ ಅತಿದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸೂಳೆಕೆರೆಯ ಪಕ್ಕದ ರಸ್ತೆ ವಿಸ್ತರಣೆ ಕಾಮಗಾರಿ ಸಂದರ್ಭದಲ್ಲಿ ಸ್ಫೋಟಕ ಬಳಸಿದ ಪರಿಣಾಮ ಅದರ ತೀವ್ರತೆಗೆ ಕಲ್ಲುಮಣ್ಣು ಕೆರೆಗೆ ಚಿಮ್ಮಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಿಲ್ಲೆಯ ಚನ್ನಗಿರಿ ತಾಲೂಕಿನ ಸೂಳೆಕೆರೆ ಪಕ್ಕದಲ್ಲೇ ಇರುವ ರಸ್ತೆಯ ವಿಸ್ತರಣೆ ಕಾಮಗಾರಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸ್ಫೋಟಕ ಬಳಸಲಾಯಿತು. ಕೆರೆಯ ಪಕ್ಕದಲ್ಲಿಯೇ ಈ ರೀತಿಯ ಸ್ಫೋಟಕ ಬಳಸಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಈಗಾಗಲೇ ಒತ್ತುವರಿಯಿಂದ ನಲುಗಿರುವ ಕೆರೆ, ಸ್ಫೋಟಕ ಬಳಕೆಯಿಂದ ಕೆರೆ ಕೆನಾಲ್‌ಗೆ ಹಾನಿಯಾಗುವ ಭೀತಿ ಮೂಡಿದೆ. ಸ್ಫೋಟಕಗಳ ಬದಲು ಜೆಸಿಬಿ ಯಂತ್ರ ಬಳಸಲು ಸ್ಥಳೀಯರು ಹಾಗೂ ನೆಟ್ಟಿಗರು ಆಗ್ರಹಿಸಿದ್ದಾರೆ.